ಮೈಸೂರು: ಇಂದು ಜಿಲ್ಲೆಯಲ್ಲಿ ಒಂದೂ ಕೊರೊನಾ ಸೋಂಕಿತ ಕೇಸ್ಗಳು ಪತ್ತೆಯಾಗಿಲ್ಲ. ಒಬ್ಬರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
![corona report](https://etvbharatimages.akamaized.net/etvbharat/prod-images/7131865_312_7131865_1589036825110.png)
ಇಲ್ಲಿಯವರೆಗೆ 86 ಸೋಂಕಿತರು ಗುಣಮುಖರಾಗಿದ್ದು, ಉಳಿದ 4 ಜನ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.