ETV Bharat / state

ಎಚ್ ವಿಶ್ವನಾಥರಿಗೆ ತಲೆ ಸರಿ ಇಲ್ಲ: ಸಂಸದ ಪ್ರತಾಪ್ ಸಿಂಹ - ಎಚ್​ ವಿಶ್ವನಾಥ್​ಗೆ ತಲೆ ಸರಿಯಿಲ್ಲ ಪ್ರತಾಪ್​ ಸಿಂಹ

ರಾಜ್ಯದ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಿಸಲ್ಲ ಎಂದಿರುವ ಎಂಎಲ್​ಸಿ ಎಚ್​ ವಿಶ್ವನಾಥ್​ಗೆ ತಲೆ ಸರಿಯಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದ್ದಾರೆ.

pratap
pratap
author img

By

Published : May 5, 2021, 9:08 PM IST

Updated : May 5, 2021, 9:48 PM IST

ಮೈಸೂರು: ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಿಗೆ ತಲೆ ಸರಿ ಇಲ್ಲವೆಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಿಸಲ್ಲ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ, ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ನೀಡಲಿಲ್ಲ ಎಂದು ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ಹಗುರವಾಗಿ ಮಾತನಾಡಿದರೆ ಅದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಯಡಿಯೂರಪ್ಪ ಅವರು ಸ್ವತ: ಕೊರೊನಾ ಬಂದ ಸಂದರ್ಭದಲ್ಲಿ 5ನೇ ದಿನಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದರಿಂದ ಕೊರೊನಾ ಕರ್ಫ್ಯೂ ಘೋಷಣೆ ಮಾಡಿ ಪ್ರತಿ ಜಿಲ್ಲೆಗೂ ಉಸ್ತುವಾರಿಗಳನ್ನು ಕಳುಹಿಸಿದ್ದಾರೆ. ಜನರ ಕಷ್ಟವನ್ನು ನೋಡಿ ಕೆಲಸ ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರ, ಕೂಲಿ ಕಾರ್ಮಿಕರ, ಕಷ್ಟ-ಸುಖಗಳಿಗೆ ಸ್ಪಂದಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರತಾಪ್​ ಸಿಂಹ ಅವರು ವಿಶ್ವನಾಥ್​ಗೆ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ.. ಸಿಎಂಗೆ ಕಣ್ಣು ಕಾಣಿಸೋದಿಲ್ಲ, ಕಿವಿನೂ ಕೇಳಿಸಲ್ಲ, ನಿಮ್ಮನ್ನ ಕಟ್ಟಿಕೊಂಡು ನಾವೇನು ಮಾಡೋಣ : ಹೆಚ್​ ವಿಶ್ವನಾಥ್ ಕಿಡಿ

ರಾಜ್ಯದ ಬಗ್ಗೆ ಇಷ್ಟೊಂದು ಸಂವೇದನೆ ಇರುವ, ಜನರ ಬಗ್ಗೆ ಕಾಳಜಿ ತೋರುವ ಸಿಎಂಗೆ ಕಣ್ಣು ಕಾಣಿಸಲ್ಲ, ಕಿವಿ ಕೇಳಿಸಲ್ಲ ಎಂದು ಹೇಳುವ ವ್ಯಕ್ತಿಗೆ ತಲೆ ಸರಿ ಇಲ್ಲ ಎಂದರ್ಥ ಎಂದು ಸಂಸದರು ಗರಂ ಆದರು.

ಎಚ್​ ವಿಶ್ವನಾಥ್​ಗೆ ಸಂಸದ ಪ್ರತಾಪ್​ ಸಿಂಹ ಟಾಂಗ್​

ನಿಮ್ಮ ಹಿರಿತನಕ್ಕೆ ಶೋಭೆ ತರಲ್ಲ..

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪದೇ ಪದೇ ಹೀಯಾಳಿಸುವುದು ಎಚ್. ವಿಶ್ವನಾಥರಿಗೆ ಒಳಿತಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಇದೇ ವೇಳೆ ಎಚ್ಚರಿಕೆ ನೀಡಿದರು.

ಪದೇಪದೇ ರಾಜ್ಯದ ಮುಖ್ಯಮಂತ್ರಿ ಬಗ್ಗೆ ಹಗುರವಾಗಿ ಮಾತನಾಡುವುದು, ನಿಮ್ಮ (ವಿಶ್ವನಾಥ್) ಹಿರಿತನದ ಅನುಭವಕ್ಕೆ ಶೋಭೆ ತರುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ನಿಲ್ಲಬೇಡಿ, ನಿಮ್ಮನ್ನು ಮಂತ್ರಿ ಮಾಡುವೆ ಅಂತ ಸಿಎಂ ಬಿಎಸ್​ವೈ ಹೇಳಿದ್ದರು. ಆದರೂ ನೀವು ಅವರ ಮಾತು ಕೇಳದೆ ಚುನಾವಣೆಯಲ್ಲಿ ನಿಂತು ಸೋತಿರಿ. ಆದರೂ ನಿಮ್ಮನ್ನು ಎಂಎಲ್ಸಿ ಮಾಡಿ, ನ್ಯಾಯಾಲಯದ ಆದೇಶ ಪಾಲಿಸಿದ್ದಾರೆ. ಸಿಎಂ ಯಾರ ಬಗ್ಗೆಯೂ ಕೆಟ್ಟ ಪದ ಬಳಸಿಲ್ಲ, ಯಾರ ಮನಸ್ಸಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ. ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಅಂತವರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದರು.

ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು‌ ಎಂದು ಶಾಸಕ ರೇಣುಕಾಚಾರ್ಯ ಯಾಕೆ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ಸುಧಾಕರ್ 24*7 ಕೆಲಸ ಮಾಡುತ್ತಿದ್ದಾರೆ. ಆಕ್ಸಿಜನ್ ಕೊರತೆ ಹಾಗೂ ಸುಧಾಕರ್ ಅವರಿಗೆ ಸಂಬಂಧವಿಲ್ಲ. ಅವರ ಮೇಲಿನ ಒತ್ತಡ ಕಡಿಮೆ ಮಾಡಲು ನಮ್ಮೆಲ್ಲರಿಗೆ ಸಿಎಂ ಜವಾಬ್ದಾರಿ ಹಂಚಿದ್ದಾರೆ ಎಂದು ಸಚಿವ ಸೋಮಶೇಖರ್​ ತಿಳಿಸಿದರು.

Last Updated : May 5, 2021, 9:48 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.