ಮೈಸೂರು: ಜುಬಿಲೆಂಟ್ ಪ್ರಕರಣವನ್ನು ಸಿಬಿಐಗೆ ಅಲ್ಲ, ಎಫ್‌ಬಿಐಗೆ ಬೇಕಾದರೂ ವಹಿಸಲಿ ಎಂದು ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಸಂಸದ ಆರ್.ಧ್ರುವನಾರಾಯಣ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಾಜಿ ಸಂಸದ ಆರ್.ಧ್ರುವನಾರಾಯಣ ಮೇ 1ರಂದು ಸುದ್ದಿಗೋಷ್ಠಿ ನಡೆಸಿ, ಜುಬಿಲೆಂಟ್ ಪ್ರಕರಣದಲ್ಲಿ ಬಿಜೆಪಿ ಜನಪ್ರತಿನಿಧಿಗಳ ಹೇಳಿಕೆ ಭಿನ್ನವಾಗಿದೆ. ಸತ್ಯ ಹೊರ ಬರಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಹರ್ಷವರ್ಧನ್, ಸಿಬಿಐಗೆ ಅಲ್ಲ, ಎಫ್‌ಬಿಐ(ಫೆಡರೇಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ಗೆ ತನಿಖೆ ಮಾಡುವಂತೆ ಅವರು ಕೊಡಲೇಬೇಕು ಎಂದು ಗೇಲಿ ಮಾಡಿದರು.
ಕೊರೊನಾ ವೈರಸ್ನಿಂದಾಗಿ ತೀವ್ರ ಪೆಟ್ಟು ಬಿದ್ದಿದ್ದು, ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಹೊರ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು. ಮುಂದಿನ ದಿನಗಳಲ್ಲಿ ನಂಜನಗೂಡು ಕೈಗಾರಿಕೆ ವಲಯಗಳಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳಿವೆ ಎಂದು ಇದೇ ವೇಳೆ ಹೇಳಿದರು.