ETV Bharat / state

ಎಷ್ಟೇ ಎಚ್ಚರಿಸಿದರೂ ಕೇಳದ ಜನ: ಪಾಲಿಕೆಯಿಂದ ಬಿತ್ತು ವಿತೌಟ್​ ಮಾಸ್ಕ್​ ದಂಡ - paid fines

ಮೈಸೂರು ಮಹಾನಗರ ಪಾಲಿಕೆಯು ಸೋಂಕು ತಡೆಗೆ ಕ್ರಮ ಕೈಗೊಂಡಿದ್ದು, ಮೇ1 ರಿಂದ ಮಾಸ್ಕ್ ಹಾಕಿಕೊಳ್ಳದೆ ಹೊರಗಡೆ ಬಂದರೇ 100 ರೂ. ದಂಡ ವಿಧಿಸುವುದಾಗಿ ಎಚ್ಚರಿಸಿತ್ತು. ಆದರೂ, ಸಾರ್ವಜನಿಕರು ಈ‌ ನಿಯಮವನ್ನು ಉಲ್ಲಂಘಿಸಿ ಮಾಸ್ಕ್ ಇಲ್ಲದೆ ಹೊರ ಬಂದಿದ್ದು, ಇವರಿಗೆ ದಂಡ ವಿಧಿಸಲಾಗಿದೆ.

ಪಾಲಿಕೆಯಿಂದ ಬಿತ್ತು ವಿತೌಟ್​ ಮಾಸ್ಕ್​ ದಂಡ
ಪಾಲಿಕೆಯಿಂದ ಬಿತ್ತು ವಿತೌಟ್​ ಮಾಸ್ಕ್​ ದಂಡ
author img

By

Published : May 1, 2020, 2:33 PM IST

ಮೈಸೂರು: ಮೇ. 1 ರಿಂದ ಮಾಸ್ಕ್ ಹಾಕಿಕೊಳ್ಳದೆ ಹೊರಬಂದರೆ ದಂಡ ವಿಧಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಎಚ್ಚರಿಸಿತ್ತು. ಆದರೆ ,ಈ ನಿಯಮವನ್ನು ಹಲವಾರು ಸಾರ್ವಜನಿಕರು ಉಲ್ಲಂಘಿಸಿದ್ದು, ಇದೀಗ ಅವರಿಗೆ ದಂಡ ವಿಧಿಸಲಾಗಿದೆ.

ಕೊರೊನಾದ ಹಾಟ್ ಸ್ಪಾಟ್ ಆಗಿರುವ ಮೈಸೂರಿಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯು ಸೋಂಕು ತಡೆಗೆ ಕ್ರಮ ಕೈಗೊಂಡಿದ್ದು, ಮೇ1 ರಿಂದ ಮಾಸ್ಕ್ ಹಾಕಿಕೊಳ್ಳದೆ ಹೊರಗಡೆ ಬಂದರೇ 100 ರೂ. ದಂಡ ವಿಧಿಸುವುದಾಗಿ ಎಚ್ಚರಿಸಿತ್ತು. ಹಾಗೆಯೇ ನಾಲ್ಕು ದಿನಗಳಿಂದ ಈ ಬಗ್ಗೆ ಜಾಗೃತಿಯನ್ನು ಸಹ ಮೂಡಿಸಿದ್ದರು. ಆದರೂ, ಸಾರ್ವಜನಿಕರು ಈ‌ ನಿಯಮವನ್ನು ಉಲ್ಲಂಘಿಸಿ ಮಾಸ್ಕ್ ಇಲ್ಲದೆ ಹೊರ ಬಂದಿದ್ದು, ಇವರಿಗೆ ದಂಡ ವಿಧಿಸಲಾಗಿದೆ.

ಪಾಲಿಕೆಯ ಆರೋಗ್ಯಾಧಿಕಾರಿಗಳ ತಂಡ ಹಾಗೂ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾಕ್ಟರ್ ನಾಗರಾಜ್ ನೇತೃತ್ವದಲ್ಲಿ ಇಂದು ಕಾರ್ಯಚರಣೆ ನಡೆಸಿ, ಒಂದೇ ದಿನದಲ್ಲಿ 167 ಜನರಿಗೆ ದಂಡ ವಿಧಿಸಲಾಗಿದೆ. ಇವರಿಂದ 16,700 ರೂಪಾಯಿ ದಂಡ ವಸೂಲಿಯಾಗಿದೆ. ಒಟ್ಟು ನಗರದಲ್ಲಿ ಮೈಸೂರು ನಗರ ಪಾಲಿಕೆಯಯಿಂದ 9 ತಂಡ ರಚನೆಯಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.