ಮೈಸೂರು: ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಮಹಮ್ಮದ್ ಕಲೀಮುಲ್ಲಾ ಅವರನ್ನು ಎನ್.ಐ.ಎ ತಂಡದಿಂದ ವಶಕ್ಕೆ ಪಡೆಯುತ್ತಿದ್ದಂತೆ, ಅಶೋಕ್ ರಸ್ತೆಯಲ್ಲಿರುವ ಸಿಸಿಬಿ ಕಚೇರಿ ಮುಂದೆ ಜಮಾಯಿಸಿದ ಎಸ್ಎಫ್ಐ ಹಾಗೂ ಕಲೀಮುಲ್ಲಾ ಬೆಂಬಲಿಗರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಲೀಮುಲ್ಲಾ ಅವರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಕರೆದೊಯ್ದುವಾಗ, ಪೊಲೀಸ್ ಜೀಪನ್ನು ಪಿಎಫ್ಐ ಕಾರ್ಯಕರ್ತರು ಅಡ್ಡ ಹಾಕಿದರು. ಕಲೀಮುಲ್ಲಾ ಅವರನ್ನು ಪೊಲೀಸರು ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರೆದೊಯ್ದರು. ಬೆಂಗಳೂರಿನಲ್ಲಿರುವ ಎನ್.ಐ.ಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರು ತೆರಳಿದರು.
ಇದನ್ನೂ ಓದಿ: ಎನ್ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ: ಎಸ್ಡಿಪಿಐ ಆರೋಪ