ETV Bharat / state

ಸಾಂಸ್ಕೃತಿಕ ನಗರಿಯಲ್ಲಿ ತಲೆ ಎತ್ತಿದೆ ಬೃಹತ್ ಆಧಾರ್ ಸೇವಾ ಕೇಂದ್ರ - New Aadhaar Service Center in Vijayanagar Mysuru

ವಿಜಯನಗರದಲ್ಲಿ ಪ್ರಾರಂಭಗೊಂಡಿರುವ ಬೃಹತ್ ಆಧಾರ್ ಸೇವಾ ಕೇಂದ್ರದಲ್ಲಿ ಸರ್ವರ್​ಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೇ ದೇಶದ ಯಾವುದೇ ಮೂಲೆಯವರಾದರೂ ಇಲ್ಲಿಗೆ ಬಂದು ಆಧಾರ್ ಕಾರ್ಡ್ ಪಡೆಯಬಹುದು. ಆಧಾರ್‌ಗೆ ತಕ್ಕಂತೆ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು. ಆಧಾರ್ ರೆಡಿಯಾದ ನಂತರ ಒಂದು ವಾರದಲ್ಲಿ ಹೊಸ ಆಧಾರ್ ಮನೆ ವಿಳಾಸಕ್ಕೆ ತಲುಪಲಿದೆ.

ಮೈಸೂರಿನಲ್ಲಿ ಬೃಹತ್ ಆಧಾರ್ ಸೇವಾ ಕೇಂದ್ರ
author img

By

Published : Nov 12, 2019, 11:23 AM IST

Updated : Nov 12, 2019, 11:53 AM IST

ಮೈಸೂರು: ಆಧಾರ್​ ಕಾರ್ಡ್​ ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿರುವ ಸಾಂಸ್ಕೃತಿಕ ನಗರಿಯ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ನಗರದ ವಿಜಯನಗರದ ಮೊದಲ ಹಂತದಲ್ಲಿ ಬೃಹತ್ ಆಧಾರ್ ಸೇವಾ ಕೇಂದ್ರ ಪ್ರಾರಂಭಗೊಂಡಿದ್ದು, ಆಧಾರ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲು ಇದು ಸಹಕಾರಿಯಾಗಲಿದೆ.

ಇದೇ ಮೊದಲ ಬಾರಿಗೆ ಸಾವಿರ ಮಂದಿಗೆ ಆಧಾರ್ ಕಾರ್ಡ್ ಟೋಕನ್ ವ್ಯವಸ್ಥೆ ಮೂಲಕ, ಹೊಸ ಕಾರ್ಡ್ ಮಾಡುವ ಮತ್ತು ತಿದ್ದುಪಡಿ ವ್ಯವಸ್ಥೆ ಮಾಡಲಾಗಿದೆ. ನಗರದ ಅಂಚೆಕಚೇರಿ, ಮೈಸೂರು ಒನ್, ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಕಚೇರಿಗಳಲ್ಲಿ ಪ್ರತಿನಿತ್ಯ 25 ಮಂದಿಗೆ ಮಾತ್ರ ಆಧಾರ್​ ತಿದ್ದುಪಡಿ, ಹೊಸ ಕಾರ್ಡ್ ಮಾಡಲಾಗುತ್ತಿತ್ತು. ಅದರಲ್ಲೂ ಸರ್ವರ್ ಕೈಕೊಟ್ಟರೆ ಜನರು ದಿನವಿಡೀ ಪರದಾಡಬೇಕಾದ ಪರಿಸ್ಥಿಯಿತ್ತು. ಇದೀಗ ವಿಜಯನಗರದಲ್ಲಿ ಪ್ರಾರಂಭಗೊಂಡಿರುವ ಬೃಹತ್ ಆಧಾರ್ ಸೇವಾ ಕೇಂದ್ರದಲ್ಲಿ ಸರ್ವರ್​ಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೇ ದೇಶದ ಯಾವುದೇ ಮೂಲೆಯವರಾದರೂ ಇಲ್ಲಿಗೆ ಬಂದು ಆಧಾರ್ ಪಡೆಯಬಹುದು. ಆಧಾರ್‌ಗೆ ತಕ್ಕಂತೆ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು. ಆಧಾರ್ ರೆಡಿಯಾದ ನಂತರ ಒಂದು ವಾರದಲ್ಲಿ ಹೊಸ ಆಧಾರ್ ಮನೆ ವಿಳಾಸಕ್ಕೆ ತಲುಪಲಿದೆ.

ನೂತನ ಆಧಾರ್ ಕೇಂದ್ರ ಬೆಳಗ್ಗೆ 9ರಿಂದ ಸಂಜೆ 5:30ರ ವರೆಗೆ ವಾರದ ಏಳು ದಿನವೂ ರಜೆ ರಹಿತವಾಗಿ ಕೆಲಸ ನಿರ್ವಹಿಸಲಿದೆ. 16 ಕೌಂಟರ್​​ಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ರಾಜ್ಯದ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮೂರು ಕೇಂದ್ರಗಳಲ್ಲಿ ಇಂತಹ ಬೃಹತ್ ಆಧಾರ್ ಸೇವಾ ಕೇಂದ್ರಗಳಿವೆ. ಯುಐಡಿಐಎನಿಂದ ಅನುಮತಿ ಪಡೆದ ಹೈದರಾಬಾದ್ ಮೂಲದ ಕಾರ್ವಿ ಡೇಟಾ ಮ್ಯಾ ನೇಜ್‌ಮೆಂಟ್ ಸರ್ವೀಸಸ್ ಬೃಹತ್ ಆಧಾರ್ ಸೇವಾ ಕೇಂದ್ರದ ಜವಾಬ್ದಾರಿ ಹೊತ್ತುಕೊಂಡಿದೆ.

Intro:ಆಧಾರ್Body:ಮೈಸೂರು:
ವಾಯ್ಸ್
‘ಆಧಾರ್’ ಕಾರ್ಡ್ ಪಡೆಯಲು ತಿಂಗಳುಗಂಟಲೇ ಆಧಾರ್ ಕೇಂದ್ರಗಳ ಸುಳಿದು ಬೇಸರಗೊಂಡಿರುವ ಸಾರ್ವಜನಿಕ ಸಾಂಸ್ಕೃತಿಕ ನಗರಿಯಲ್ಲಿ ಸಿಹಿ ಸುದ್ದಿ ಸಿಕ್ಕಿದೆ.
ಹೌದು, ಸಾಂಸ್ಕೃತಿಕನಗರಿಯ ಜನರಿಗೆ ಇನ್ಮೇಲೆ ಇರೋದಿಲ್ಲ ಆಧಾರ್ ಪ್ರಬ್ಲಮ್.ಅತ್ತಂದಿತ್ತ ಅಲೆದಾಡುತ್ತಿದ್ದ ಜನತೆಯ ಬವಣೆ ತಪ್ಪಿಸಲು ಮೈಸೂರಿನ ವಿಜಯನಗರದ ಮೊದಲ ಹಂತದಲ್ಲಿ ಬೃಹತ್ ಆಧಾರ್ ಸೇವಾ ಕೇಂದ್ರವನ್ನು ತೆರಲಾಗಿದ್ದು,ಆಧಾರ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲು ಬಹಳ ಸುಲಭವಾಗಿದ್ದು, ಬೇರೆ ಬೇರೆ ಕೇಂದ್ರಗಳಲ್ಲಿ ಬಸವಳಿದು ಬೇಸರಗೊಳ್ಳುವ ಸಾರ್ವಜನಿಕರಿಗೆ

ವಿಡಿಯೋ:
ಇದೇ ಮೊದಲ ಬಾರಿಗೆ ಸಾವಿರ ಮಂದಿಗೆ ಆಧಾರ್ ಕಾರ್ಡ್ ಟೋಕನ್ ವ್ಯವಸ್ಥೆ ಮೂಲಕ ಹೊಸ ಕಾರ್ಡ್ ಮಾಡುವ, ತಿದ್ದುಪಡಿ ಮಾಡುವ ಮಾಡಲಾಗುವುದು. ಮೈಸೂರಿನಲ್ಲಿರುವ ಅಂಚೆಕಚೇರಿ, ಮೈಸೂರು ಒನ್, ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಕಚೇರಿಗಳಲ್ಲಿ ಪ್ರತಿನಿತ್ಯ ೨೫ ಮಂದಿಗೆ ಮಾತ್ರ ತಿದ್ದುಪಡಿ, ಹೊಸ ಕಾರ್ಡ್ ಮಾಡಲಾಗುತ್ತಿತು. ಸರ್ವರ್ ಹೋದರೆ ದಿನವೆಲ್ಲ ಸಾರ್ವಜನಿಕರಿಗೆ ಭಂಗ.

ಆದರೆ, ವಿಜಯನಗರದಲ್ಲಿರುವ ಬೃಹತ್ ಆಧಾರ್ ಸೇವಾ ಕೇಂದ್ರದಲ್ಲಿ ಸರ್ವರ್ ಗೆ ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೇ ದೇಶದ ಯಾವುದೇ ಮೂಲೆಯವರಾದರೂ ಇಲ್ಲಿಗೆ ಬಂದು ಆಧಾರ್ ಪಡೆಯಬಹುದು. ಆಧಾರ್‌ಗೆ ತಕ್ಕಂತೆ ಅಗತ್ಯ ದಾಖಲಾತಿಗಳನ್ನ ಒದಗಿಸಬೇಕು. ಆಧಾರ್ ರೆಡಿಯಾದ ನಂತರ ಒಂದು ವಾರದಲ್ಲಿ ಹೊಸ ಆಧಾರ್ ಮನೆ ವಿಳಾಸಕ್ಕೆ ತಲುಪಲಿದೆ.

ಬೆಳಗ್ಗೆ ೯ ರಿಂದ ಸಂಹೆ ೫:೩೦ರ ವರೆಗೆ ವಾರಪೂರ್ತಿ ರಜೆರಹಿತವಾಗಿ ಕೆಲಸ ನಿರ್ವಹಿಸಲಿದೆ.೧೬ ಕೌಂಟರ್ಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಣೆ. ರಾಜ್ಯದ ಮೈಸೂರು ಬೆಂಗಳೂರು, ಹುಬ್ಬಳ್ಳಿ ಮೂರು ಕೇಂದ್ರಗಳಲ್ಲಿ ಇಂತಾ ಬೃಹತ್ ಆಧಾರ್ ಸೇವಾ ಕೇಂದ್ರಗಳಿವೆ.
ಯುಐಡಿಐಎನಿಂದ  ಅನುಮತಿ ಪಡೆದ ಹೈದರಾಬಾದ್ ಮೂಲದ ಕಾರ್ವಿ ಡೇಟಾ ಮೇನೇಜ್‌ಮೆಂಟ್ ಸರ್ವೀಸಸ್ ಬೃಹತ್ ಆಧಾರ್ ಸೇವಾ ಕೇಂದ್ರವನ್ನು ನಡೆಸುತ್ತಿದೆ.

ಬೈಟ್
ಕೃಷ್ಣಪ್ರಸಾದ್, ಸೆಂಟರ್ ಮ್ಯಾನೇಜರ್,
ಎಂ.ಇ.ಚೇತನ್,ಆಪರೇಷನ್ ಮ್ಯಾನೇಜರ್
ಕಿರಂಗೂಸೂರು ಶಂಕರ್, ಸಾರ್ವಜನಿಕ

(ವಿಡಿಯೋ ಅನ್ನು ಮೊಜೊ ಮೊಬೈಲ್ ನಲ್ಲಿ ಕಳುಹಿಸಲಾಗಿದೆ)Conclusion:ಆಧಾರ್
Last Updated : Nov 12, 2019, 11:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.