ಮೈಸೂರು : ಈ ಬಾರಿಯ ಸಾಂಪ್ರದಾಯಿಕ ದಸರಾದಲ್ಲಿ 10 ಕಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮುಖ್ಯವಾಗಿ, ಅಂಬಾವಿಲಾಸ ಅರಮನೆಯ ಮುಂಭಾಗದ ಸಾಂಸ್ಕೃತಿಕ ವೇದಿಕೆ ಸೇರಿದಂತೆ ನಗರದ ಇತರ 9 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಏರ್ಪಾಡಾಗಿವೆ.
ಸುಗಮ ಹಾಗೂ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಇತರೆ ಪ್ರಕಾರಗಳ ನೃತ್ಯ, ನಾಟಕ, ಜಾನಪದ, ನಿರೂಪಣೆ, ಜಾದು, ಹರಿಕಥೆ, ಭಕ್ತಿ ಗೀತೆಗಳು, ತತ್ವಪದಗಳು, ವಾದ್ಯ, ಸೂತ್ರ ಸಲಾಕೆ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು 252 ಕಲಾ ತಂಡಗಳಿಂದ 4,000ಕ್ಕೂ ಹೆಚ್ಚಿನ ಕಲಾವಿದರಿಗೆ ಅವಕಾಶ ಸಿಗಲಿದೆ.
ಈ ಕಾರ್ಯಕ್ರಮಗಳು ನಗರದ ಪ್ರಮುಖ ತಾಣಗಳಾದ ಕಲಾಮಂದಿರ, ನಾದಬ್ರಹ್ಮ ಸಂಗೀತಾ ಸಭಾ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಆವರಣ, ಜಗನ್ಮೋಹನ ಅರಮನೆ, ಗಾನಭಾರತಿ, ಚಿಕ್ಕ ಗಡಿಯಾರ ಆವರಣದಲ್ಲಿ ನಡೆಯುತ್ತವೆ.
ಅರಮನೆ ವೇದಿಕೆಯ ಕಾರ್ಯಕ್ರಮಗಳು:
ಅಕ್ಟೋಬರ್ 15: ಸಂಜೆ 5 ಗಂಟೆಗೆ ನಾದಸ್ವರ. ಯದುಕುಮಾರ್ ನಡೆಸಲಿದ್ದಾರೆ. ಸಂಜೆ 5:30ಕ್ಕೆ ವೀರಭದ್ರ ಕುಣಿತ ಕಾರ್ಯಕ್ರಮವನ್ನು ರಾಜಪ್ಪ ಮತ್ತು ಮಲ್ಲೇಶ್ ತಂಡಗಳು ನಡೆಸಿಕೊಡಲಿವೆ. ಸಂಜೆ 6:00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ. ಸಂಜೆ 7:00ಕ್ಕೆ ನೃತ್ಯ ರೂಪಕ ಕಾರ್ಯಕ್ರಮವನ್ನು ಚಿತ್ರನಟಿ ಭಾವನ ರಾಮಣ್ಣ ತಂಡ ನಡೆಸಲಿದೆ. ರಾತ್ರಿ 8:00ಕ್ಕೆ ಸಂಗೀತ ಯಾನ ಕಾರ್ಯಕ್ರಮವನ್ನು ಜೋಗಿ ಖ್ಯಾತಿಯ ಸುನೀತಾ-ಅಜಯ್ ವಾರಿಯರ್ ತಂಡ ನಡೆಸಿಕೊಡಲಿದೆ.
ಅಕ್ಟೋಬರ್ 16: ಸಂಜೆ 5:00ಕ್ಕೆ ನಾದಸ್ವರ ಕಾರ್ಯಕ್ರಮ ಪುಟ್ಟಸ್ವಾಮಿ ಮತ್ತು ತಂಡ ನಡೆಸಲಿವೆ. 5:30ಕ್ಕೆ ಮಹಿಳಾ ಡೊಳ್ಳು ಕುಣಿತ ಕಾರ್ಯಕ್ರಮವನ್ನು ಮೈಸೂರಿನ ರಮ್ಯಾ, ಮಂಡ್ಯದ ಸವಿತಾ ಚೀರು ಕುನ್ನಯ್ಯ ತಂಡ ನಡೆಸಿಕೊಡಲಿದೆ. ಸಂಜೆ 6:00 ಶಾಸ್ತ್ರೀಯ ವಾದ್ಯ ವೃಂದ ಕಚೇರಿಯನ್ನ ವಿಡ್ವಾನ್ ಪೂಜೆರ ನಡೆಸಿಕೊಡಲಿದೆ. ರಾತ್ರಿ 7:00ಕ್ಕೆ ಕಥಕ್ ಸಂಭ್ರಮವನ್ನು ಕಥಕ್ ಕಲಾವಿದರಾದ ಹರಿ-ಚೇತನ್ ನಡೆಸಿಕೊಡಲಿದ್ದಾರೆ. 8:00 ಗಂಟೆಗೆ ಭಾರತೀಯ ನೃತ್ಯ ವೈವಿದ್ಯಾ ಕಾರ್ಯಕ್ರಮವನ್ನು ಬೆಂಗಳೂರಿನ ಅಯನಾ ಡಾನ್ಸ್ ಕಂಪನಿ ನಡೆಸಿಕೊಡಲಿದೆ.
ಅಕ್ಟೋಬರ್ 17: ಸಂಜೆ 6:00ಕ್ಕೆ ವಾದ್ಯ ಸಂಗೀತ-ಸೀತಾರ್ ಜುಗಲ್ ಬಂದಿ ಕಾರ್ಯಕ್ರಮ ಉಸ್ತಾದ್ ರಫೀಕ್ ಖಾನ್-ವಿದ್ವಾನ್ ಅಂಕುಶ್ ಎನ್. ನಾಯಕ್ ಸಂಜೆ 7:00ಕ್ಕೆ ನಾನಾರೆಂಬುದು ನಾನಲ್ಲ ಕನ್ನಡ, ಕಡಲಾಚೆ ಸಂಗೀತ ಕಾರ್ಯಕ್ರಮವನ್ನು ಚಿಂತನೆ ವಿಕಾಸ್ ಫೀಟ್ ಪ್ರಾಜೆಕ್ಟ್ ನಡೆಸಿಕೊಡಲಿದ್ದಾರೆ. ಸಂಜೆ 8:00 ಕ್ಕೆ ಕರ್ನಾಟಕ-ಹಿಂದೂಸ್ತಾನಿ ಜುಗಲ್ ಬಂದಿ ವಾದ್ಯ ಸಂಗೀತ ಕಾರ್ಯಕ್ರಮವನ್ನು ವಿದ್ವಾನ್ ಶಶಾಂಕ್ ಸುಭ್ರಮಣ್ಯ ನಡೆಸಲಿದ್ದಾರೆ.
ಅಕ್ಟೋಬರ್ 18 : ಸಂಜೆ 5:30ಕ್ಕೆ ಭರತನಾಟ್ಯ. ಅಪರ್ಣ ವಿನೋದ್ ಮೆನನ್ ಮತ್ತು ತಂಡದಿಂದ ಸಂಜೆ 6:00ಕ್ಕೆ ಕನ್ನಡವೇ ಸತ್ಯ ಭಾವಗೀತೆ ಹಾಗೂ ಜನಪದ ಗೀತೆಗಳ ಸಂಭ್ರಮ. ಡಾಕ್ಟರ್ ಕಿಕ್ಕೇರಿ ಕೃಷ್ಣಮೂರ್ತಿ ಡಾಕ್ಟರ್ ಅಪ್ಪಗೆರೆ ತಿಮ್ಮಾಜು ಮತ್ತು ತಂಡ ನಡೆಸಿಕೊಡಲಿದೆ. ರಾತ್ರಿ 7:00ಕ್ಕೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ಮಾಸ್ ಬ್ಯಾಂಡ್ ಹಾಗೂ 8:00 ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪದ್ಮಶ್ರೀ ಶುಭ ಮುದ್ಗಲ್‌ರಿಂದ ನಡೆಯಲಿದೆ.
ಅಕ್ಟೋಬರ್ 19 : ಸಂಜೆ 5ಕ್ಕೆ ಸಂಗೀತ ನೃತ್ಯ ಸಮ್ಮಿಲನ ಕಾರ್ಯಕ್ರಮವನ್ನು ವಿಶೇಷ ಚೇತನ ಕಲಾವಿದರಿಂದ, ಸಂಜೆ 6:00 ಗಂಟೆಗೆ ನೃತ್ಯ ರೂಪಕ ಕಾರ್ಯಕ್ರಮ ಕರ್ನಾಟಕ ಕಲಾಶ್ರೀ ವಿದ್ಯಾ ರವಿಶಂಕರ್ ಮತ್ತು ತಂಡ, ಸಂಜೆ 7:00 ಗಂಟೆಗೆ ಸ್ಯಾಕ್ಸೋಫೋನ್ ಪ್ಯಾಷನ್ ಕಾರ್ಯಕ್ರಮ, ವಿದ್ವಾನ್ ಹರೀಶ್ ಪಾಂಡವ್ ಸಂಜೆ 8:00ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಟಿ.ಎಂ.ಕೃಷ್ಣ ಅವರು ನಡೆಸಲಿದ್ದಾರೆ.
ಅಕ್ಟೋಬರ್ 20 : ಸಂಜೆ 5:30ಕ್ಕೆ ಕಾವ್ಯ-ಕುಂಚ-ಗಾಯನ ಕಾರ್ಯಕ್ರಮ ಮೂಡಿಗುಂದ ಮೂರ್ತಿ ಮತ್ತು ತಂಡದಿಂದ ಸಂಜೆ 6:00 ಕ್ಕೆ, ಪಂಚಾಯತ್ ವೀಣಾ ವಾದನ ಕಾರ್ಯಕ್ರಮ ಬೆಂಗಳೂರಿನ ವಿದ್ಯುಷಿ ರೇಖಾ ಮತ್ತು ತಂಡದಿಂದ ಸಂಜೆ 7:00 ಕ್ಕೆ, ತ್ರಿವೇಣಿ ಕಾರ್ಯಕ್ರಮ ವಿಧುಷಿ ಸೋಹಿನಿ ಬೋಸ್ ಬೈನರ್ಜಿ ರಾತ್ರಿ 8:00ಕ್ಕೆ, ಜುಗಲ್ ಬಂದಿಲ್ಲ ಕಾರ್ಯಕ್ರಮ ಪಂಡಿತ್ ಕುತ್ಲೆ ಖಾನ್ ಹಾಗೂ ವಿದ್ಯುಷಿ ರಸಿಕ ಶೇಖರ್ ಮತ್ತು ತಂಡದಿಂದ ನಡೆಯಲಿದೆ.
ಅಕ್ಟೋಬರ್ 21: ಸಂಜೆ 6:00 ಕ್ಕೆ ವೇಣು ವಾದನ ಕಾರ್ಯಕ್ರಮ ಸಿ.ವಿ, ಶ್ರೀಧರ್ರಿಂದ, ಸಂಜೆ 7:00ಕ್ಕೆ ಮರೆತ ಮಣ್ಣಿನ ಹಾಡುಗಳು ಕಾರ್ಯಕ್ರಮ ಶಿಲ್ಪಾ ಮಾಡಭಿ ಅವರಿಂದ ಹಾಗೂ ರಾತ್ರಿ 8:00ಕ್ಕೆ ವೀಣಾ ಮ್ಯಾಡೊಲಿನ್ ಜುಗಲ್ ಬಂದಿಲ್ಲ ಫ್ಯೂಷನ್ ಕಾರ್ಯಕ್ರಮ, ವಿದ್ವಾನ್ ರಾಜೇಶ್ ವೈದ್ಯ -ಯು. ರಾಜೇಶ್ ನಡೆಸಿಕೊಡಲಿದ್ದಾರೆ.
ಅಕ್ಟೋಬರ್ 22: ಸಂಜೆ 6:00 ಕ್ಕೆ ರಂಗಗೀತೆ ಕಾರ್ಯಕ್ರಮ, ಅವಳಿ ಸಹೋದರಿಯರಾದ ನಿಸರ್ಗ - ವಿಸ್ಮಯ ಮತ್ತು ತಂಡದಿಂದ ಹಾಗೂ ರಾತ್ರಿ 7:00ಕ್ಕೆ ಜಯಹೇ ನಾಲ್ವಡಿ - ಹಾಡು ಹಬ್ಬ ಕಾರ್ಯಕ್ರಮವು ನಾದಬ್ರಹ್ಮ ಡಾ.ಹಂಸಲೇಖ ಮತ್ತು ತಂಡ ಪ್ರಸ್ತುತಪಡಿಸಲಿದೆ.