ETV Bharat / state

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀ ವಿರುದ್ಧ ಮತ್ತೊಂದು ದೂರು ದಾಖಲು - ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ

ಪೋಕ್ಸೋ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ತಮ್ಮ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಠದ ಸಹಾಯಕಿ ದೂರು ದಾಖಲಿಸಿದ್ದಾರೆ.

ಮುರುಘಾ ಶ್ರೀ
muruga shree
author img

By

Published : Oct 14, 2022, 9:21 AM IST

Updated : Oct 14, 2022, 10:49 AM IST

ಮೈಸೂರು: ಚಿತ್ರದುರ್ಗ ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಮಠದ ವಸತಿ ಶಾಲೆಯ ಅಡುಗೆ ಸಹಾಯಕಿಯೊಬ್ಬರು ತಮ್ಮಿಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ.

ದೂರಿನಲ್ಲಿ ಮುರುಘಾ ಶ್ರೀಗಳು ಮೊದಲ ಆರೋಪಿ, ಎರಡನೇ ಆರೋಪಿಯಾಗಿ ವಾರ್ಡನ್ ರಶ್ಮಿ ಮತ್ತು ಕ್ರಮವಾಗಿ ಬಸವಾದಿತ್ಯ, ಪರಮಶಿವಯ್ಯ, ಗಂಗಾದರಯ್ಯ ಮತ್ತು ಸ್ವಾಮೀಜಿ ಸಹಾಯಕರಾದ ಮಾಲಿಂಗ ಮತ್ತು ಕರಿಬಸಪ್ಪ 6 ಮತ್ತು 7ನೇ ಆರೋಪಿ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ: ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ದೂರು ನೀಡಿರುವ ಮಹಿಳೆಯು ಮಠದ ಕೆಲಸ ಮಾಡುತ್ತಾರೆ. ನಜರಬಾದ್ ಠಾಣೆಯಲ್ಲಿ ಚೈಲ್ಡ್ ವೆಲ್ ಫೇರ್ ಕಮಿಟಿ ಸಹಾಯದಿಂದ ದೂರು ನೀಡಲಾಗಿದೆ. ದೂರು ಪಡೆದ ನಜರಬಾದ್ ಠಾಣೆಯ ಪೊಲೀಸರು ಎಫ್​​ಐಆರ್ ದಾಖಲಿಸಿಕೊಂಡು ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ.

ಇದನ್ನೂ ಓದಿ:ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ: ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್​

ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನಲ್ಲಿರುವ ಸ್ವಾಮೀಜಿ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.

Last Updated : Oct 14, 2022, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.