ETV Bharat / state

ಬಸ್​ ನಿಲ್ದಾಣದ ಗುಂಬಜ್​ಗಳನ್ನು ನಾನೇ ಜೆಸಿಬಿಯಿಂದ ಒಡೆದು ಹಾಕುತ್ತೇನೆ: ಸಂಸದ ಪ್ರತಾಪ್ ಸಿಂಹ - ಜೆಸಿಬಿ ತಂದು ಹೊಡೆದು ಹಾಕುತ್ತೇನೆ

ಮೈಸೂರಿನ ಬಸ್​ ನಿಲ್ದಾಣದಲ್ಲಿ ಗುಂಬಜ್​ ರೀತಿಯ ನಿರ್ಮಾಣ ಮಾಡಿರುವುದು ಸಾಮಾಜಿಕ ಜಾಲತಾಣದಿಂದ ತಿಳಿದು ಬಂದಿದೆ. ಅದರ ತೆರೆವಿಗೆ ಈಗಾಗಲೇ ಆದೇಶಿಸಿದ್ದೇನೆ. ತೆರವು ಮಾಡದಿದ್ದರೆ ನಾನೇ ಜೆಸಿಬಿ ತಂದು ತೆರವು ಮಾಡುತ್ತೇನೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

Pratap Simha viral statement
ಪ್ರತಾಪ್ ಸಿಂಹ
author img

By

Published : Nov 14, 2022, 5:17 PM IST

Updated : Nov 14, 2022, 10:20 PM IST

ಮೈಸೂರು: ಇಲ್ಲಿ ಬಸ್ ನಿಲ್ದಾಣಗಳು ಗುಂಬಜ್ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಕೂಡಲೇ ಇವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ನಾನೇ ಜೆಸಿಬಿ ತಂದು ಒಡೆದು ಹಾಕುತ್ತೇನೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಮಾತು ಈಗ ವೈರಲ್ ಆಗಿದೆ.

ಭಾನುವಾರ ಸಂಜೆ ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರಿಗೆ ಮಹಾರಾಜರು ಅಡಿಪಾಯ ಹಾಕಿಕೊಟ್ಟಿದ್ದು ಇಲ್ಲಿ ನಾಡಹಬ್ಬ ದಸರಾ, ಚಾಮುಂಡಿ ತಾಯಿ ಭಕ್ತಿಯ ಆಶೀರ್ವಾದದ ಮೇಲೆ ಆಳ್ವಿಕೆ ನಡೆಯಬೇಕು. ಎಲ್ಲ ಸಂಕೇತಗಳು ಕೂಡ ಚಾಮುಂಡಿ ತಾಯಿಯ ಭಕ್ತಿ ಸೂಚಕವಾಗಿರಬೇಕು ಎಂದರು.

ಬಸ್​ ನಿಲ್ದಾಣದ ಗುಂಬಜ್​ಗಳನ್ನು ನಾನೇ ಜೆಸಿಬಿಯಲ್ಲಿ ಒಡೆಸುತ್ತೇನೆ: ಸಂಸದ ಪ್ರತಾಪ್​ ಸಿಂಹ

ನಾನು ಸಾಮಾಜಿಕ ಜಾಲತಾಣಗಳನ್ನು ನೋಡಿದೆ. ಅಲ್ಲಿ ಯಾವುದೋ ಬಸ್ ನಿಲ್ದಾಣ ಗುಂಬಜ್ ಆಕಾರದಲ್ಲಿ ರಚನೆಯಿದ್ದು, ನಡುವೆ ದೊಡ್ಡ ಗುಂಬಜ್ ಅಕ್ಕಪಕ್ಕ ಎರಡು ಸಣ್ಣ ಗುಂಬಜ್ ಇವೆ. ಈ ರೀತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೂರು ದಿನಗಳಲ್ಲಿ ಅವುಗಳು ತೆರವು ಆಗದಿದ್ದರೆ ನಾನೇ ಜೆಸಿಬಿ ಮೂಲಕ ಅವುಗಳನ್ನು ಒಡೆದು ಹಾಕುತ್ತೇನೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ : ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಶಾಖೆ ತೆರೆಯಲು ಸರ್ಕಾರ ಅನುಮೋದನೆ

ಗುಂಬಜ್ ಮಾದರಿಯ ಬಸ್ ನಿಲ್ದಾಣ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಊಟಿ ರಸ್ತೆಯಲ್ಲಿರುವ ಜೆಎಸ್​ಎಸ್ ಕಾಲೇಜು ಬಳಿಯ ಬಸ್ ನಿಲ್ದಾಣದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಬಸ್ ನಿಲ್ದಾಣ ಮೇಲೆ ಗುಂಬಜ್ ವಿನ್ಯಾಸ ಇತ್ತು. ಈಗ ಗುಂಬಜ್ ಮೇಲೆ ಕಳಸ ಇಟ್ಟಿರುವ ರೀತಿ ವಿನ್ಯಾಸ ಮಾಡಿರುವುದು ಕಂಡುಬಂದಿದೆ ಎನ್ನಲಾಗುತ್ತಿದೆ.

Last Updated : Nov 14, 2022, 10:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.