ETV Bharat / state

ನಂಜನಗೂಡು ವಸತಿ ಶಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು - stay awat from electricity

ವಿದ್ಯುತ್ ಸ್ಪರ್ಶಿದಿಂದ ಬಾಲಕ ಸಾವು- ತುಂಡಾದ ವಯರ್​ನಿಂದ ಈ ದುರ್ಘಟನೆ-ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

nanjangudu-7-year-old-boy-died-due-to-electric-shock
ನಂಜನಗೂಡು: ವಿದ್ಯುತ್ ಸ್ಪರ್ಶಿಸಿ 7 ವರ್ಷದ ಬಾಲಕ ಸಾವು
author img

By

Published : Dec 25, 2022, 8:20 PM IST

ಮೈಸೂರು: ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಮಹದೇವನಗರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಭಾನುವಾರ ನಡೆದಿದೆ.

ವಸತಿ ಶಾಲೆಯ ದೈಹಿಕ ಶಿಕ್ಷಕ ಬಸವಣ್ಣ ಎಂಬುವವರ ಪುತ್ರ ಇವೀನ್(7) ಮೃತ ಬಾಲಕನಾಗಿದ್ದಾನೆ. ಶಾಲೆಯ ಭೋಜನಾಲಯದಲ್ಲಿರುವ ಮಿನರಲ್ ವಾಟರ್​ನಲ್ಲಿ ನೀರು ತುಂಬಿಸುವ ವೇಳೆ ಈ ದುರ್ಘಟನೆ ನಡೆದಿದೆ. ತುಂಡಾಗಿದ್ದ ವಿದ್ಯುತ್ ವೈರ್ ಮುಟ್ಟಿದ ಬಾಲಕ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ತಕ್ಷಣವೇ ಬಾಲಕನನ್ನೂ ನಂಜನಗೂಡಿನ ಕೃಷ್ಣ ಆಸ್ಪತ್ರೆಗೆ ರವಾನೆ ಮಾಡಲಾಯಿತು. ನಂತರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅಷ್ಟರಲ್ಲಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ಕೊಂಡೊಯ್ಯಲಾಗಿದೆ.

ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು, ಪಿಎಸ್ಐ ಆರತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕ್ರಿಸ್ಮಸ್‌ ಪ್ರಾರ್ಥನೆಗೆಂದು ಚರ್ಚ್‌ಗೆ ತೆರಳುತ್ತಿದ್ದ ಯುವಕ ಬೈಕ್​ ಅಪಘಾತದಲ್ಲಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.