ಮೈಸೂರು: ಮಂಡ್ಯಕ್ಕೆ ಯಾರೇ ಬಂದರೂ ಅಪ್ಪಾಜಿ ಪ್ರೀತಿಯನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಪ್ರಚಾರ ಮಾಡುವ ವೇಳೆ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ತಂಡೆಕೆರೆಯಿಂದ ಮೂರನೇ ದಿನ ಪ್ರಚಾರ ಆರಂಭಿಸಿದ ನಟ ದರ್ಶನ್, ಅಪ್ಪಾಜಿ ಮಂಡ್ಯಕ್ಕೆ ನೀಡಿದ ಕೊಡುಗೆ ಹಾಗೂ ಪ್ರೀತಿಯನ್ನು ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಏ. 18 ರ ಮತದಾನದಂದು ಅದನ್ನು ಮತ್ತೊಮ್ಮೆ ಸಾಬೀತು ಮಾಡಿ ಎಂದು ಮನವಿ ಮಾಡಿದರು.
ಇನ್ಸ್ಪೆಕ್ಟರ್ ಜೊತೆ ಮಾತಿನ ಚಕಮಕಿ:
ತೆಂಡೆಕೆರೆ ಸಮೀಪ ದರ್ಶನ್ ಪ್ರಚಾರದ ವಾಹನದಲ್ಲಿದ್ದರು. ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ಮಾಡಬೇಡಿ ಎಂದು ಹೇಳುತ್ತಿದ್ದಂತೆ ಕೋಪಗೊಂಡ ಇನ್ಸ್ಪೆಕ್ಟರ್ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಅಂತ ಗೊತ್ತಿದೆ. ನಮಗೆ ಹೇಳಿಕೊಡಬೇಡಿ ಎಂದು ಗರಂ ಆದರು ಎನ್ನಲಾಗಿದೆ.
ಇನ್ನು ಅಭಿಮಾನಿಗಳು ದರ್ಶನ್ ಮುಂದೆ ಕುಣಿದು ಕುಪ್ಪಳಿಸಿ, ತೆಂಡೆಕೆರೆ ವೃತ್ತದಲ್ಲಿ 500 ಕೆಜಿ ತೂಕದ ಹೂವಿನ ಹಾರವನ್ನು ಸಾರಥಿಗೆ ಹಾಕಿದರು.