ಮೈಸೂರು: ಟಿಎಚ್ಒ ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಲಾಗಿದ್ದು , ಈ ಮಧ್ಯೆ ಐಎಎಸ್ ಆಫೀಸರ್ಸ್ ಅಸೋಸಿಯೇಷನ್ ಸಿಇಒ ಪರ ನಿಂತಿದೆ.
![nanjangud ceo murder case updates](https://etvbharatimages.akamaized.net/etvbharat/prod-images/kn-mys-8-tho-suicide-case-ias-officers-letter-news-7208092_25082020203533_2508f_1598367933_694.jpg)
ಆತ್ಮಹತ್ಯೆಗೆ ಅಧಿಕಾರಿಗಳನ್ನು ಹೊಣೆ ಮಾಡುವುದು ಅನ್ಯಾಯ, ನಾಗೇಂದ್ರ ಅವರ ಆತ್ಮಹತ್ಯೆಗೆ ಸಿಇಒ ಪ್ರಶಾಂತ್ ಅವರ ಪ್ರೇರೆಪಿಸಿದ ಅಂಶ ಸಾಬೀತು ಆಗಿಲ್ಲ , ಜೊತೆಗೆ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಅವರ ಆತ್ಮಸ್ಥೈರ್ಯವನ್ನು ತಗ್ಗಿಸಿದೆ ಎಂದು ಅಸೋಸಿಯೇಷನ್ ಪತ್ರಿಕಾ ಹೇಳಿಕೆ ನೀಡಿದೆ.
ಕೋವಿಡ್ ಸಂದರ್ಭದಲ್ಲಿ ಐಎಎಸ್ ಅಧಿಕಾರಿಗಳು ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ ಕೋವಿಡ್ ಕರ್ತವ್ಯದಲ್ಲಿ 24\7 ಕೆಲಸ ನಿರ್ವಹಿಸಿದ್ದಾರೆ. ಕ್ಷೇತ್ರ ಮಟ್ಟದಲ್ಲಿ ಎಲ್ಲಾ ಅಧಿಕಾರಿಗಳು ಹಾಕುವ ಶ್ರಮಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡಬೇಕು ಹಾಗೂ ಅಧಿಕಾರಿಗಳಿಗೆ ಬೆಂಬಲ ನೀಡಬೇಕೆಂದು ಐಎಎಸ್ ಆಫೀಸರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿಕೊಂಡು ಪತ್ರ ಬರೆದಿದೆ.