ETV Bharat / state

ಒಕ್ಕಲಿಗ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡುತ್ತೇವೆಂದು ಮೂರು ಪಕ್ಷಗಳು ಹೇಳಬೇಕು: ನಂಜಾವಧೂತ ಸ್ವಾಮೀಜಿ - etv bharat kannada

ಸದ್ಯ ಇರುವ ಮೀಸಲಾತಿಯಲ್ಲಿ ಇತರೆ ಸಮುದಾಯವೂ ಇರುವುದರಿಂದ ಒಕ್ಕಲಿಗ ಸಮುದಾಯ ಸಾಕಷ್ಟು ಅವಕಾಶಗಳಿಂದ ವಂಚಿತವಾಗಿದೆ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

Nanjavadhuta Swamiji
ಒಕ್ಕಲಿಗ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡುತ್ತೇವೆಂದು ಮೂರು ಪಕ್ಷಗಳು ಹೇಳಬೇಕು:ನಂಜಾವಧೂತ ಸ್ವಾಮೀಜಿ
author img

By

Published : Mar 19, 2023, 7:53 PM IST

ಒಕ್ಕಲಿಗ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡುತ್ತೇವೆಂದು ಮೂರು ಪಕ್ಷಗಳು ಹೇಳಬೇಕು:ನಂಜಾವಧೂತ ಸ್ವಾಮೀಜಿ

ಮೈಸೂರು: ಚುನಾವಣಾ ಸಮಯ ಆಗಿರುವುದರಿಂದ ಒಕ್ಕಲಿಗ ಸಮುದಾಯವನ್ನು ಟ್ರಂಪ್​ಕಾರ್ಡ್ ಆಗಿ ಬಳಸುವ ಮೂರು ಪಕ್ಷಗಳು, ಒಕ್ಕಲಿಗ ಸಮುದಾಯಕ್ಕೆ ಎಷ್ಟು ಮೀಸಲಾತಿ ಕೊಡುತ್ತೀರಿ ಎಂಬುದನ್ನು ಘೋಷಣೆ ಮಾಡಿ ಎಂದು ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು. ನಗರದ ನೇಗಿಲಯೋಗಿ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಜಿಲ್ಲಾ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ನೇಮಕಾತಿ ಪತ್ರ ವಿತರಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಶ್ರೀ.ಬಾಲಗಂಗಾಧರನಾಥಸ್ವಾಮಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯಕ್ಕೆ ಶೇ.17ರಷ್ಟು ಮೀಸಲಾತಿ ಬೇಕೆಂಬುದು ನಮ್ಮ ಆಪೇಕ್ಷೆ. ಇಂತಹ ವೇಳೆ ಈ ಬಿಜೆಪಿ ಸರ್ಕಾರ ಹೊಸ ಮೀಸಲಾತಿಯನ್ನು ಮೌಖಿಕವಾಗಿ ಘೋಷಿಸಿ ಹೆಚ್ಚಿನ ಮೀಸಲಾತಿ ಕಲ್ಪಿಸುವ ಪ್ರಯತ್ನ ನಡೆಸಿತು. ಇಂದು ಮೀಸಲಾತಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿದ್ದು, ಸದ್ಯ ಇರುವ ಮೀಸಲಾತಿಯಲ್ಲಿ ಇತರೆ ಸಮುದಾಯವೂ ಇರುವುದರಿಂದ ಸಮುದಾಯ ಸಾಕಷ್ಟು ಅವಕಾಶಗಳಿಂದ ವಂಚಿತವಾಗಿ ವೇದನೆ ಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ರಹಿತ ಹಾಗೂ ಧರ್ಮ ರಹಿತವಾಗಿರುವ ಸಮುದಾಯ ಒಕ್ಕಲಿಗ ಸಮುದಾಯವಾಗಿದೆ. ಅಂತಹ ಸಮುದಾಯ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಎಷ್ಟು ಸಹಿಸಿಕೊಳ್ಳೋದು. ಸದ್ಯ ಸರ್ಕಾರ ಅರೆ ಕಾಲಿಕ ವರದಿಯಲ್ಲಿ ಶೇ.7.5 ಕೊಡುವುದಾಗಿ ಹೇಳಿದ್ದಾರೆ. ಇಂತಹ ವೇಳೆ ಚುನಾವಣೆ ಎದುರಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನೀವೂ ಅಧಿಕಾರಕ್ಕೆ ಬಂದರೆ ಸಮುದಾಯಕ್ಕೆ ಎಷ್ಟು ಮೀಸಲಾತಿ ಕೊಡುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಒಕ್ಕಲಿಗ ಸಮುದಾಯವನ್ನು ಟ್ರಂಪ್​​ಕಾರ್ಡ್ ರೀತಿ ಬಳಸಿಕೊಳ್ಳಲು ಆಗುವುದಿಲ್ಲ: ಚುನಾವಣೆ ವೇಳೆ ಸಮುದಾಯವನ್ನು ಟ್ರಂಪ್​​ಕಾರ್ಡ್ ರೀತಿ ಬಳಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಸಮುದಾಯ ಈಗ ಜಾಗೃತವಾಗಿದೆ. ಹೀಗಾಗಿ ಶೀಘ್ರ ಸಮುದಾಯ ಮೀಸಲಾತಿ ಘೋಷಣೆ ಮಾಡಿ ಎಂದ ಅವರು, ಜೆಡಿಎಸ್ ಎಂಎಲ್​ಸಿ ಸಿ.ಎನ್. ಮಂಜೇಗೌಡ, ಬಿಜೆಪಿ ಸಂಸದ ಪ್ರತಾಪ್​ ಸಿಂಹ ಹಾಗೂ ಶಾಸಕ ನಾಗೇಂದ್ರ ಮತ್ತು ಕಾಂಗ್ರೆಸ್ ಮುಖಂಡ ಹರೀಶ್ ಗೌಡ ಅವರಿಗೆ ನಿಮ್ಮ ಪಕ್ಷದ ನಾಯಕರಿಗೂ ಒಕ್ಕಲಿಗ ಮೀಸಲಾತಿ ಘೋಷಣೆ ಬಗ್ಗೆ ಮಾತನಾಡುವಂತೆ ತಿಳಿಸಿ ಎಂದು ಸೂಚಿಸಿದರು. ಪೆನ್‌ ಹಿಡಿಯಲು ಮೂರು ಪಕ್ಷದಲ್ಲೂ ನಮ್ಮ ಸಮುದಾಯದ ರಾಜಕಾರಣಿಗಳು ಉತ್ಸುಕರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪೆನ್ ಹಿಡಿಯುವವರು ನಮ್ಮ ಸಮುದಾಯವರೇ ಆಗಿರುತ್ತಾರೆಂದು ಪರೋಕ್ಷವಾಗಿ ಸಿಎಂ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಸಿಗಲಿದೆ ಎಂದು ಭವಿಷ್ಯ ನುಡಿದರು.

ಕೆಂಪೇಗೌಡರು ನಮ್ಮ ಸಮುದಾಯದವರು ಎಂಬುದು ನಮ್ಮ ಹೆಮ್ಮೆ: ಸಂಸದ ಪ್ರತಾಪ್​ ಸಿಂಹ ಮಾತನಾಡಿ, ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಇರುವಂತೆಯೇ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅತ್ಯದ್ಭುತವಾಗಿ ಕಾಣಿಸುತ್ತಿದೆ‌. ಇದಕ್ಕಾಗಿ ಸಚಿವ ಅಶ್ವತ್ಥನಾರಾಯಣ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ರಾಜ್ಯದ ಒಟ್ಟು ಆದಾಯವನ್ನು ಲೆಕ್ಕ ಹಾಕಿದರೆ ಶೇ.57ರಷ್ಟು ಆದಾಯ ಬೆಂಗಳೂರು ಒಂದರಿಂದಲೇ ಬರುತ್ತಿದೆ. 400 ವರ್ಷದ ಹಿಂದೆ ಇಂತಹದೊಂದು ನಗರ ನಿರ್ಮಿಸಿ ಪ್ರತಿಯೊಬ್ಬರಿಗೂ ಜಾಗ ಮಾಡಿಕೊಟ್ಟ ಕೆಂಪೇಗೌಡರು ನಮ್ಮ ಸಮುದಾಯದವರು ಎಂಬುದು ನಮ್ಮ ಹೆಮ್ಮೆ ಆಗಿದೆ. ವಿಧಾನಸೌಧ ನಿರ್ಮಿಸಿದ ಕೆಂಗಲ್‌ ಹನುಮಂತಯ್ಯ, ವಿಕಾಸ ಸೌಧ ಹಾಗೂ ಮೈಸೂರು-ಬೆಂಗಳೂರು ನಾಲ್ಕು ಪಥದ ರಸ್ತೆ ನಿರ್ಮಿಸಿದ ಶ್ರೇಯಸ್ಸು ಎಸ್‌.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

ಅಂತೆಯೇ ರಾಜ್ಯದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಯಾರಾದರೂ ಆಲೋಚನೆ ಮಾಡಿ ಅದನ್ನು ಜಾರಿ ಮಾಡಿದ್ದಾರೆಂದರೆ ಅದು ಹೆಚ್‌.ಡಿ.ದೇವೇಗೌಡರು ಮಾತ್ರ. ಹೀಗೆ ಎಲ್ಲಾ ಸಮಾಜದ ಸೇವೆ ಮಾಡುವ‌ ಮೂಲಕ ಸಮುದಾಯಕ್ಕೆ ಶ್ರೇಯಸ್ಸು ತರಬೇಕು. ದೇವೇಗೌಡರು ಎಲ್ಲಾ ಸಮುದಾಯದವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ನಮ್ಮ ಸಮುದಾಯದ ನಾಯಕರು ಉಳಿದ ಸಮಾಜವೂ ಗೌರವ ಕೊಡುವ ರೀತಿಯಲ್ಲಿ ಬೆಳೆಯಬೇಕೆಂಬ ಕಲ್ಪನೆ ಹಾಕಿಕೊಟ್ಟಿದ್ದು, ಅದರಂತೆ ನಾವೆಲ್ಲರೂ ಸಾಗೋಣ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಬೆಂಗಳೂರಿನ ವೈದ್ಯರಾದ ಡಾ.ಅಂಜನಪ್ಪ, ಸಹಾಯಕ ಪೋಲಿಸ್ ಆಯುಕ್ತ ಶಾಂತಮಲ್ಲಪ್ಪ, ಪ್ರಾಧ್ಯಾಪಕ ಡಾ. ಬಿ.ಎನ್.ರವೀಶ್, ಸುಯೋಗ ಆಸ್ಪತ್ರೆಯ ವೈದ್ಯ ಡಾ.ಸಿ.ಪಿ.ಯೋಗಣ್ಣ, ಲಯನ್ ಕ್ಲಬ್ ಅಧ್ಯಕ್ಷೆ ಪ್ರತಿಮಾ ಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಇಂಜಿನೀಯರ್ ಎಂ.ಸಿ. ನಾಗೇಶ್ ಮೂರ್ತಿ, ಬಿಲ್ಡರ್ ರವಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದ ರಾಜು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಅವರಿಗೆ ಡಾ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಲ್.ನಾಗೇಂದ್ರ ವಹಿಸಿದ್ದರು. 55ಮಂದಿ ಪದಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ನೇಮಕಾತಿ ಪತ್ರ ವಿತರಿಸಿದರು. ಕಾಂಗ್ರೆಸ್ ಮುಖಂಡ ಹರೀಶ್‌ಗೌಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು.

ಇದನ್ನೂ ಓದಿ:ಚುನಾವಣೆ ಹೊಸ್ತಿಲಲ್ಲಿ ಸಾಲು ಸಾಲು ಪ್ರತಿಮೆಗಳ ಅನಾವರಣ.. ವಿವಿಧ ಸಮುದಾಯದ ಮತಬೇಟೆಗೆ ಬಿಜೆಪಿ ತಂತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.