ETV Bharat / state

ಐತಿಹಾಸಿಕ ತಲಕಾಡು ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ... ನಾಳೆ ವಿದ್ಯುಕ್ತ ಚಾಲನೆ - Mysore Latest Update News

ಡಿ. 10ರಿಂದ 20ರವರೆಗೆ ಹತ್ತು ದಿನಗಳ ಕಾಲ ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ. 2013ರಲ್ಲಿ ನಡೆದಿದ್ದ ಪಂಚಲಿಂಗ ದರ್ಶನ ಮಹೋತ್ಸವವು 7 ವರ್ಷಗಳ ಬಳಿಕ 2020ರಲ್ಲಿ ನಡೆಯುತ್ತಿದೆ.

Mysore
ಐತಿಹಾಸಿಕ ತಲಕಾಡು ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ.. ನಾಳೆ ವಿದ್ಯುಕ್ತ ಚಾಲನೆ
author img

By

Published : Dec 9, 2020, 8:04 PM IST

ಮೈಸೂರು: ಐತಿಹಾಸಿಕ‌ ತಲಕಾಡು ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಸಂಜೆ 6.30ಕ್ಕೆ ವೈದ್ಯನಾಥೇಶ್ವೇರ ದೇವಾಲಯದಲ್ಲಿ ದೀಪ ಹಚ್ಚುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ.

ಐತಿಹಾಸಿಕ ತಲಕಾಡು ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ... ನಾಳೆ ವಿದ್ಯುಕ್ತ ಚಾಲನೆ

2013ರಲ್ಲಿ ನಡೆದಿದ್ದ ಪಂಚಲಿಂಗ ದರ್ಶನ ಮಹೋತ್ಸವವು 7 ವರ್ಷಗಳ ಬಳಿಕ 2020ರಲ್ಲಿ ನಡೆಯುತ್ತಿದೆ. ಡಿ. 10ರಿಂದ 20ರವರೆಗೆ ಹತ್ತು ದಿನಗಳ ಕಾಲ ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ.

ಇದನ್ನೂ ಓದಿ: ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೂ ನಿಗದಿತ ಅವಧಿಯಲ್ಲಿ ಮಾತ್ರ ಅವಕಾಶ!

ಕೋವಿಡ್ ಕಾರಣ ಸರಳ ಪಂಚಲಿಂಗ ದರ್ಶನ ಮಹೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಪಂಚಲಿಂಗ ದರ್ಶನಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಈ ಬಾರಿಯ ಪಂಚಲಿಂಗ ದರ್ಶನವನ್ನು ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ತಲಕಾಡಿನ ಪಂಚಲಿಂಗ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಿಎಂ ಬಿಎಸ್​ವೈಗೆ ಆಹ್ವಾನ

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.