ETV Bharat / state

ಮೈಸೂರು: ₹1.34 ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ ವಾಪಸ್ - ಪ್ರಾಪರ್ಟಿ ರಿಟರ್ನ್​ ಪರೇಡ್

ಮೈಸೂರು ಜಿಲ್ಲಾ ಪೊಲೀಸರು 63 ಪ್ರಕರಣಗಳನ್ನು ಭೇದಿಸಿ ವಶಪಡಿಸಿಕೊಂಡ ವಸ್ತುಗಳನ್ನು ಇಂದು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

mysuru-police-today-held-property-return-parade-in-mysuru
ಮೈಸೂರಿನಲ್ಲಿ ಪ್ರಾಪರ್ಟಿ ರಿಟರ್ನ್​ ಪರೇಡ್​: 1.34 ಕೋಟಿ ರೂ. ಮೌಲ್ಯದ ವಸ್ತುಗಳು ವಾರಸುದಾರರಿಗೆ ವಾಪಸ್
author img

By

Published : Aug 11, 2023, 6:44 PM IST

Updated : Aug 11, 2023, 10:29 PM IST

1.34 ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ ಹಿಂದಿರುಗಿಸಿ ಮೈಸೂರು ಪೊಲೀಸರು

ಮೈಸೂರು: ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 63 ಪ್ರಕರಣಗಳನ್ನು ಬಗೆಹರಿಸಿ 1.34 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಇಂದು ಡಿಐಜಿ ಬೋರಲಿಂಗಯ್ಯ ನೇತೃತ್ವದಲ್ಲಿ ವಾರಸುದಾರರಿಗೆ ವಿತರಿಸಿದರು. ನಗರದ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಲೆ, ಸುಲಿಗೆ, ದರೋಡೆ, ಸರಗಳ್ಳತನ, ವಾಹನ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಹಸ್ತಾಂತರಿಸಲಾಯಿತು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, "ಒಂದು ಕೊಲೆ, ಎರಡು ದರೋಡೆ, ನಾಲ್ಕು ಸುಲಿಗೆ, ಎರಡು ಸರಗಳ್ಳತನ, 38 ಕಳ್ಳತನ ಪ್ರಕರಣಗಳು, 15 ವಾಹನ ಕಳ್ಳತನ, ಒಂದು ವಂಚನೆ ಪ್ರಕರಣ ಸೇರಿದಂತೆ ಒಟ್ಟಾರೆ ಪ್ರಕರಣಗಳಲ್ಲಿ 1,34,66,697 ರೂ.ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 1 ಕೆಜಿ 770 ಗ್ರಾಂ ಚಿನ್ನ, 920 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 81,02,950 ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.

"12,62,147 ರೂ. ಹಣ, 36.23 ಲಕ್ಷ ರೂ. ವೌಲ್ಯದ 22 ವಾಹನಗಳು, 80,800 ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕ್ ವಸ್ತುಗಳು, 7 ಹಸು, 13 ಕುರಿಗಳು, 3.6 ಲಕ್ಷ ರೂ.ವೌಲ್ಯದ 43 ಪರಿವಾಳಗಳು, 1 ಲಕ್ಷ ರೂ.ವೌಲ್ಯದ ದೇವರ ವಿಗ್ರಹಗಳು, 6.92 ಲಕ್ಷ ರೂ.ವೌಲ್ಯದ ರೈತ ಉಪಯೋಗಿ ವಸ್ತುಗಳು, ಸಿಇಐಆರ್ ಪೋರ್ಟಲ್ ಮುಖಾಂತರ 25 ಲಕ್ಷ ರೂ.ವೌಲ್ಯದ 192 ಮೊಬೈಲ್ ಫೋನ್​ಗಳನ್ನು ಪತ್ತೆ ಮಾಡಲಾಗಿದೆ" ಎಂದು ತಿಳಿಸಿದರು.

ದಕ್ಷಿಣ ವಲಯದ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ, ನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಸರಗಳ್ಳತನಗಳು ನಡೆಯುತ್ತಿವೆ. ನಗರದ ಪ್ರದೇಶದಲ್ಲಿ ಅಲರ್ಟ್ ಆಗಿರುತ್ತಾರೆ ಎಂದು ತಿಳಿದಿರುವ ಸರಗಳ್ಳರು, ಗ್ರಾಮೀಣ ಮತ್ತು ನಗರದ ಹೊರವಲಯಗಳಲ್ಲಿ ಇರುವ ಜಮೀನುಗಳಲ್ಲಿ ಕೆಲಸ ಮಾಡುವ, ದನ - ಕುರಿಗಳನ್ನು ಕಾಯುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಾರೆ. ಜಮೀನುಗಳಲ್ಲಿ, ಹೊರವಲಯದ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಇರುವುದಿಲ್ಲ. ಆದ್ದರಿಂದ ಕಳ್ಳರು ಈ ದಾರಿ ಹುಡುಕಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ" ಎಂದರು.

"ಗಾಂಜಾ ನಿಯಂತ್ರಣಕ್ಕೂ ಕ್ರಮ ಜರುಗಿಸಿದ್ದು, ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ 20 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಮಡಿಕೇರಿಯಲ್ಲಿ ಗಾಂಜಾ, ಮಾದಕ ವಸ್ತುಗಳ ಸಂಬಂಧ 20 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ಕೆಲ ದಿನಗಳಿಂದ ನಿಯಂತ್ರಣ ಬಂದಿದೆ. ಹುಣಸೂರು ರಸ್ತೆ, ತಿ.ನರಸೀಪುರ ಮತ್ತು ಶ್ರೀರಂಗಪಟ್ಟಣ, ನಾಗಮಂಗಲ ರಸ್ತೆಗಳಲ್ಲಿ ಬೈಕ್ ಅಪಘಾತಗಳು ಹೆಚ್ಚಿದ್ದು, ಇದನ್ನು ನಿಯಂತ್ರಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರು ಕೂಡ ಪೊಲೀಸರೊಂದಿಗೆ ಕೈ ಜೋಡಿಸಿದರೆ ಅಪಘಾತವನ್ನು ಹಾಗೂ ಅಪರಾಧ ಕೃತ್ಯಗಳನ್ನು ತಡೆಯಬಹುದು" ಎಂದು ಹೇಳಿದರು.

ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ಪ್ರಶಂಸಾ ಪತ್ರವನ್ನು ವಿತರಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದು ಹೋಗಿದ್ದ ವಸ್ತುಗಳನ್ನು ಪೊಲೀಸರಿಂದ ವಾಪಸ್ ಪಡೆದ ವಾರಸುದಾರರಲ್ಲಿ ಸಂತಸ ಮೂಡಿತ್ತು.

ಇದನ್ನೂ ಓದಿ: Chian snaching: ವೃದ್ಧೆಯನ್ನು ಹಿಂಬಾಲಿಸಿ ಸರಗಳ್ಳತನ; ಬೆಂಗಳೂರಿನಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯ

Last Updated : Aug 11, 2023, 10:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.