ಮೈಸೂರು: ಇಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ 37 ಜನ ರೌಡಿ ಶೀಟರ್ಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ರೌಡಿಗಳನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ದಾಳಿ ವೇಳೆ ರೌಡಿ ಶೀಟರ್ ಸಲೀಂ ಎಂಬುವವರ ಮನೆಯಲ್ಲಿ ಮೂರು ಮಚ್ಚುಗಳು ಹಾಗೂ ಮತ್ತೊಬ್ಬನ ಮನೆಯಲ್ಲಿ ಒಂದು ಚಾಕು ದೊರೆತಿದೆ. ವಿಚಾರಣೆ ವೇಳೆ ಕೆಲವರು ರೌಡಿ ಶೀಟರ್ಗಳು ಗ್ಯಾಂಗ್ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಲವು ರೌಡಿ ಶೀಟರ್ಗಳು ಮರ್ಡರ್ ಮತ್ತು ಕೊಲೆ ಪ್ರಯತ್ನ ಮಾಡಿದ ಕೇಸ್ಗಳಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ.
ಮೈಸೂರು ನಗರದಲ್ಲಿ 900ಕ್ಕೂ ಹೆಚ್ಚೂ ರೌಡಿ ಶೀಟರ್ಗಳಿದ್ದು, ಅದರಲ್ಲಿ ವಯಸ್ಸಾದವರು, ಹಳೆ ರೌಡಿಗಳು, ರೌಡಿಸಂ ಬಿಟ್ಟಿರುವವರು ಮತ್ತು ಕೆಲವರು ಸತ್ತು ಹೋಗಿದ್ದಾರೆ. ಸದ್ಯ 37 ಜನ ರೌಡಿ ಶೀಟರ್ಗಳು ಮಾತ್ರ ಆ್ಯಕ್ಟಿವ್ ಆಗಿದ್ದಾರೆ. ಇವರುಗಳನ್ನು ಇಂದು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆ ಭೇದಿಸಿದ ಪೊಲೀಸರು.. ತಮಿಳುನಾಡಿನ ಇಬ್ಬರು ಪೆಡ್ಲರ್ಗಳ ಬಂಧನ