ಮೈಸೂರು: ಲಲಿತ್ ಮಹಲ್ ಅರಮನೆ ಸಮೀಪ ಹೆಲಿ ಟೂರಿಸಂ ಬೇಡ, ನಗರದ ಹೊರವಲಯದಲ್ಲಿ ಹೆಲಿ ಟೂರಿಸಂ ನಿರ್ಮಾಣ ಮಾಡಿ ಎಂದು ಮೈಸೂರು ಪರಿಸರ ಬಳಗ ಸರ್ಕಾರಕ್ಕೆ ಒತ್ತಾಯಿಸಿದೆ.
ಪತ್ರಕರ್ತರ ಭವನದಲ್ಲಿ ಮಾತನಾಡಿದ ಪ್ರೊ. ಕಾಳಚನ್ನೇಗೌಡ, ಲಲಿತ್ ಮಹಲ್ ಅರಮನೆ ಬಳಿ ಮರಗಳನ್ನು ಕಡಿದರೆ ನೂರಾರು ಜೀವರಾಶಿಗಳಿಗೆ ಹಾನಿಯಾಗುತ್ತದೆ. ಮರಗಳ ಸಂಖ್ಯೆ ಕ್ಷೀಣಿಸಿದರೆ ವಾತಾವರಣ ಮತ್ತಷ್ಟು ಹದಗೆಡುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಜೀವ ವೈವಿಧ್ಯತೆಯನ್ನು ನಾಶ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಓದಿ : ಮೈಸೂರಿನಲ್ಲಿ ಹಲವು ಸಾರ್ವಜನಿಕ ಸ್ಥಳಗಳ ಒತ್ತುವರಿ ಪ್ರಕರಣಗಳಿವೆ : ಎಂ. ಲಕ್ಷ್ಮಣ್ ಆರೋಪ
ಲಲಿತ್ ಮಹಲ್ ಸುತ್ತಮುತ್ತಲಿನ ಪರಿಸರದಲ್ಲಿ 180 ಜಾತಿಯ ಚಿಟ್ಟೆಗಳಿವೆ. ಇದು ಹಲವು ರೀತಿಯ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಹಾಗಾಗಿ ಇಂತಹ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ನಮ್ಮದಾಗಿದೆ. ಲಲಿತ್ ಮಹಲ್ ಬಳಿ ಬಿಟ್ಟು ನಗರದ ಹೊರ ವಲಯದಲ್ಲಿ ಹೆಲಿ ಟೂರಿಸಂ ನಿರ್ಮಾಣ ಮಾಡಿ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳು ಮಾಡಬೇಡಿ. ಪ್ರಾಣಿ ಪಕ್ಷಿಗಳ ಸಂಕುಲ ಉಳಿಸಿ ಎಂದರು.