ETV Bharat / state

ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ಮೈಸೂರಿನಿಂದ ಬಂಡೀಪುರದ ಕಡೆಗೆ ತೆರಳುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರ ಕಾರು ಅಪಘಾತಕ್ಕೀಡಾಗಿದೆ.

pm-modis-brother-car-accident-in-mysuru
ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ
author img

By

Published : Dec 27, 2022, 3:13 PM IST

Updated : Dec 27, 2022, 5:00 PM IST

ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್‌ ಮೋದಿ ಮತ್ತು ಕುಟುಂಬ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆಂಜ್​ ಕಾರು ಅಪಘಾತಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಬಂಡೀಪುರದ ಕಡೆಗೆ ತೆರಳುತ್ತಿದ್ದಾಗ ಮೈಸೂರು ತಾಲೂಕಿನ ಕಡಕೋಳದ ಬಳಿ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿತು ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಮೋದಿಯವರ ಸಹೋದರ 70 ವರ್ಷದ ಪ್ರಹ್ಲಾದ್ ಮೋದಿ, ಇವರ ಪುತ್ರ 40 ವರ್ಷದ ಮೇಹುಲ್ ಪ್ರಹ್ಲಾದ್ ಮೋದಿ ಮತ್ತು ಸೊಸೆ 35 ವರ್ಷದ ಜಿಂದಾಲ್ ಮೋದಿ ಹಾಗೂ ಮೊಮ್ಮಗ 6 ವರ್ಷ ಮೇನತ್ ಮೇಹುಲ್ ಮೋದಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಜೊತೆಗೆ ಚಾಲಕ ಸತ್ಯನಾರಾಯಣ ಸಹ ಇದ್ದರು.

ಈ ಘಟನೆಯಲ್ಲಿ ಎಲ್ಲರೂ ಗಾಯಗೊಂಡಿದ್ದು, ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಹ್ಲಾದ್ ಮೋದಿ ಅವರ ಗಲ್ಲದ ಭಾಗಕ್ಕೆ ಪೆಟ್ಟು ಬಿದ್ದಿದೆ. ಮಗ, ಸೊಸೆ ಮತ್ತು ಮೊಮ್ಮಗ ಮತ್ತು ಚಾಲಕ ಸತ್ಯನಾರಾಯಣ ಅವರಿಗೂ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ

ಪ್ರಾಣಾಪಾಯ ತಪ್ಪಿಸಿದ ಏರ್‌ಬ್ಯಾಗ್‌: ಪ್ರಹ್ಲಾದ್ ಮೋದಿ ಅವರ ಕುಟುಂಬ ಮರ್ಸಿಡಿಸ್​ ಬೆಂಜ್​ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಬಂಡೀಪುರಕ್ಕೆ ತೆರಳುತಿತ್ತು. ಈ ವೇಳೆ ರಸ್ತೆ ಮಧ್ಯೆ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆಯಿತು. ಅದೃಷ್ಟವಾಶತ್ ಕಾರಿನ ಬಲೂನ್​ಗಳು​ ತೆರೆದುಕೊಂಡಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೀಮಾ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.

ಯಾವುದೇ ಆತಂಕ ಬೇಡ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಸೇರಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೆಎಸ್​ಎಸ್ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಮಧು ತಿಳಿಸಿದ್ದಾರೆ. ಅಪಘಾತವಾಗಿ ಒಟ್ಟು ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಹ್ಲಾದ್ ಮೋದಿ ಮೊಮ್ಮಗ 6 ವರ್ಷದ ಬಾಲಕನ ತಲೆಯ ಎಡಭಾಗದ ಎಲುಬಿಗೆ ಪೆಟ್ಟಾಗಿದೆ. ಅವರೊಬ್ಬರಿಗೆ ಮಾತ್ರ ಹೆಚ್ಚು ಗಾಯಗಳಾಗಿವೆ. ಎಲ್ಲರಿಗೂ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದೆ. ಅತಿ ಹೆಚ್ಚು ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿಯನ್ನು ಸಚಿವರು ಶಾಸಕರು ಪಾಲಿಸುತ್ತಿದ್ದಾರಾ?.. ವಿಡಿಯೋ ನೋಡಿ

Last Updated : Dec 27, 2022, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.