ಮೈಸೂರು: ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ಅನ್ನದಾತರ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ನಡುವೆ ಕೆಪಿಸಿಸಿ ಮಹಿಳಾ ಘಟಕ ಹೊಸ ಅಭಿಯಾನ ಆರಂಭಿಸಿದೆ.
ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ, ರೈತರ ಹೋರಾಟಕ್ಕೆ ರಾಜ್ಯ ಮಹಿಳಾ ಕಾಂಗ್ರೆಸ್ನಿಂದ 'ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ' ಎಂಬ ಧ್ಯೇಯದೊಂದಿಗೆ ರೈತರ ಜಮೀನುಗಳಿಗೆ ತೆರಳಿ ಕೃಷಿ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.
ಓದಿ: ಆ್ಯಪ್‌ನಲ್ಲಿ ಕೋಟಿ ಕೋಟಿ ಗಳಿಸುವ ಆಮಿಷ: ಲಕ್ಷಾಂತರ ರೂ. ಹಣ ಕಳೆದುಕೊಂಡ ಯುವಕ - ಯುವತಿಯರು
ಮೈಸೂರು ಜಿಲ್ಲೆ ಹುಣಸೂರಿನಿಂದ ಆರಂಭವಾದ ಮಹಿಳಾ ಕಾಂಗ್ರೆಸ್ ವಿನೂತನ ಅಭಿಯಾನವು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ರೈತರ ಹೊಲದಲ್ಲಿ ಭತ್ತ ಮತ್ತು ರಾಗಿ ಕಟಾವು ಮಾಡಿದ ಮಹಿಳಾ ಕಾರ್ಯಕರ್ತರು ರೈತರಿಗೆ ಸಾಥ್ ನೀಡಿದರು.
ಹೊಲದಲ್ಲೇ ಬೆಳೆದ ಉತ್ಪನ್ನಗಳಿಂದ ಜಮೀನಿನಲ್ಲೇ ಅಡುಗೆ ತಯಾರು ಮಾಡಿ, ರೈತರ ಸಮಸ್ಯೆಗಳನ್ನು ಆಲಿಸುತ್ತಾ ಕೃಷಿ ಮಸೂದೆ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು.
ರೈತರು, ರೈತ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿದರು. ರೈತರ ಜೊತೆ ಹೊಲದಲ್ಲೇ ಊಟ ಸವಿದರು.