ETV Bharat / state

ಮೈಸೂರು ಯುವ ದಸರಾ: ಸೋನು ನಿಗಮ್ ಸಂಗೀತ ಸುರಿಮಳೆ, ಧ್ರುವ ಸರ್ಜಾ ಡೈಲಾಗ್​ಗೆ ಶಿಳ್ಳೆ ಚಪ್ಪಾಳೆ

ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಸಿನಿಮಾ​ ನಟ ನಟಿಯರು, ಗಾಯಕರು ಸರಣಿ ಕಾರ್ಯಕ್ರಮಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸಿದರು.

Sonu Nigam
ಗಾಯಕ ಸೋನು ನಿಗಮ್
author img

By

Published : Oct 2, 2022, 7:35 AM IST

ಮೈಸೂರು: ಹೊರಗೆ ಮೋಡ ಕವಿದ ವಾತಾವರಣವಿದ್ದರೂ ಸಹ ಧಾರಾಕಾರವಾಗಿ ಸುರಿದಿದ್ದು ಮಾತ್ರ ಗಾಯಕ ಸೋನು ನಿಗಮ್ ಹಾಗೂ ಡಾ.ಶಮಿತ ಮಲ್ನಾಡ್ ಅವರ ಕಂಠ ಸಿರಿಯಿಂದ ಬಂದ ಸಂಗೀತದ ಸುರಿಮಳೆ ಹಾಗೂ ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ಆಗಮನದಿಂದ ಬಂದ ಶಿಳ್ಳೆ, ಚಪ್ಪಾಳೆ.

ಹೌದು, ನಗರದ ಮಹಾರಾಜ ಮೈದಾನದಲ್ಲಿ ನಡೆದ 5ನೇ ದಿನದ ಯುವ ದಸರಾದಲ್ಲಿ ಧ್ರುವ ಸರ್ಜಾ ಅವರು ವೇದಿಕೆ ಮೇಲೆ ನೆರೆದಿದ್ದ ಅಭಿಮಾನಿಗಳಿಗಾಗಿ ತಮ್ಮದೇ ಚಿತ್ರದ ಡೈಲಾಗ್ ಹೊಡೆದು ಫ್ಯಾನ್ಸ್​ ಹುಚ್ಚೆದ್ದು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಮೈಸೂರು ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡವು ಕರ್ನಾಟಕದ ಚರಿತ್ರೆಯನ್ನು ಸಾರುವ ಹಾಗೂ ಕರ್ನಾಟಕವನ್ನು ಆಳಿದ ರಾಜ ಮಹಾರಾಜರ ಸಾಹಸಗಾಥೆಗಳನ್ನು ಆಯ್ದ ಚಿತ್ರೆಗೀತೆಗಳ ಮೂಲಕ ಅದ್ಭುತವಾಗಿ ನೃತ್ಯ ಪ್ರದರ್ಶಿಸಿ ದಸರಾಗೆ ಆಗಮಿಸುತ್ತಿದ್ದ ಸಭಿಕರನ್ನು ಸ್ವಾಗತಿಸಿದರು.

ಮೈಸೂರು ಯುವ ದಸರಾ 2022

ಇದನ್ನೂ ಓದಿ: ಮೈಸೂರು ಯುವ ದಸರಾ: ಮಳೆ ನಡುವೆಯೂ ಮನರಂಜನೆಯಲ್ಲಿ ಮಿಂದೆದ್ದ ಜನ

ನಂತರ ಸೋನು ನಿಗಮ್ ಬರುತ್ತಿದ್ದಂತೆ ಪ್ರತಿಯೊಬ್ಬರೂ ಎದ್ದು ನಿಂತು ಸ್ವಾಗತಿಸಿದರು. ಬಳಿಕ ಸೋನು ನಿಗಮ್ ಹಾಡಿನ ಮೂಲಕ ತಮ್ಮದೇ ಆದ ಸಂಗೀತ ಲೋಕಕ್ಕೆ ಎಲ್ಲರನ್ನು ಕರೆದೊಯ್ದರು. ಈ ವೇಳೆ ಕನ್ನಡಿಗರು ಕೇವಲ ನನ್ನ ಅಭಿಮಾನಿಗಳಲ್ಲ, ನನ್ನ ಮನೆಯವರಿದ್ದಂತೆ. ನನಗೂ ಕನ್ನಡಕ್ಕೂ ಹಾಗೂ ಕನ್ನಡಿಗರಿಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ.., ಗಣೇಶ್ ಚಿತ್ರದ ನೀ ಸನಿಹಕೆ ಬಂದರೆ ಹೃದಯದ ಗತಿ ಏನು.., ಅನಿಸುತಿದೆ ಯಾಕೋ ಇಂದು.. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. ಪುನೀತ್ ರಾಜ್‍ಕುಮಾರ್ ಅಭಿನಯದ ಪರಮಾತ್ಮ ಚಿತ್ರದ ಪರವಶನಾದೆನು ಅರಿಯುವ ಮುನ್ನವೆ.., ಸುದೀಪ್ ಚಿತ್ರದ ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ.. ಸೇರಿದಂತೆ ಅನೇಕ ಹಾಡುಗಳನ್ನು ಹಾಡಿ ರಸದೌತಣ ಉಣಬಡಿಸಿದರು.

ಬೆಳ್ಳಿ ಕಾಲುಂಗುರ ಚಿತ್ರದ ಕೇಳಿಸದೆ ಕಲ್ಲು ಕಲ್ಲಿನಲ್ಲಿ, ಮಹದೇಶ್ವರ ಕುರಿತ ಜಾ‌ಪದ ಗೀತೆಯಾದ ಚೆಲ್ಲಿದರೂ ಮಲ್ಲಿಗೆಯಾ ಹಾಡಿಗೆ ಹಾಗೂ ಜೋಗಿ ಚಿತ್ರದ ಏಳು ಮಲೆ ಏರಿ ಕುಂತಾವ್ನೆ ಮಾದೇವ ಹಾಡಿಗೆ, ರಂಗಿತರಂಗ ಚಿತ್ರದ ಹಾಡಿಗೆ ಮತ್ತು ಕೊಡವ ನೃತ್ಯ ಸೇರಿದಂತೆ ಕರ್ನಾಟಕದ ಹಲವಾರು ಸ್ಥಳೀಯ ನೃತ್ಯಗಳನ್ನು ಅಮೋಘವಾಗಿ ಪ್ರದರ್ಶಿಸಿದ ಮೈಸೂರಿನ ಶ್ರೀ ವಾಣಿ ವಿಲಾಸ ಅರಸು ಪ್ರಥಮ ದರ್ಜೆ ಕಾಲೇಜಿನ ತಂಡದವರು ನೆರೆದಿದ್ದ ಜನರನ್ನು ರಂಜಿಸಿದರು.

Sonu Nigam
ಗಾಯಕ ಸೋನು ನಿಗಮ್

ಇದನ್ನೂ ಓದಿ: ಮೈಸೂರು ಯುವ ದಸರಾ: ಗುರು ಕಿರಣ್ ಗಾಯನಕ್ಕೆ ಮನಸೋತ ಪ್ರೇಕ್ಷಕರು

ಜೀ ಕನ್ನಡ ಖ್ಯಾತಿಯ ಪುರುಷೋತಮ್ ಅವರ ತಂಡದ ಪ್ರಿಯ ಅವರು ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಿನ್ನ ನೋಡಿ ಸುಮ್ನೆ ಹೆಂಗಿರಲಿ, ಪುರುಷೋತ್ತಮ್ ಮತ್ತು ಪ್ರಿಯ ಅವರು ಕಿಚ್ಚ ಸುದೀಪ್ ಚಿತ್ರದ ರಾರಾ ರಕ್ಕಮ್ಮ, ಶರಣ್ ಚಿತ್ರದ ಯಕ್ಕ ನಿನ್ ಮಗ್ಳು ನಂಗೆ ಚಿಕ್ಕವಳಗಲ್ವಾ ಮತ್ತು ಏಕ್ ಲವ್ಯ ಚಿತ್ರದ ಅನಿತಾ ಓ ಅನಿತಾ ಹಾಡನ್ನು ಹಾಡುವುದರ ಜೊತೆಗೆ ಮನಮೋಹಕವಾಗಿ ನರ್ತಿಸಿದರು.

ಜೋಗಿ ಸುನೀತ ಅವರು ಜೋಗಿ ಚಿತ್ರದ ಎಲ್ಲೋ ಜೋಗಪ್ಪ ನಿನ್ ಅರಮನೆ ಹಾಡನ್ನು ಹಾಡಿದ್ರೆ, ಗಣೇಶ್ ಕಾರಂತ್ ಅವರು ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ ಹಾಡನ್ನು ಹಾಡಿದರು. ಬಿಗ್ ಬಾಸ್ ಸ್ಪರ್ಧಿ ಕಿಶನ್ ಅವರು ಕೆ.ಜಿ.ಎಫ್ 2 ಹಾಗೂ ವಿಕ್ರಾಂತ್ ರೋಣ ಮತ್ತು ಟಗರು ಚಿತ್ರದ ಹಾಡಿಗೆ ಕುಣಿದು ನೋಡುಗರನ್ನು ಸೆಳೆದರು.

ರತ್ನನ್ ಪ್ರಪಂಚ ಚಿತ್ರದ ನಟರಾದ ಉಡಾಳ್ ಬಾಬು ಎಂದೇ ಖ್ಯಾತಿ ಪಡೆದ ಪ್ರಮೋದ್ ಅವರು ಮಾತನಾಡಿ, ಮೈಸೂರು ಜನರಿಗೆ ತುಂಬಾ ಎನರ್ಜಿಯಿದ್ದು, ಎಲ್ಲವನ್ನು ಮರೆತು ಒಂದಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾರೆ ಎಂದು ಹೇಳಿದರು. ಬಳಿಕ ರತ್ನನ್ ಪ್ರಪಂಚ ಚಿತ್ರದ ಡೈಲಾಗ್ ಹೊಡೆದು ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.