ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚಿಸಿದ್ದರೂ ಸಹ ಸಾಮಾಜಿಕ ಅಂತರ ಮರೆತು ಭಕ್ತರು ಮಾತ್ರ ನಂಜುಡೇಶ್ವರನ ದರ್ಶನ ಪಡೆದರು.
ಹುಣ್ಣಿಮೆ ಹಾಗೂ ಕಾರ್ತಿಕ ಸೋಮವಾರ ಒಟ್ಟಾಗಿ ಬಂದಿರುವುದರಿಂದ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬಂದಿದೆ.
ಕೊರೊನಾ ಕಡಿಮೆ ಆಗುತ್ತಿರುವ ದಿನಗಳಲ್ಲಿ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತ ಸಮೂಹ ಮೈಮರೆತಿದ್ದಾರೆ. ನಂಜುಂಡೇಶ್ವರ ಎಲ್ಲವನ್ನು ನೋಡಿಕೊಳ್ತಾನೆ ಎಂದು ಭಕ್ತರು ದೇವರ ಮೇಲೆ ಭಾರ ಹಾಕಿದ್ದಾರೆ. ಸಾಮಾಜಿಕ ಅಂತರ ಮರೆತ ಭಕ್ತರು ಪೂಜೆಯಲ್ಲಿ ತೊಡಗಿದ್ದರು.
ಇಂದು ಮಧ್ಯಾಹ್ನದ ನಂತರ ದೇಗುಲ ಬಂದ್ ಆಗುವ ವಿಷಯ ತಿಳಿದಿದ್ದ ಭಕ್ತರು, ನಂಜುಂಡೇಶ್ವರನ ದರ್ಶನ ಪಡೆಯಲೇಬೇಕೆಂದು ಆಗಮಿಸಿದ್ದರು. ಭಕ್ತರನ್ನು ಕಂಟ್ರೋಲ್ ಮಾಡಲು ಸಿಬ್ಬಂದಿ ಹೈರಾಣಾದರು. ದೇಗುಲ ಸುತ್ತುವರೆದು ನಿಂತ ಭಕ್ತರು, ಸಾಮಾಜಿಕ ಅಂತರ ಪಾಳಿಸದೆ, ಕೆಲವರು ಮಾಸ್ಕ್ ಹಾಕದೇ ಕೊರೊನಾ ನಡುವೆ ಸಾಮಾಜಿಕ ಜವಾಬ್ದಾರಿ ಮರೆತರು.