ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ನ.15ರೊಳಗೆ ತರ್ಜುಮೆ: ಪ್ರೊ.ಸಿ.ಜಿ.ವೆಂಕಟೇಶಮೂರ್ತಿ - ಮೈಸೂರು ಜಿಲ್ಲೆ ಸುದ್ದಿ

ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಶಿಕ್ಷಣ ನೀತಿ-2020 ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಎಲ್ಲ ಭಾಷಿಕರಿಗೆ ಅನುಕೂಲವಾಗಲೆಂದು ಆಯಾಯ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುತ್ತಿದೆ ಎಂದು ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ ತಿಳಿಸಿದರು.

Bharatiya Bhasha samstana
ಭಾರತೀಯ ಭಾಷಾ ಸಂಸ್ಥಾನ
author img

By

Published : Nov 3, 2020, 4:16 PM IST

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ ಕರಡನ್ನು ಆಯಾಯ ಭಾಷೆಗಳಿಗೆ ನವೆಂಬರ್ 15ರೊಳಗೆ ತರ್ಜುಮೆ ಮಾಡಿ ಮಾಡಲಾಗುವುದು. ಇದರಿಂದ ದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು 17 ಭಾಷೆಗೆ ಭಾಷಾಂತರ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಶಿಕ್ಷಣ ನೀತಿ-2020 ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಎಲ್ಲ ಭಾಷಿಕರಿಗೆ ಅನುಕೂಲವಾಗಲೆಂದು ಆಯಾಯ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲಾಗುತ್ತಿದೆ ಎಂದರು.

ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ

ಈಗಾಗಲೇ ಸಿಐಐಎಲ್ ಸಂಸ್ಥೆಯು ಶಿಕ್ಷಣ ನೀತಿಯನ್ನು ಒರಿಯಾ, ಬೆಂಗಾಲಿ, ಮಲೆಯಾಳಂ, ಡೋಂಗ್ರಿ, ಮಣಿಪುರಿ, ಪಂಜಾಬಿ, ಗುಜರಾತಿ, ಬೋಡೊ, ಮೈಥಿಲಿ, ನೇಪಾಳಿ, ಅಸ್ಸೋಂ, ಸಂತಾಲಿ,‌ ತೆಲುಗು, ಕನ್ನಡ, ಮರಾಠಿ,‌ ಕೊಂಕಣಿ, ಕಾಶ್ಮೀರಿ ಭಾಷೆಗಳಲ್ಲಿ ಭಾ಼ಷಾಂತರ ಮಾಡಲಾಗಿದೆ. ಮಲೆಯಾಳಂ, ಗುಜರಾತಿ ಭಾಷಾಂತರ ಕಾರ್ಯ ಪೂರ್ಣಗೊಂಡು ಮುದ್ರಣಕ್ಕೆ ಸಿದ್ದವಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.