ETV Bharat / state

ಮೈಸೂರು: ಬಾವಿಯಲ್ಲಿ ಬಿದ್ದಿದ್ದ ಚಿಪ್ಪು ಹಂದಿ ರಕ್ಷಣೆ

author img

By

Published : Mar 30, 2021, 7:43 AM IST

ಹುಣಸೂರು ತಾಲೂಕಿನ ಚಿಕ್ಕಾಡಿಗನಹಳ್ಳಿ ಗ್ರಾಮದ ಪಾಳು ಬಾವಿಯಲ್ಲಿ ಸುಮಾರು 3 ರಿಂದ 4 ಅಡಿ ಉದ್ದ ಇರುವ ಗಂಡು ಚಿಪ್ಪುಹಂದಿ ಪತ್ತೆಯಾಗಿದ್ದು, ಗ್ರಾಮಸ್ಥರು ಚಿಪ್ಪುಹಂದಿಯನ್ನು ಮೇಲೆತ್ತಿ ಸಂರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ

pangolin-rescue
ಚಿಪ್ಪು ಹಂದಿ ರಕ್ಷಣೆ

ಮೈಸೂರು (ಹುಣಸೂರು): ಪಾಳು ಬಾವಿಗೆ ಬಿದ್ದಿದ್ದ ಚಿಪ್ಪುಹಂದಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು, ಬಳಿಕ ಅದನ್ನು ಅರಣ್ಯ ಇಲಾಖೆ ವಶಕ್ಕೆ ನೀಡಿರುವ ಘಟನೆ ಹುಣಸೂರು ತಾಲೂಕಿನ ಚಿಕ್ಕಾಡಿಗನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪಾಳು ಬಾವಿಯಲ್ಲಿ ಸುಮಾರು 3ರಿಂದ 4 ಅಡಿ ಉದ್ದವಿರುವ ಗಂಡು ಚಿಪ್ಪುಹಂದಿ ಪತ್ತೆಯಾಗಿದ್ದು, ಗ್ರಾಮಸ್ಥರು ಚಿಪ್ಪುಹಂದಿಯನ್ನು ಮೇಲೆತ್ತಿ ಸಂರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪ್ರಾದೇಶಿಕ ಅರಣ್ಯ ವಿಭಾಗದ ಆರ್​ಎಫ್​​​ಒ ಸಂದೀಪ್ ಹಾಗೂ ಸಿಬ್ಬಂದಿ ಚಿಪ್ಪು ಹಂದಿಯನ್ನು ವಶಕ್ಕೆ ಪಡೆದು ಮಂಡ್ಯ ಜಿಲ್ಲೆಯ ಮೇಲುಕೋಟೆ ಅರಣ್ಯಪ್ರದೇಶದ ಬೆಟ್ಟದಲ್ಲಿ ಬಿಟ್ಟಿದ್ದಾರೆ.

ಚಿಪ್ಪು ಹಂದಿ ರಕ್ಷಣೆ

ಚಿಪ್ಪು ಹಂದಿಗಳು ಸಾಮಾನ್ಯವಾಗಿ ಶೀತ ಪ್ರದೇಶದಲ್ಲಿ ಕಾಣಸಿಗುವುದು ಅಪರೂಪ. ಇವು ಉಷ್ಣತೆ ಹೆಚ್ಚಾಗಿರುವ ಪ್ರದೇಶದಲ್ಲಿ ಇರುವೆ - ಗೆದ್ದಲು ತಿಂದು ಬದುಕುವ ನಾಚಿಕೆ ಸ್ವಭಾವದ ಈ ಪ್ರಾಣಿಯು ಚಿಕ್ಕಾಡಿಗನಹಳ್ಳಿಯಲ್ಲಿ ಪತ್ತೆಯಾಗಿದೆ. ತೊಂದರೆ ನೀಡದೇ, ಇಲಾಖೆಗೆ ಮಾಹಿತಿ ನೀಡಿ ಚಿಪ್ಪುಹಂದಿಯ ಸಂರಕ್ಷಣೆಗೆ ಸಹಕಾರ ನೀಡಿದ ಗ್ರಾಮಸ್ಥರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.