ETV Bharat / state

ರಾಷ್ಟ್ರಪತಿಯಿಂದ ಮೈಸೂರು ದಸರಾ ಉದ್ಘಾಟನೆ.. ಅಪ್ಪುಗೆ ಯುವ ದಸರಾ ಮೀಸಲು

ಸೆಪ್ಟೆಂಬರ್ 26 ರಂದು ಶುಭ ಲಗ್ನದಲ್ಲಿ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ. ದಸರಾ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಸೂರು ದಸರಾ ಉದ್ಘಾಟನೆ
ಮೈಸೂರು ದಸರಾ ಉದ್ಘಾಟನೆ
author img

By

Published : Sep 17, 2022, 8:06 PM IST

ಮೈಸೂರು: ಈ ಬಾರಿ ನಾಡಹಬ್ಬ ದಸರಾವನ್ನು ಸೆ.26 ರ ಸೋಮವಾರದಂದು 9.45 ರಿಂದ 10.04 ವರೆಗಿನ ಶುಭ ಲಗ್ನದಲ್ಲಿ ಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೊತೆಗೆ ನಾಡಹಬ್ಬ ದಸರಾದ ವಿವಿಧ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಮಾಡಿ ಅವುಗಳ ವಿವರ ನೀಡಿದರು.

ರಾಷ್ಟ್ರಪತಿಯಿಂದ ಮೈಸೂರು ದಸರಾ ಉದ್ಘಾಟನೆ: ಅದ್ಧೂರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಂದು ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ರಾಷ್ಟ್ರಪತಿ ಅವರು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದರಿಂದ ಆಹ್ವಾನ ಪತ್ರಿಕೆಯಲ್ಲಿ ಮೊದಲ‌ ದಿನದ ಕಾರ್ಯಕ್ರಮದ ವಿವರವನ್ನು ಕನ್ನಡದ ಜೊತೆಗೆ ಇಂಗ್ಲಿಷ್​ನಲ್ಲೂ ಮುದ್ರಿಸಲಾಗುತ್ತದೆ. ಸೆಪ್ಟೆಂಬರ್ 23 ರಿಂದ 25 ರವರೆಗೆ 3 ದಿನಗಳ ಕಾಲ ರೈತ ದಸರಾ ಮತ್ತು ಗ್ರಾಮೀಣ ದಸರಾ ನಡೆಯಲಿದ್ದು, ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ಪಶುಸಂಗೋಪನಾ ಸಚಿವರು ಭಾಗಿಯಾಗಲಿದ್ದಾರೆ ಎಂದರು.

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ ಮಾಡಿ, ನಿತ್ಯ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ 900 ಕಲಾವಿದರು ಅರ್ಜಿ ಸಲ್ಲಿಸಿದ್ದು, ಸ್ಥಳೀಯ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ 280 ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಅಪ್ಪುಗೆ ಯುವ ದಸರಾ ಮೀಸಲು: 4 ದಿನಗಳ ಕಾಲ ನಡೆಯುವ ಕವಿಗೋಷ್ಠಿ ಸೆಪ್ಟೆಂಬರ್ 26ರಂದು ಉದ್ಘಾಟನೆ ಆಗಲಿದೆ‌. ಯೋಗ ದಸರಾ ಏಳು ದಿನಗಳ ಕಾಲ ನಡೆಯಲಿದೆ. ಆಹಾರ ಮೇಳ ಹತ್ತು ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ 27 ರಂದು ಯುವ ದಸರಾ ಆರಂಭವಾಗಲಿದೆ. ಒಟ್ಟು ಏಳು ದಿನಗಳ ಯುವ ದಸರಾದಲ್ಲಿ ಒಂದು ದಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್​​ಗೆ ಮೀಸಲೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸೆಪ್ಟೆಂಬರ್ 27 ರಿಂದ ಐದು ದಿನಗಳ ಕಾಲ ಮಹಿಳಾ ದಸರಾ, ಸೆಪ್ಟೆಂಬರ್ 29 ಮತ್ತು 30 ರಂದು ಮಕ್ಕಳ ದಸರಾ ನಡೆಯಲಿದೆ. ಸೆಪ್ಟೆಂಬರ್ 26 ರಿಂದ 29ರ ವರೆಗೆ ದಸರಾ ಕ್ರೀಡಾಕೂಟ, ಸೆಪ್ಟೆಂಬರ್ 26 ರಿಂದ ಏಳು ದಿನ ಚಲನ ಚಿತ್ರೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರಪತಿ ಭೇಟಿ ಹಿನ್ನೆಲೆ: ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಯಾರು ಇರಬೇಕೆಂದು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಶಾಸಕರು, ಸಚಿವರಿಗೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ರಾಷ್ಟ್ರಪತಿ ಕಚೇರಿಯ ತೀರ್ಮಾನ ಅಂತಿಮವಾಗುತ್ತದೆ.

ಈ ಹಿಂದೆ 43 ಜನರು ವೇದಿಕೆಯಲ್ಲಿರುತ್ತಿದ್ದರು. ಈ ಬಾರಿ ಕೇವಲ 10 ಜನರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಎನ್ನುತ್ತಿದ್ದಾರೆ. ನಾವು ಒಟ್ಟು 49 ಜನರ ಮಾಹಿತಿಯನ್ನು ರಾಷ್ಟ್ರಪತಿ ಕಚೇರಿಗೆ ಕಳುಹಿಸಿದ್ದು, ಮುಂದಿನ ನಿರ್ಧಾರ ಅವರದ್ದೇ ಆಗಿದೆ ಎಂದರು.

ದಸರಾ ಗೋಲ್ಡ್ ಕಾರ್ಡ್: ದಸರಾ ಗೋಲ್ಡ್ ಕಾರ್ಡ್ ಕೊಡಬೇಕೆಂಬ ಒತ್ತಡ ಬಂದಿರುವ ಕಾರಣ ಅರಮನೆಯಲ್ಲಿ ದಸರಾ ವೀಕ್ಷಣೆ ಹಾಗೂ ಪಂಚಿನ ಕವಾಯತು ಮೈದಾನಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಷ್ಟು ಪಾಸ್ ಕೊಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ದಸರಾ ಉದ್ಘಾಟನೆಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ.

ಈ‌ ಬಾರಿಯ ದಸರಾ ಪಾಸ್​​ನಲ್ಲಿ ಯಾವುದೇ ಗೊಂದಲ ಆಗುವುದಿಲ್ಲ. ಎಂಎಲ್ಎ, ಎಂಎಲ್​​ಸಿ, ಎಂಪಿ, ಪಾಲಿಕೆ ಸದಸ್ಯರಿಗೆ ಎಷ್ಟು ಪಾಸ್ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಅವರು ಕೇಳಿದಷ್ಟು ಪಾಸ್ ಕೊಡುವುದಿಲ್ಲ ಜೊತೆಗೆ ನನ್ನ ಕ್ಷೇತ್ರದ ಜನರಿಗೆ ಪಾಸ್ ಕೊಡುವುದಿಲ್ಲ. ನಾನು ಈಗಾಗಲೇ ನನ್ನ ಕ್ಷೇತ್ರದ ಜನರಿಗೆ ದಸರಾ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳ ಪಾಸ್ ಕೇಳಬೇಡಿ ಎಂದು ಹೇಳಿದ್ದೇನೆ. ಹಿಂದೆ ಏನೆಲ್ಲ ಗೊಂದಲಗಳಾಗಿದೆ ಎಂಬುದು ನನಗೆ ತಿಳಿದಿದೆ. ಈ ವಿಚಾರದಲ್ಲಿ ನಾನು ತಪ್ಪಿತಸ್ಥನಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ದಸರಾ ಉಪ ಸಮಿತಿ: ಇನ್ನೂ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ 17 ಉಪ ಸಮಿತಿಗಳನ್ನು ರಚಿಸಲಾಗಿದೆ. ಉಪಸಮಿತಿಗಳಿಗೆ ಅಧಿಕಾರೇತರರನ್ನು ನೇಮಿಸಲು ಸಂಸದರು, ಶಾಸಕರು ಇದುವರೆಗೆ ಪಟ್ಟಿಯನ್ನು ನೀಡಿಲ್ಲ. ಈ ವಿಚಾರದಲ್ಲಿ ನನಗೆ ಮಾಹಿತಿಯಿಲ್ಲ. ಸಂಸದರು, ಶಾಸಕರು ಪಟ್ಟಿ ನೀಡಿದರೆ ಉಪ ಸಮಿತಿಗಳಿಗೆ ಸದಸ್ಯರನ್ನು ನೇಮಿಸಲಾಗುವುದು.

ಸಂಸದರು, ಶಾಸಕರು ಹೇಳಿದರೆ ಯಾರನ್ನು ಬೇಕಾದರೂ ದಸರಾ ಉಪ ಸಮಿತಿಗಳಿಗೆ ನೇಮಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.

(ಇದನ್ನೂ ಓದಿ: ಮೈಸೂರು ದಸರಾ.. ಯುವ ಸಂಭ್ರಮಕ್ಕೆ ಚಾಲನೆ ನೀಡಿದ‌ ನಟ ಡಾಲಿ ಧನಂಜಯ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.