ETV Bharat / state

ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದಕ್ಕೆ ಮೈಮರೆತ ಮೈಸೂರು! - Mysore Dasara 2020

ದಸರಾ ನಿಮಿತ್ತ ಅರಮನೆ ಆವರಣದಲ್ಲಿ ಇಂದು ಇಳಿ ಸಂಜೆಯ ಹೊತ್ತು ಆಯೋಜಿಸಿದ್ದ ಪೊಲೀಸ್‌ ಬ್ಯಾಂಡ್‌ ಸಮೂಹ ವಾದ್ಯಮೇಳ ಅಲ್ಲಿ ನೆರೆದವರ ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಮುದ ನೀಡಿತು. ಹಲವಾರು ಸುಪ್ರಸಿದ್ಧ ಕೃತಿಗಳನ್ನು ಪ್ರಸ್ತುತ ಪಡಿಸಿದ ಕರ್ನಾಟಕ ಹಾಗೂ ಆಂಗ್ಲ ವಾದ್ಯ ವೃಂದದವರಿಗೆ ನೆರೆದಿದ್ದ ಅತಿಥಿ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

Police Band Mesmerises Public At Palace
ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ
author img

By

Published : Oct 22, 2020, 10:49 PM IST

ಮೈಸೂರು: ಝಗಮಗಿಸುವ ಹೊಂಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದ ಅರಮನೆಯ ಆವರಣದಲ್ಲಿ ಅಲೆ ಅಲೆಯಾಗಿ ತೇಲಿಬಂದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತ ಸುಧೆಗೆ ಕೇಳುಗರ ಮನಸೋತರು.

Police Band Mesmerises Public At Palace
ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ

ನಾಡಹಬ್ಬ ದಸರಾ ನಿಮಿತ್ತ ಅರಮನೆ ಆವರಣದಲ್ಲಿ ಗರುವಾರ ಆಯೋಜಿಸಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವಾದ ಪೊಲೀಸ್‌ ಬ್ಯಾಂಡ್‌ ಸಮೂಹ ವಾದ್ಯಮೇಳದಲ್ಲಿ ಶಿಸ್ತುಬದ್ಧವಾಗಿ ನುಡಿಸಿದ ಪೊಲೀಸ್ ವಾದ್ಯವೃಂದವು ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.

Police Band Mesmerises Public At Palace
ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ

ಮೊದಲಿಗೆ ಬಸಪ್ಪಶಾಸ್ತ್ರಿ ಅವರ ರಚನೆಯ 'ಕಾಯೋ ಶ್ರೀ ಗೌರಿ' ಗೀತೆಯನ್ನು ನುಡಿಸಿದರು. ನಂತರ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ರಚನೆಯ ಆಠಾಣ ರಾಗ ಸಂಯೋಜನೆಯ ಆದಿತಾಳದಲ್ಲಿ 'ಶ್ರೀ ಮಹಾಗಣಪತಿಂ' ಗೀತೆ ನುಡಿಸಿದರು.

Police Band Mesmerises Public At Palace
ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ

ಬಳಿಕ ಇಮ್ಯಾನುಯೆಲ್‌ ಫ್ರಾನ್ಸಿಸ್‌ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್‌, ಪಿಯಾನೊ ವಾದನ ಕಂಡು ಪ್ರೇಕ್ಷಕರು ಪರವಶರಾದರು. ಕರ್ನಾಟಕ ವಾದ್ಯವೃಂದದವರು ಆದಿಶಂಕರಚಾರ್ಯರು ರಚಿಸಿದ 'ಐಗಿರಿ ನಂದಿನಿ' ಗೀತೆಯನ್ನು ಪುನ್ನಾಗವರಾಳಿ ರಾಗದಲ್ಲಿ ಪ್ರಸ್ತುತ ಪಡಿಸಿದರು.

Police Band Mesmerises Public At Palace
ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ

ಆಪ್ತಮಿತ್ರ ಚಲನಚಿತ್ರ ಗೀತೆಯಾದ 'ಕಣಕಣದೆ ಶಾರದೆ' ಹಾಡು ಹಾಗೂ ಶಂಕರಾಭರಣ ರಾಗದಲ್ಲಿ ಮುತ್ತತ್ಯ ಭಾಗವತ್ ರಚನೆಯ 'ನೋಟು ಸ್ವರ' ಭಾಗ್ಯದ ಲಕ್ಷ್ಮಿ ಬಾರಮ್ಮ ನುಡಿಸುವ ಮೂಲಕ ಮೋಡಿ ಮಾಡಿದರು.

Police Band Mesmerises Public At Palace
ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ

ಆಂಗ್ಲ ವಾದ್ಯವೃಂದವರು ಟೋನಿ ಮ್ಯಾಥ್ಯೂ ಸಂಯೋಜನೆಯ ಫೈನಲ್ ಕಾಂಟ್ ಡೌನ್, ಕೃಷ್ಟೊಫರ್ ಪ್ರಾನ್ಸಿಸ್ ಸಂಯೋಜನೆಯ ಸೆರನಡ್ ಗೀತೆ, ಬಿಥೊವೆನ್ಸ್ ಪಿಯಾನೋ ಸೋಲೊ, ಜಯ ಹೋ', ಟೋನಿ ಮ್ಯಾಥ್ಯೂ ಸಂಯೋಜನೆಯ ಬಿಲಿವರ್ ಹಾಗೂ ಲೇ ಆನ್ ಯುವರ್ ಲವ್ ಗೀತೆಗಳನ್ನು ನುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಸುಪ್ರಸಿದ್ಧ ಕೃತಿಗಳನ್ನು ಪ್ರಸ್ತುತ ಪಡಿಸಿದ ಕರ್ನಾಟಕ ಹಾಗೂ ಆಂಗ್ಲ ವಾದ್ಯವೃಂದದವರಿಗೆ ನೆರೆದಿದ್ದ ಅತಿಥಿ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.