ETV Bharat / state

ಚಿನ್ನಾಭರಣ ಕಳೆದುಕೊಂಡಿದ್ದ ವೃದ್ಧೆ ಸಾವು

ಕೆಲ ದಿನಗಳ ಹಿಂದೆ ಚಿನ್ನಾಭರಣ ಕಳೆದುಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆ ಸಾವು
author img

By

Published : Aug 24, 2019, 11:36 PM IST

ಮೈಸೂರು: ಕೆಲ ದಿನಗಳ ಹಿಂದೆ ಚಿನ್ನಾಭರಣ ಕಳೆದುಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ಧೆ ಇಂದು ಮೃತಪಟ್ಟಿದ್ದಾರೆ.

ಚಾಮರಾಜ ಜೋಡಿ ರಸ್ತೆಯ ಮನುವನ ಪಾರ್ಕ್ ಬಳಿಯ ಮನೆಯ ನಿವಾಸಿ ನಾಗರತ್ನ(87) ಮೃತ ವೃದ್ಧೆ. ಆಗಸ್ಟ್ 21ರಂದು ಬೆಳಗ್ಗೆ 7:30ರ ಸಮಯದಲ್ಲಿ ಮನೆಯಲ್ಲಿದ್ದ ವೃದ್ಧೆಯ ಚಿನ್ನಾಭರಣ ಕದಿಯಲು ಬಂದ ಖದೀಮ ಆಕೆಯ ಬಾಯಿಗೆ ಬಟ್ಟೆ ತುರುಕಿ, ಹಲ್ಲೆ ನಡೆಸಿದಲ್ಲದೆ ಕೈಯಲ್ಲಿದ್ದ 4 ಲಕ್ಷ ರೂ. ಮೌಲ್ಯದ 7 ಚಿನ್ನದ ಬಳೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಘಟನೆಯಿಂದಾಗಿ ನಾಗರತ್ನ ಮಾನಸಿಕ ಮತ್ತು ದೈಹಿಕವಾಗಿ ಅಘಾತಕ್ಕೆ ಒಳಗಾಗಿದ್ದರು. ನಾಗರತ್ನ ಅವರ ಪುತ್ರ ಮೋಹನ ಕುಮಾರ್ ಈ ಬಗ್ಗೆ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಬಲ್ಲಾಳ್ ವೃತ್ತದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರೆಹಮಾನ್ ಷರೀಫ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಲ್ಲದೆ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಹಲ್ಲೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರತ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕದ್ದ ಹಣ್ಣಿನ ವ್ಯಾಪಾರಿ ಬನ್ನಿ ಮಂಟಪದ ನಿವಾಸಿ ರೆಹಮಾನ್ ಷರೀಫ್(28) ಈಗಾಗಲೇ ಬಂಧಿತನಾಗಿದ್ದು, ಆತನ ವಿರುದ್ಧ ಸುಲಿಗೆ ಹಾಗೂ ಕೊಲೆ ಪ್ರಕರಣ ದಾಖಲಿಸಲಾಗಿದೆ.

Intro:ವೃದ್ಧೆ ಸಾವುBody:ಮೈಸೂರು:ಸಲಿಗೆಯಿಂದ ಇದ್ದ ಯುವಕನಿಂದ ಚಿನ್ನಾಭರಣ ಕಳೆದುಕೊಂಡು, ಪೊಲೀಸ್ ಕಾರ್ಯಾಚರಣೆ ವಾಪಸ್ ಸಿಕ್ಕಿದ ಬಳಿಕ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ಧೆ ಪ್ರಾಣ ಕಳೆದುಕೊಂಡಿದ್ದಾರೆ.
ಚಾಮರಾಜ ಜೋಡಿ ರಸ್ತೆಯ ಮನುವನ ಪಾರ್ಕ್ ಬಳಿಯ ಮನೆಯ ನಿವಾಸಿ ನಾಗರತ್ನ(೮೭) ಮೃತರು.ಕಳೆದುಕೊಂಡ ಚಿನ್ನಾಭರಣವನ್ನು ಪೊಲೀಸರ ಕಾರ್ಯಾಚರಣೆಯಿಂದ ಕೆಲವೇ ಗಂಟೆಗಳಲ್ಲಿ ಪಡೆದರೂ, ಕಳ್ಳ ನಡೆಸಿದ ದಾಳಿಯಿಂದಾಗಿ ಜರ್ಜರಿತರಾಗಿ ಮಾನಸಿಕ ಮತ್ತು  ದೈಹಿಕವಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.
ಚಿನ್ನಾಭರಣ ಕದ್ದ ಹಣ್ಣಿನ ವ್ಯಾಪಾರಿ ಬನ್ನಿಮಂಟಪದ ನಿವಾಸಿ ರೆಹಮಾನ್ ಷರೀಫ್(೨೮) ಈಗಾಗಲೇ ಬಂಧಿತನಾಗಿದ್ದು, ಆತನ ವಿರುದ್ದ ಸುಲಿಗೆಯೊಂದಿಗೆ ಕೊಲೆ ಪ್ರಕರಣವೂ ಕೂಡ ದಾಖಲಾಗಿದೆ.
ಕಳೆದ ಆಗಸ್ಟ್ ೨೧ ರಂದು ಬೆಳಗ್ಗೆ ೭. ೩೦ ರ ಸಮಯದಲ್ಲಿ   ಮನೆಯಲ್ಲಿದ್ದ   ವೃದ್ದೆಯ ಚಿನ್ನಾಭರಣ ಕದಿಯಲು ಬಂದ ಖದೀಮ ಆಕೆಯ  ಬಾಯಿಗೆ ಬಟ್ಟೆ ತುರುಕಿ,ಹಲ್ಲೆ ನಡೆಸಿದಲ್ಲದೇ, ಕೈಯಲ್ಲಿದ್ದ ೪ ಲಕ್ಷ ರೂ. ಮೌಲ್ಯದ ೭ ಚಿನ್ನದ ಬಳೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ.ಘಟನೆಯಿಂದಾಗಿ ನಾಗರತ್ನ ಅವರು ಮಾನಸಿಕ ಮತ್ತು ದೈಹಿಕವಾಗಿ ಅಘಾತಕ್ಕೆ ಒಳಗಾಗಿದ್ದರು.   ೮ ಗಂಟೆಯ ಹೊತ್ತಿಗೆ ಬಂದ ನಾಗರತ್ನ ಅವರ ಪುತ್ರ ಮೋಹನ ಕುಮಾರ್ ವಿಷಯ ತಿಳಿದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯ ಬಳಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿ ಬಲ್ಲಾಳ್ ವೃತ್ತದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರೆಹಮಾನ್ ಷರೀಫ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಲ್ಲದೇ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಹಲ್ಲೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ   ನಾಗರತ್ನ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Conclusion:ವೃದ್ಧೆ ಸಾವು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.