ETV Bharat / state

ಮೈಸೂರು ದಸರಾ.. ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ನಾಡಹಬ್ಬ ಮೈಸೂರು ದಸರಾಕ್ಕೆ ಸಾಂಪ್ರದಾಯಿಕ ಚಾಲನೆ ದೊರೆತಿದ್ದು, ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ವೈಭವದಿಂದ ಆರಂಭವಾಗಿದೆ.

Private Durbar Begins At Mysore Palace
ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ಯದುವೀರ್​
author img

By

Published : Sep 26, 2022, 1:08 PM IST

Updated : Sep 26, 2022, 1:29 PM IST

ಮೈಸೂರು: ಶರನ್ನವರಾತ್ರಿಯ ಪ್ರಮುಖ ಆಕರ್ಷಣೆಯಾದ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಯದುವಂಶದ ಉತ್ತರಾಧಿಕಾರಿ ಹಾಗೂ ಪ್ರಮೋದಾದೇವಿ ಅವರ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು.

Private Durbar Begins At Mysore Palace
ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ಯದುವೀರ್​

ಅರಮನೆಯ ರಾಜ ವಂಶಸ್ಥರು, ಯದು ವಂಶದ ಸಾಂಪ್ರದಾಯದಂತೆ ನವರಾತ್ರಿಯ ಮೊದಲ ದಿನ ಇಂದು ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್​ನಲ್ಲಿ ಇರುವ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ಖಾಸಗಿ ದರ್ಬಾರ್ ನಡೆಸಿದರು.

ಅರಮನೆಯಲ್ಲಿ ಖಾಸಗಿ ದರ್ಬಾರ್

ಬೆಳಗ್ಗೆ ಶುಭ ಮುಹೂರ್ತದಲ್ಲಿ ಅರಮನೆಯಲ್ಲಿ ಹೋಮ ಹವನಗಳನ್ನು ನಡೆಸಿದ ಯದುವೀರ್ ನವರರಾತ್ರಿಯ ಕಂಕಣ ಧಾರಣೆ ಮಾಡಿ ನಂತರ ಅರಮನೆಯಲ್ಲಿ ಖಾಸಗಿ ದರ್ಬಾರ್​​ನ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿರು. ಬಳಿಕ 12.15 ರಿಂದ 12.25 ವರೆಗಿನ ಶುಭ ಗಳಿಗೆಯಲ್ಲಿ ರತ್ನಖಚಿತ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸಿದರು. ನಂತರ 33 ದೇವಾಲಯಗಳಿಂದ ಬಂದ ಪ್ರಸಾದ ಹಾಗೂ ತೀರ್ಥ ಸೇವನೆ ಮಾಡಿದರು. ಬಳಿಕ ಅರಮನೆ ಆನೆಗಳು, ಕುದುರೆ, ಹಸು, ಒಂಟೆಗಳೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ರಾಷ್ಟ್ರಪತಿಗೆ ಮೈಸೂರು ರೇಷ್ಮೆ ಸೀರೆ ಗಿಫ್ಟ್.. ಅದೇ ಸೀರೆ ಧರಿಸಿ ದಸರಾ ಉದ್ಘಾಟಿಸಿದ ಮುರ್ಮು

Last Updated : Sep 26, 2022, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.