ಮೈಸೂರು: ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತದ ಒಕ್ಕಣೆ ಜೊರಾಗಿಯೇ ನಡೆಯುತ್ತಿದೆ. ದವಸ ಧಾನ್ಯಗಳನ್ನು ಮನೆಗೆ ಕೊಂಡೊಯ್ಯಲು ರೈತರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಧನುರ್ಮಾಸ ಬಂತೆಂದರೆ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ತಾವು ವರ್ಷದಿಂದ ಹೊಲಗಲ್ಲಿ ಬಂದಂತಹ ಫಸನ್ನು ಸಂಕ್ರಾಂತಿ ಹಬ್ಬದೊಳಗೆ ಮನೆಗೆ ತುಂಬಿಸಿಕೊಂಡು ಸಂತಸ ಪಡುತ್ತಾರೆ. ಈ ನಡುವೆ ಡಿಸೆಂಬರ್ನಲ್ಲಿ ಕೊಯ್ಲು ಮಾಡಿದ ರಾಗಿ, ಭತ್ತ, ಕಾಳುಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕಾಗಿರುವುದರಿಂದ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೆ. ಇದರಿಂದ ರಸ್ತೆ ಮೇಲೆ ದವಸ ಧಾನ್ಯಗಳನ್ನು ಹರಡುವುದರಿಂದ ಬಸ್, ಕಾರು ಹಾಗೂ ಬೈಕ್ ಸವಾರರಿಗೆ ರಸ್ತೆಗಳಲ್ಲಿ ಹೋಗುವುದು ಕಷ್ಟವಾಗ್ತಿದೆ ಅನ್ನೋ ಆರೋಪಗಳು ವ್ಯಕ್ತವಾಗಿವೆ.
ಜಿಲ್ಲಾ ಪಂಚಾಯತ್ ವತಿಯಿಂದ ಒಕ್ಕಣೆ ಕೇಂದ್ರಗಳನ್ನು ತೆರೆದಿದ್ದಾರೆ. ಆದ್ರೆ ಅಲ್ಲಿಗೆ ಹೋಗದ ರೈತರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ಜಿ.ಪಂ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಿ ಅನಾಹುತ ತಪ್ಪಿಸಬೇಕೆಂಬುದು ವಾಹನ ಸವಾರರ ಮಾತಾಗಿದೆ.