ETV Bharat / state

ಸದ್ಯಕ್ಕೆ ಬೆಂಗಳೂರು-ಮೈಸೂರು ಹೈವೇ ಟೋಲ್ ಹೆಚ್ಚಳ ಬೇಡ : ಸಂಸದ ಪ್ರತಾಪ್ ಸಿಂಹ ಮನವಿ - ಹೈವೇ ಟೋಲ್ ಹೆಚ್ಚಳ

ಬೆಂಗಳೂರು - ಮೈಸೂರು ಎಕ್ಸ್​ಪ್ರೆಸ್ ಹೈವೇ ಟೋಲ್ ಹೆಚ್ಚಳ ಮಾಡುವುದು ಬೇಡ, ತಾತ್ಕಾಲಿಕವಾಗಿ ತಡೆಯಿರಿ ಎಂದು ಹೈವೇ ನಿರ್ವಹಣಾ ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

pratap simha
ಪ್ರತಾಪ್ ಸಿಂಹ
author img

By

Published : Apr 1, 2023, 2:14 PM IST

ಮೈಸೂರು : ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗುವುದರಿಂದ ದೇಶದ ಎಲ್ಲಾ ಟೋಲ್ ರಸ್ತೆಗಳ ದರ ಹೆಚ್ಚಾಗಲಿದೆ. ಆದರಂತೆ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್ ಹೈವೇ ದರ ಹೆಚ್ಚಾಗುತ್ತದೆ. ಆದರೆ, ಈ ಎಕ್ಸ್​ಪ್ರೆಸ್ ಹೈವೇಗೆ ಟೋಲ್ ಆರಂಭವಾಗಿ ಹದಿನೈದು ದಿನ ಮಾತ್ರ ಆಗಿದೆ. ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಆದ್ದರಿಂದ ಟೋಲ್ ಹೆಚ್ಚಳ ಮಾಡುವುದು ಬೇಡ, ತಾತ್ಕಾಲಿಕವಾಗಿ ತಡೆಯಿರಿ ಎಂದು ಹೈವೇ ನಿರ್ವಹಣಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು - ಮೈಸೂರು ನಡುವಿನ ದಶಪಥ ಹೆದ್ದಾರಿಯಲ್ಲಿ ಟೋಲ್ ಹೆಚ್ಚಳ ಮಾಡಿದ್ದಾರೆ ಎಂದು ಜನ ಆಕ್ರೋಶಗೊಂಡಿದ್ದು, ಈ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ನಿನ್ನೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಇಂದು ಅದೇ ಲೈವ್ ಅನ್ನು ರಿಟ್ವೀಟ್ ಮಾಡಿ, ಟೋಲ್ ದರ ಜಾಸ್ತಿ ಯಾಕಾಗಿದೆ ಎಂಬ ಬಗ್ಗೆ ವಿವರಿಸಿದ್ದಾರೆ. ಸದ್ಯಕ್ಕೆ ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ, ಆದ್ದರಿಂದ ಈ ಒಂದು ಹೆದ್ದಾರಿಯ ಟೋಲ್ ದರ ಸದ್ಯಕ್ಕೆ ಹೆಚ್ಚಳ ಮಾಡಬೇಡಿ, ತಾತ್ಕಾಲಿಕವಾಗಿ ತಡೆಹಿಡಿಯಿರಿ ಎಂದು ಹೈವೇ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಈಗ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಲೈವ್​ನಲ್ಲಿ ಪ್ರತಾಪ್ ಸಿಂಹ ಮಾತನಾಡಿದ್ದೇನು?: 'ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಜಾಸ್ತಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಅದರ ಬಗ್ಗೆ ನಿಖರವಾಗಿ ನಾನು ಹೇಳುತ್ತೇನೆ. ನಾವು ಮಾರ್ಚ್ 14 ಟೋಲ್ ಪ್ರಾರಂಭಿಸಿದಾಗ ಬೆಂಗಳೂರಿನಿಂದ ನಿಡಘಟ್ಟವರೆಗೆ 135 ರೂ. ನಿಗದಿ ಮಾಡಿದ್ದೇವು. ಈಗ ಅದನ್ನು 165 ರೂಪಾಯಿಗೆ ನಾಳೆಯಿಂದ ಹೆಚ್ಚಳ ಮಾಡಲಾಗುತ್ತದೆ, ಇದು ನಿಜವಾದ ಸಂಗತಿ. ಇಡೀ ದೇಶಾದ್ಯಂತ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಮತ್ತು ರಸ್ತೆ ಸಾರಿಗೆ ಇಲಾಖೆಯವರ ಅಡಿಯಲ್ಲಿ ಬರುವಂತಹ ಎಲ್ಲಾ ಟೋಲ್ ರಸ್ತೆಯಲ್ಲೂ ಕೂಡ 7 % ಗಿಂತ ಅಧಿಕ ಟೋಲ್ ಹೆಚ್ಚಳ ಮಾಡಲಾಗಿದೆ' ಎಂದರು.

'ಬೆಂಗಳೂರು ಮೈಸೂರು ಹೈವೇಗೆ ಮಾತ್ರ ಈ ಟೋಲ್ ದರ ಹೆಚ್ಚಳ ಸೀಮಿತವಾಗಿಲ್ಲ. ದೇಶಾದ್ಯಂತ ಎಲ್ಲಾ ಟೋಲ್ ರಸ್ತೆಗಳಲ್ಲಿ ದರ ಹೆಚ್ಚಳ ಶನಿವಾರದಿಂದ ಜಾರಿಗೆ ಬರಲಿದೆ. ಆದರೆ, ನಾವು ಮೈಸೂರು ಮತ್ತು ಬೆಂಗಳೂರು ನಡುವೆ ಟೋಲ್ ಪ್ರಾರಂಭ ಮಾಡಿ 15 ದಿನ‌ ಆಗಿದ್ದು, ಈಗ ಏಕಾಏಕಿಯಾಗಿ 165 ರೂಪಾಯಿಗೆ ಏರಿಸಲಾಗಿದೆ.ಇದನ್ನು ಒಂದು ರೀತಿಯಲ್ಲಿ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಆದರೆ, ಇದು ಸಹಜ ಪ್ರಕ್ರಿಯೆ. ಹೊಸ ಹಣಕಾಸಿನ ವರ್ಷ ಏಪ್ರಿಲ್ ಒಂದರಿಂದ ಜಾರಿಗೆ ಬರುವುದರಿಂದ ಹೆಚ್ಚಿನ ಟೋಲ್ ದರ ನಿಗದಿಯಾಗಿದೆ. ಮೈಸೂರು- ಬೆಂಗಳೂರು ರಸ್ತೆಗೆ 30 ರೂಪಾಯಿ ಹೆಚ್ಚು ಮಾಡಲಾಗಿದೆ' ಎಂದು ಸಂಸದ ಪ್ರತಾಪ್​ ಸಿಂಹ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಮುಳುಗಡೆ: ತುರ್ತು ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸಿದ NHAI

'ನಾನು ಎನ್​ಹೆಚ್​ಎಐ ಚೇರ್ಮನ್​ಗೆ, ಪ್ರಾಜೆಕ್ಟ್ ಡೈರೆಕ್ಟರ್​ಗೆ, ಬೆಂಗಳೂರಿನಲ್ಲಿ ಇರುವ ಪ್ರಾದೇಶಿಕ ಆಫೀಸರ್ ವಿವೇಕ್ ಅವರ ಜೊತೆ ಮಾತನಾಡಿದ್ದೇನೆ. ಈ ಒಂದು ಟೋಲ್ ದರ ಹೆಚ್ಚು ಆಗುವುದು ಬೇಡ, ಇನ್ನೂ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ತಾತ್ಕಾಲಿಕವಾಗಿ ತಡೆಹಿಡಿಯಿರಿ ಎಂದು ಮನವಿ ಮಾಡಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ದಯವಿಟ್ಟು ಇದರ ಬಗ್ಗೆ ತಪ್ಪು ಅಭಿಪ್ರಾಯ ಬೇಡ. ಇದು ದೇಶದ ಎಲ್ಲಾ ಹೆದ್ದಾರಿಗಳಲ್ಲೂ ಹೆಚ್ಚಾಗಲಿದೆ' ಎಂದು ಸಂಸದರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.