ಮೈಸೂರು : ಅಕ್ರಮವಾಗಿ ವಾಸವಿದ್ದ ಇಬ್ಬರು ಬಾಂಗ್ಲಾ ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಂಗ್ಲಾದೇಶದ ಸಾತ್ ಕಿರ ಜಿಲ್ಲೆ ಸಾಮ್ ನಗರದ ಶಿರ್ ಗುಲ್ ಘಾಟ್ ನಿವಾಸಿಗಳಾದ ಮೊಹಮದ್ ಅಬ್ದುಲ್ಲಾ (27) ಮತ್ತು ಮೊಹಮ್ಮದ್ ಹಬೀಬುಲ್ಲಾ (23) ವರಿಇಬ್ಬರೂ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ಕಳೆದ 1 ವರ್ಷದಿಂದಲೂ ವಾಸವಿದ್ದರು. ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ರಿಷಿ ಫ್ಯಾಬ್ರಿಕ್‌ನಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು.
ಇವರ ಬಗ್ಗೆ ಅನುಮಾನ ಬಂದು ಪೊಲೀಸರು ಪರಿಶೀಲನೆ ಮಾಡಿದ್ದರು. ಇವರ ಬಳಿ ಪಾಸ್‌ಪೋರ್ಟ್, ವೀಸಾ ಯಾವುದೂ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಪಾಸ್ ಪೋರ್ಟ್ ಕಾಯ್ದೆ 1976 ಹಾಗೂ ಭಾರತೀಯ ವಿದೇಶಿಯರ ಕಾಯ್ದೆ 1946ರ ಅನ್ವಯ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.