ETV Bharat / state

ನಂಜನಗೂಡಿನಲ್ಲಿ ಅಪರೂಪದ ಚಿಪ್ಪು ಹಂದಿ ರಕ್ಷಣೆ - ಈಟಿವಿ ಭಾರತ

ನಂಜನಗೂಡಿನ ಕಶ್ಯಪ್ ಎಂಬುವವರ ಮನೆಯ ಬಾವಿಯಲ್ಲಿದ್ದ ಅಪರೂಪದ ಚಿಪ್ಪು ಹಂದಿಯನ್ನು ಗೋಳೂರು ಸ್ನೇಕ್ ಬಸವರಾಜ ರಕ್ಷಣೆ ಮಾಡಿದ್ದಾರೆ.

pangolin rescued in nanjangud
ನಂಜನಗೂಡಿನಲ್ಲಿ ಅಪರೂಪದ ಚಿಪ್ಪು ಹಂದಿ ರಕ್ಷಣೆ
author img

By

Published : Apr 1, 2023, 8:04 PM IST

ನಂಜನಗೂಡಿನಲ್ಲಿ ಅಪರೂಪದ ಚಿಪ್ಪು ಹಂದಿ ರಕ್ಷಣೆ

ಮೈಸೂರು: ನಂಜನಗೂಡು ನಗರದ ರಾಘವೇಂದ್ರ ಸ್ವಾಮೀಜಿ ಮಠದ ಹಿಂಭಾಗದಲ್ಲಿರುವ ಕಶ್ಯಪ್ ಎಂಬುವವರ ಮನೆಯ ಬಾವಿಯಲ್ಲಿದ್ದ ಅಪರೂಪದ ಪ್ರಾಣಿ ಚಿಪ್ಪು ಹಂದಿಯನ್ನು ಗೋಳೂರು ಸ್ನೇಕ್ ಬಸವರಾಜ ರಕ್ಷಣೆ ಮಾಡಿದ್ದಾರೆ. ಬಾವಿಯಲ್ಲಿದ್ದ ಚಿಪ್ಪು ಹಂದಿಯನ್ನು ಕಂಡ ಮನೆಯವರು, ಗೋಳೂರು ಸ್ನೇಕ್ ಬಸವರಾಜ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಗೋಳೂರು ಬಸವರಾಜ, ಬಾವಿಯಲ್ಲಿದ್ದ ಚಿಪ್ಪು ಹಂದಿಯನ್ನು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಹೊರತೆಗೆದು ರಕ್ಷಣೆ ಮಾಡಿದ್ದು, ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗುತ್ತದೆ ಎಂದು ತಿಳಿಸಿದರು. ಚಿಪ್ಪು ಹಂದಿಯ ಗಾತ್ರ ಸುಮಾರು 30 ರಿಂದ 100 ಸೆ.ಮೀ ವರೆಗೆ ಇದೆ. ಇವುಗಳಲ್ಲಿ ಕೆಲವು ವರ್ಗಗಳು ಈಗಾಗಲೇ ನಾಶಹೊಂದಿವೆ. ಇದು ಸಾಮಾನ್ಯವಾಗಿ ಉಷ್ಣ ವಲಯದ ದೇಶಗಳಾದ ಆಫ್ರಿಕಾದಲ್ಲಿ ಕಾಣಿಸುತ್ತದೆ. ಇವುಗಳಿಗೆ ತಮ್ಮ ಚರ್ಮದ ಮೇಲೆ ಅಗಲವಾದ ಚಿಪ್ಪುಗಳಿವೆ. ಮರದ ಪೊಟರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ. ಇವುಗಳು ಇರುವೆ ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ. ಉದ್ದವಾದ ನಾಲಗೆ ಹೊಂದಿದ್ದು, ಒಂದು ಬಾರಿಗೆ 1 ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ. ಅರಣ್ಯನಾಶದಿಂದಾಗಿ ಇವು ಈಗ ವಿನಾಶದ ಅಂಚಿನಲ್ಲಿವೆ.

ದೇಹವು ಪ್ರಬಲ, ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿಂದ ಒಳಗೊಂಡಿದೆ. ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ಥಿತಗೊಂಡಿದೆ. ತಲೆಯು ಸಣ್ಣದಾಗಿದ್ದು, ಚೂಪಾದ ಮುಖ ಇದೆ. ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ. ಕಣ್ಣು ಹಾಗೂ ಮೂಗು ಸಣ್ಣದಾಗಿದೆ. ನಾಲಗೆಯು ಗಮನಾರ್ಹವಾಗಿ ಉದ್ದ, ಜಿಗುಟಾಗಿದೆ. ಕೈ, ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮುಂದಿನ ಉಗುರುಗಳು ಬಿಲವನ್ನು ತೋಡಲು ಹಾಗೂ ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ. ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆಂಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.

ಇದನ್ನೂ ಓದಿ:11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು

ಕಾರವಾರದಲ್ಲಿ ಪತ್ತೆಯಾಗಿದ್ದ ಒಂದು ಕಣ್ಣಿನ ಅಪರೂಪದ ನಾಗರ ಹಾವು: ಒಂದೇ ಕಣ್ಣು ಹೊಂದಿರುವ ನಾಗರಹಾವೊಂದು ಕಾರವಾರ ತಾಲೂಕಿನ ಕದ್ರಾದಲ್ಲಿ ಇತ್ತೀಚೆಗೆ ಕಂಡು ಬಂದಿತ್ತು, ಅದನ್ನು ರಕ್ಷಿಸಿ ಮರಳಿ ಕಾಡಿಗೆ ಬಿಡಲಾಗಿತ್ತು. ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎನ್ನುವವರ ಮನೆಯ ಬಳಿ ಸುಮಾರು 4.5 ಅಡಿಯ ಉದ್ದದ ನಾಗರ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ್ದ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಈ ಸಂದರ್ಭದಲ್ಲಿ ಹಾವಿಗೆ ಒಂದು ಕಣ್ಣು ಇಲ್ಲದ ವಿಷಯ ಗಮನಕ್ಕೆ ಬಂದಿತ್ತು. ಒಂದು ಕಣ್ಣಿಗೆ ಸಂಪೂರ್ಣವಾಗಿ ದೃಷ್ಟಿ ಇಲ್ಲ. ಇಂತಹ ಹಾವುಗಳಿರುವುದು ತೀರಾ ವಿರಳ. ಈ ನಾಗರನಿಗೆ ಕಣ್ಣಿನ ಗುಳಿ ಮಾತ್ರ ಇದ್ದು, ಕಣ್ಣುಗುಡ್ಡೆ ಇರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.