ETV Bharat / state

ಹೆಚ್ಚುವರಿ ಪದವಿ ತರಗತಿ ತೆರೆಯಲು ಮೈಸೂರು ವಿವಿ ಸಿದ್ಧ: ಕುಲಪತಿ ಹೇಮಂತ್ ಕುಮಾರ್ - ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಹೇಮಂತ್ ಕುಮಾರ್ ಮಾಹಿತಿ

ಈ ವರ್ಷ ಅಂದಾಜು 2 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ಪದವಿ ತರಗತಿಗಳಿಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ಮೈಸೂರು ವಿವಿಯ ಪದವಿ ತರಗತಿಗಳಿಗೆ 20 ಸಾವಿರ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು ಎಂದು ಕುಲಪತಿ ಹೇಮಂತ್ ಕುಮಾರ್ ಮಾಹಿತಿ ನೀಡಿದರು‌.

ಹೆಚ್ಚುವರಿ ಪದವಿ ತರಗತಿ ತೆರೆಯಲು ಮೈಸೂರು ವಿವಿ ಸಿದ್ಧ

author img

By

Published : Jul 23, 2021, 5:28 PM IST

Updated : Jul 23, 2021, 7:24 PM IST

ಮೈಸೂರು: ಪಿಯುಸಿ‌‌ ಫಲಿತಾಂಶ ಹೆಚ್ಚಾಗಿರುವುದರಿಂದ ಪದವಿ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಮೈಸೂರು ವಿವಿ ಸಿದ್ಧವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚುವರಿ ಪದವಿ ತರಗತಿ ತೆರೆಯಲು ಮೈಸೂರು ವಿವಿ ಸಿದ್ಧ

ಈಟಿವಿ ಭಾರತ ಜೊತೆ ಮಾತನಾಡಿದ ಮೈಸೂರು ವಿವಿ ಕುಲಪತಿಗಳು, ಈ ವರ್ಷ ಪಿಯುಸಿ ಫಲಿತಾಂಶ ಹೆಚ್ಚಾಗಿದ್ದು, ಪದವಿ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ ಖಾಸಗಿ ಕಾಲೇಜುಗಳು ಸೇರಿ 220 ಕಾಲೇಜುಗಳಿವೆ. ಕಾಲೇಜಿಗೆ ದಾಖಲಾತಿ ಹೆಚ್ಚಿನ ಬೇಡಿಕೆ ಬಂದರೆ, ಹೆಚ್ಚುವರಿ ಸೀಟುಗಳನ್ನು ನೀಡಲು ಸಿದ್ದವಾಗಿದ್ದೇವೆ ಎಂದರು.

ಈ ವರ್ಷ ಅಂದಾಜು 2 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ಪದವಿ ತರಗತಿಗಳಿಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರತಿವರ್ಷ ಮೈಸೂರು ವಿವಿಯ ಪದವಿ ತರಗತಿಗಳಿಗೆ 20 ಸಾವಿರ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ ಈ ವರ್ಷ 5 ಸಾವಿರ‌ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ಹೆಚ್ಚು ಸೀಟುಗಳನ್ನು ಕೊಡಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 1 ರಿಂದ ಮೊದಲ ವರ್ಷದ ಪದವಿ ತರಗತಿಗಳು ಆರಂಭವಾಗಲಿದೆ ಎಂದು ಹೇಮಂತ್ ಕುಮಾರ್ ಮಾಹಿತಿ ನೀಡಿದರು‌.

ಇದೇ ಭಾನುವಾರ ಕೆ-ಸೆಟ್ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಯ ‌12 ಕೇಂದ್ರಗಳಲ್ಲಿ ಸುಮಾರು 85 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕೆ ಎಲ್ಲಾ ರೀತಿಯ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋಧಕರ ನೇಮಕಾತಿ ಸರ್ಕಾರ ವಾಪಸ್ ಪಡೆದಿದ್ದು, ಪುನಃ ಆ ಹುದ್ದೆಗಳಿಗೆ ಅನುಮತಿ ನೀಡುವಂತೆ ಕೇಳಲಾಗುವುದು. ಜೊತೆಗೆ ನ್ಯಾಕ್ ಮಾನ್ಯತೆ ಪಡೆಯಲು ಎಲ್ಲಾ ರೀತಿಯ ಸಿದ್ದತೆ ನಡೆಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್ ಸಂಪೂರ್ಣ ಹಸಿರಾಗಿದೆ ಎಂದು ಕುಲಪತಿ‌ ಹೇಳಿದರು.

ಇದನ್ನೂ ಓದಿ: ನಾನು ನಾನು ಅನ್ನುವವರು ಯಾರೂ ಸಿಎಂ ಆಗುವುದಿಲ್ಲ: ಆರ್.ಅಶೋಕ್

Last Updated : Jul 23, 2021, 7:24 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.