ETV Bharat / state

ಸೈಬರ್​ ಕ್ರೈಮ್​ ತಡೆಗೆ ಮೈಸೂರಿನಲ್ಲಿ ವಿಶೇಷ ಸೈಬರ್​​ ಠಾಣೆ

author img

By

Published : Nov 14, 2020, 6:50 PM IST

ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲೆಂದೇ ಜಿಲ್ಲಾ ಮಟ್ಟದಲ್ಲಿ ಸೈಬರ್ ಕ್ರೈಮ್​​ ಪೊಲೀಸ್ ಠಾಣೆಯನ್ನು ತೆರೆದಿದ್ದೇವೆ. ಆನ್​​ಲೈನ್​​ ಚಟುವಟಿಕೆಗಳನ್ನು ನಡೆಸುವಾಗ ಸಾರ್ವಜನಿಕರೂ ಜಾಗರೂಕರಾಗಿರಬೇಕು ಎಂದು ಡಿಸಿಪಿ ಪ್ರಕಾಶ್ ಗೌಡ ವಿವರಿಸಿದರು.

Cyber ​​Crime Police Station
Cyber ​​Crime Police Station

ಮೈಸೂರು: ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳ ಪತ್ತೆಗಾಗಿ ವಿಶೇಷ ಸೈಬರ್ ಠಾಣೆಯನ್ನು ತೆರೆಯಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರಕಾಶ್ ಗೌಡ ತಿಳಿಸಿದರು.

ನಗರದಲ್ಲಿ ದಾಖಲಾಗುವ ಸೈಬರ್ ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಈ ಠಾಣೆ ಸ್ಥಾಪಿಸಲಾಗಿದೆ. ಅದಕ್ಕಾಗಿಯೇ ಸಿಬ್ಬಂದಿಗೆ ವಿಶೇಷ ತರಬೇತಿ ಸಹ ನೀಡಲಾಗಿದೆ. ಇಂಟರ್​​ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸೈಬರ್​ ಕ್ರೈಮ್​​ಗಳೂ ದುಪ್ಪಟ್ಟಾಗುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಬ್ಯಾಂಕ್ ಮೂಲಕ ನಡೆಸುವ ವ್ಯವಹಾರ ಎಂದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರಕಾಶ್ ಗೌಡ

ಜನರನ್ನು ನಂಬಿಸಿ ಅವರಿಂದ ಆನ್​​ಲೈನ್​​ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಾರೆ. ಬ್ಯಾಂಕ್​ ಸಿಬ್ಬಂದಿಯಂತೆ ಕರೆ ಮಾಡಿ ಸಾರ್ವಜನಿಕರಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದಾರೆ. ಅಂತಹವುಗಳ ಕಡೆ ಗಮನ ಹರಿಸುವಂತೆ ಬ್ಯಾಂಕ್​​ಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಸಾರ್ವಜನಿಕರು ಸಹ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.