ಮೈಸೂರು: ಹೈದರಾಬಾದ್ನಲ್ಲಿ ನಿನ್ನೆ ನಡೆದ ಪಶುವೈದ್ಯೆ ಅತ್ಯಾಚಾರಿ ಹಾಗೂ ಕೊಲೆ ಆರೋಪಿಗಳ ಎನ್ಕೌಂಟರ್ ತಪ್ಪು ಎಂದವರ ವಿರುದ್ಧ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮೇನಕಾ ಗಾಂಧಿ, ಕಾರ್ತಿಕ ಚಿದಂಬರಂ ಹಾಗೂ ಕೇಜ್ರಿವಾಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೈದರಾಬಾದ್ ಪೋಲಿಸರ ಕ್ರಮ ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.