ETV Bharat / state

ಜೆಡಿಎಸ್ ಪಕ್ಷದೊಂದಿಗೆ ಕೈಜೋಡಿಸುವ ಮಾತೇ ಇಲ್ಲ: ವೀರಪ್ಪ ಮೊಯ್ಲಿ - CM Basavaraja Bommai

''ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಲಭಿಸಲಿದೆ. ಜೆಡಿಎಸ್ ಪಕ್ಷದೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ'' ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

Veerappa Moily
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ
author img

By

Published : Feb 15, 2023, 4:45 PM IST

ಮೈಸೂರು: ''ಈ ಬಾರಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಬರುತ್ತದೆ. ಜೆಡಿಎಸ್ ಜೊತೆ ಕೈಜೋಡಿಸುವ ಮಾತೇ ಇಲ್ಲ. ಅವರೊಂದಿಗೆ ಕಳೆದ ಲೋಕಸಭೆಯಲ್ಲಿ ಕೈಜೋಡಿಸಿ ಹಿನ್ನಡೆ ಅಭವಿಸಬೇಕಾಯಿತು. ನಾವು ಇದರಿಂದ ಸಾಕಷ್ಟು ಬುದ್ಧಿ ಕಲಿತಿದ್ದೇವೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ'' ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಮ್ಮದು ಸೈದ್ದಾಂತಿಕ ನಿಲುವು ಹೊಂದಿರುವ ಪಕ್ಷ. ಆದರೆ‌‌ ಟಿಕೆಟ್​ಗಾಗಿ ಅರ್ಜಿ ಸಲ್ಲಿಸುವಾಗ ಎರಡು ಲಕ್ಷ ಹಣ ಪಡೆದಿಕೊಂಡಿರುವ ಪದ್ಧತಿ ನಮ್ಮ‌ ಕಾಲದಲ್ಲಿ‌ ಇರಲಿಲ್ಲ‌. ಆಗ‌ ನಾವು ಯಾರಿಂದಲೂ ಹಣ ಪಡೆದುಕೊಂಡಿರಲಿಲ್ಲ. ಈಗ ಕಾಲ‌ ಬದಲಾಗಿದೆ ಇವರು ಹಣ ಪಡೆದುಕೊಂಡಿದ್ದಾರೆ'' ಎಂದರು.

ಕಾಂಗ್ರೆಸ್​ ಪಕ್ಷಕ್ಕೆ ಯಾವುದೇ ಗೊಂದಲವಿಲ್ಲ: ''ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಹಲವು ನಾಯಕರಗಳ ಹೇಳಿಕೆ, ಅದು ಅವರ ವೈಯಕ್ತಿಕ ಹೇಳಿಕೆ, ಅವರ ವೈಯಕ್ತಿಕ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ‌ಅವರವರ ಅಭಿಪ್ರಾಯ ಹೇಳುವ ಹಕ್ಕು ಇದೆ. ಈ ಹಕ್ಕನ್ನು ಹತ್ತಿಕ್ಕಲು ಯಾರಿಗೂ ಸಾಧ್ಯವಿಲ್ಲ. ಇದರಿಂದ ಪಕ್ಷಕ್ಕೆ ಯಾವುದೇ ಗೊಂದಲವು‌ ಆಗುವುದಿಲ್ಲ'' ಎಂದು ಅವರು, ''ನಮ್ಮ‌ ಪರವಾಗಿ‌ ಜನ ಇದ್ದಾರೆ. ಇದರಿಂದ ಯಾತ್ರೆಗಳನ್ನ ಮಾಡುತ್ತಿದ್ದೇವೆ. ಜನತೆ ನಮ್ಮ ಪರವಾಗಿ ಒಲವು ತೋರಿದ್ದಾರೆ'' ಎಂದು ತಿಳಿಸಿದರು.

ಜಾಹೀರಾತಿನಿಂದ ಬಿಜೆಪಿ ಸರ್ಕಾರ ಉಸಿರಾಡುತ್ತಿದೆ: ''ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮೋದಿ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಶೇ 10ರಷ್ಟು ಸರ್ಕಾರ ಎಂದರು. ಆದರೆ, ಅದು ಜನರ ಮನಸ್ಸಿಗೆ ತಟ್ಟಲಿಲ್ಲ. ಆದರೆ, ಈಗ ಬಿಜೆಪಿ ಶೇ 40ರಷ್ಟು ಸರ್ಕಾರ ಎಂದು ನಾವು ಆರೋಪ ಮಾಡಿದ್ದೇವೆ. ಬಿಜೆಪಿ ಸರ್ಕಾರವು ಶೇ.40ರಷ್ಟು ಸರ್ಕಾರ ಎನ್ನುವುದು ಜನರಿಗೆ ಗೊತ್ತಾಗಿದೆ. ಇಂದು ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಇಡೀ ಲೋಕಾಯುಕ್ತವೇ ಭ್ರಷ್ಟರಾಗಿದ್ದಾಗ ಎಸಿಬಿ ಜಾರಿಗೆ ತರಲಾಯಿತು'' ಎಂದು ವೀರಪ್ಪ ಮೊಯ್ಲಿ ಆರೋಪಿಸಿದರು.

''ಈಗಿನ ಬಿಜೆಪಿ ಸರ್ಕಾರ ಹಣ ಮತ್ತು ಜಾಹೀರಾತು ಸರ್ಕಾರ, ಜಾಹೀರಾತಿನ ಮೂಲಕವೇ ಉಸಿರಾಡುತ್ತಿದೆ. ಆದರೆ, ನಮ್ಮದು‌ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಶುದ್ಧ ಆಡಳಿತವೇ ನಮಗೆ ಮುಖ್ಯ'' ಎಂದು ವೀರಪ್ಪ ಮೊಯ್ಲಿ ಹೇಳಿದರು.

ಸಿಎಂ ವಿರುದ್ಧ ವಾಗ್ದಾಳಿ: ''ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿ ಇದ್ದು ಜೈಲಿಗೆ ಹೋದ ಬಿ.ಎಸ್​. ಯಡಿಯೂರಪ್ಪ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ. ಈಗಿನ ಸಿಎಂ ಬಸವರಾಜ ಬೋಮ್ಮಾಯಿ ಒಬ್ಬ ನಿಷ್ಪ್ರಯೋಜಕ, ಏನು ಕೆಲಸ ಮಾಡುತ್ತಿಲ್ಲ, ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ'' ಎಂದು ಅವರು ವಾಗ್ದಾಳಿ ನಡೆಸಿದರು.

ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ''ಈ ಬಾರಿ ಚುನಾವಣೆಯಲ್ಲಿ ನಾನು ಹಾಗೂ ನನ್ನ ಮಗ ಸ್ಪರ್ಧೆ ಮಾಡುವುದಿಲ್ಲ. ಜೊತೆಗೆ ನಮ್ಮ ಕುಟುಂಬದಿಂದ ಯಾರೂ ಕೂಡ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನಾನು ಆರು ಬಾರಿ ಎಂಎಲ್ಎ ಆಗಿದ್ದೇನೆ. ಭ್ರಷ್ಟಾಚಾರ ಮಾಡದೇ ಚುನಾವಣೆಯಲ್ಲಿ ಗೆದ್ದಿದ್ದೇನೆ. ಹಣ ಕೊಟ್ಟು ಗೆದ್ದರೆ ಹಣದ ನೀರಿಕ್ಷೆ ಇಟ್ಟುಕೊಂಡಿರುತ್ತಾರೆ'' ಎಂದು ಈಗಿನ ಚುನಾವಣೆಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯ ಮತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ: ಹೆಚ್​.ಡಿ.ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.