ETV Bharat / state

ಭಿಕ್ಷುಕಿ ಕೈಗೆ ಸಿಕ್ಕ ಪೊಲೀಸರಿಗೆ ಸಂಬಂಧಿಸಿದ ದಾಖಲೆಗಳು... ಘಟನೆ ಸುತ್ತ ಅನುಮಾನದ ಹುತ್ತ?

ನಗರದ ಅಶ್ವಾರೋಹಿ ದಳದ ಕಮಾಂಡೆಂಟ್ ಕಚೇರಿಯಲ್ಲಿ ಕೆಲಸ ಮಾಡುವ ಪೊಲೀಸರ ಸೇವೆಗೆ ಸಂಬಂಧಿಸಿದ ಫೈಲ್​​ಗಳು ಕಚೇರಿ ಪಕ್ಕದ ರಸ್ತೆಯಲ್ಲಿ ಬಿದ್ದಿವೆ. ಇದನ್ನು ನೋಡಿದ ಭಿಕ್ಷುಕಿ ಆ ಫೈಲ್​​ಗಳನ್ನು ಎತ್ತಿಕೊಂಡು ಬಂದು ತಾನು ಕುಳಿತುಕೊಳ್ಳುವ ಸೈಕಲ್ ಸ್ಟ್ಯಾಂಡ್ ಬಳಿ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

mysuru-police-file-missing-case-news
ಫೈಲ್ ಸುತ್ತಾ ಅನುಮಾನದ ಹುತ್ತಾ
author img

By

Published : Nov 12, 2020, 5:16 PM IST

ಮೈಸೂರು: ಅಶ್ವಾರೋಹಿ ದಳದ ಕಮಾಂಡೆಂಟ್ ಕಚೇರಿಯ ಪೊಲೀಸರ ಫೈಲ್​ಗಳು ಭಿಕ್ಷುಕಿ ಕೈಗೆ ಸಿಕ್ಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಅಶ್ವಾರೋಹಿ ದಳದ ಕಮಾಂಡೆಂಟ್ ಕಚೇರಿಯಲ್ಲಿ ಕೆಲಸ ಮಾಡುವ ಪೊಲೀಸರ ಸೇವೆಗೆ ಸಂಬಂಧಿಸಿದ ಫೈಲ್​​ಗಳು ಕಚೇರಿ ಪಕ್ಕದ ರಸ್ತೆಯಲ್ಲಿ ಬಿದ್ದಿವೆ. ಇದನ್ನು ನೋಡಿದ ಭಿಕ್ಷುಕಿ ಆ ಫೈಲ್​​ಗಳನ್ನು ಎತ್ತಿಕೊಂಡು ಬಂದು ತಾನು ಕುಳಿತುಕೊಳ್ಳುವ ಸೈಕಲ್ ಸ್ಟ್ಯಾಂಡ್ ಬಳಿ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗ್ಗೆ ಟ್ರಿಣ್ ಟ್ರಿಣ್ ಸೈಕಲ್ ನೋಡಿಕೊಳ್ಳುವ ವ್ಯಕ್ತಿಗಳು ಈ ಫೈಲ್ ನೋಡಿ ಪೊಲೀಸರಿಗೆ ವಾಪಸ್ ಕೊಟ್ಟಿದ್ದಾರೆ.

ಪ್ರಮೋಷನ್ ತಪ್ಪಿಸಲು ನಡೆದಿತ್ತಾ ಈ‌ ಕೃತ್ಯ?

ಮೌಂಟೆಡ್ ಕಮಾಂಡೆಂಟ್ ಕಚೇರಿಯಲ್ಲಿ ಕೆಲಸ ಮಾಡುವ ಮೂವರು ಕಾನ್ಸ್​​ಟೇಬಲ್​​ಗಳಿಗೆ ಸೇರಿದ ಫೈಲ್ ಇವಾಗಿದ್ದು, ಈ ಕಚೇರಿಯಲ್ಲಿ ಕೆಲಸ ಮಾಡುವ ಆಡಳಿತಾಧಿಕಾರಿಗಳು, ಕೆಳ ಹಂತದ ಸಿಬ್ಬಂದಿಗೆ ಪ್ರಮೋಷನ್ ತಪ್ಪಿಸಲು ಫೈಲ್ ಹೊರಗೆ ಎಸೆದರಾ? ಎಂಬ ಅನುಮಾನ ಮೂಡಿಸಿದೆ. ಈ‌ ಬಗ್ಗೆ ಮೌಂಟೆಡ್ ಪೊಲೀಸ್ ಕಮಾಂಡೆಂಟ್ ಡಿಸಿಪಿ ನಾಗರಾಜು ಅವರನ್ನು ಈಟಿವಿ ಭಾರತ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಘಟನೆ ನಡೆದಿರುವುದು ನಿಜ. ಈ ಬಗ್ಗೆ ಮಾಧ್ಯಮಗಳ ಜೊತೆ ನಂತರ ಮಾತನಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.