ETV Bharat / state

ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಆರಂಭ: ಸಾರ್ವಜನಿಕರು ಭಾಗವಹಿಸುವಂತೆ ಮನವಿ - ನಾಲ್ಕು ಮೂಟೆ ಖಾಲಿ ಮದ್ಯದ ಬಾಟಲ್ ಸಂಗ್ರಹ

ಅರ್ಧ ಕಿಲೋ ಮೀಟರ್​ ಸ್ಥಳದಲ್ಲಿ ನಾಲ್ಕು ಚೀಲ ಮದ್ಯದ ಬಾಟಲ್​ಗಳು ಸಂಗ್ರಹ

Plastic free campaign started in Chamundi Hill
ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಆರಂಭ
author img

By

Published : Mar 4, 2023, 2:21 PM IST

ಮೈಸೂರು: ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು, ಅರಣ್ಯ ಇಲಾಖೆ ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟ ಅಭಿಯಾನಕ್ಕೆ ನಿನ್ನೆ ಚಾಲನೆ ನೀಡಿದೆ. ಈ ಅಭಿಯಾನ ಮಾರ್ಚ್ 21ರ ವರೆಗೆ ನಡೆಯಲಿದೆ. ಆಸಕ್ತ ಸಾರ್ವಜನಿಕರು, ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ನಾಡ ಅಧಿದೇವತೆಯ ವಾಸ ಸ್ಥಳ ಚಾಮುಂಡಿ ಬೆಟ್ಟಕ್ಕೆ ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇದಲ್ಲದೆ ಪ್ರತಿದಿನ ಸ್ಥಳೀಯರು ಸಹ ಚಾಮುಂಡಿ ಬೆಟ್ಟಕ್ಕೆ ಬಂದು, ದೇವಿಯ ದರ್ಶನ ಪಡೆದು ನಂತರ ಚಾಮುಂಡಿ ಬೆಟ್ಟದಲ್ಲಿ ಕುಳಿತು ತಿಂಡಿ ಹಾಗೂ ಪದಾರ್ಥಗಳನ್ನು ತಿಂದು ಅಲ್ಲೇ ಪ್ಲಾಸ್ಟಿಕ್ ಸೇರಿದಂತೆ ಇತರ ಪದಾರ್ಥಗಳನ್ನು ಎಸೆದು ಹೋಗುವುದು ಹೆಚ್ಚಾಗಿದೆ.

ಇದರ ಜೊತೆಗೆ ಗುಂಪು ಗುಂಪಾಗಿ ಯುವಕರು ಬಂದು ಚಾಮುಂಡಿ ಬೆಟ್ಟದ ಪರಿಸರದಲ್ಲಿ ಕುಳಿತು ಪಾರ್ಟಿ ಮಾಡಿ, ಖಾಲಿ ಮದ್ಯದ ಬಾಟಲ್​ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಚಾಮುಂಡಿ ಬೆಟ್ಟದ ಪರಿಸರ ಹಾಳಾಗುತ್ತಿದೆ. ಇದರ ಜೊತೆಗೆ ಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೂ ಕಿರಿಕಿರಿ ಆಗುತ್ತಿದೆ. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ನಿನ್ನೆ ವಿಶ್ವ ವನ್ಯಜೀವಿ ದಿನದಿಂದ, ಮಾರ್ಚ್ 21ರ ವಿಶ್ವ ಅರಣ್ಯ ದಿನದವರೆಗೆ, ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಆರಂಭಿಸಿದೆ. ಆಸಕ್ತ ಸಂಘ ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಸೇರಿದಂತೆ, ಇತರ ಆಸಕ್ತರು ಚಾಮುಂಡಿ ಬೆಟ್ಟವನ್ನು ತ್ಯಾಜ್ಯ ಮುಕ್ತಗೊಳಿಸುವ ಅಭಿಯಾನದಲ್ಲಿ ಭಾಗವಹಿಸುವಂತೆ ಅರಣ್ಯ ಇಲಾಖೆ ಕೇಳಿಕೊಂಡಿದೆ.

ಅರ್ಧ ಕಿ.ಮೀ ​ಗೆ ನಾಲ್ಕು ಮೂಟೆ ಖಾಲಿ ಮದ್ಯದ ಬಾಟಲ್ ಸಂಗ್ರಹ: ನಿನ್ನೆ ಶುಕ್ರವಾರ ಅರಣ್ಯ ಇಲಾಖೆಯ 12 ಮಂದಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಸಿಬ್ಬಂದಿ ಹಾಗೂ ಇತರ ಸಾರ್ವಜನಿಕರು ಚಾಮುಂಡಿ ಬೆಟ್ಟದ ಕೆಳಭಾಗದಿಂದ ತ್ಯಾಜ್ಯ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅರ್ಧ ಕಿಲೋ ಮೀಟರ್ ದೂರವನ್ನು 3 ಗಂಟೆಗಳಲ್ಲಿ ಸ್ವಚ್ಛಗೊಳಿಸಿದ್ದಾರೆ. ಈ ಅರ್ಧ ಕಿಮೀ. ನಲ್ಲೇ 34 ಚೀಲ ಕಸ ದೊರೆತಿದೆ. ಪ್ಲಾಸ್ಟಿಕ್ ಬಾಟಲ್, ತಿಂಡಿ ತಿನಿಸುಗಳ ಪೇಪರ್​ಗಳು, ಕವರ್​ಗಳು ಸೇರಿ 30 ಚೀಲ ಪ್ಲಾಸ್ಟಿಕ್ ಹಾಗೂ ನಾಲ್ಕು ಮೂಟೆ ಮದ್ಯದ ಖಾಲಿ ಬಾಟಲ್​ಗಳು ದೊರೆತಿವೆ ಎಂದು ವಲಯ ಅರಣ್ಯಾಧಿಕಾರಿ ಧನ್ಯಶ್ರೀ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಚಾಮುಂಡಿ ಬೆಟ್ಟದ ದೇವಾಲಯದ ಆವರಣವನ್ನು ಈಗಾಗಲೇ ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಲಾಗಿದ್ದು, ಇದರ ಜೊತೆಗೆ ಹಂತ ಹಂತವಾಗಿ ಇಡೀ ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ, ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಗೋದಾವರಿ ನದಿ ಶುಚಿತ್ವಕ್ಕೆ ವಿಶೇಷ ಅಭಿಯಾನ; ನದಿಯಲ್ಲಿ ಮೂಳೆ, ರಾಶಿಗಟ್ಟಲೆ ತ್ಯಾಜ್ಯ ಶೇಖರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.