ETV Bharat / state

ಸಮಸ್ಯೆಗಳ ಆಗರವಾದ ಮೈ.ವಿ.ವಿ : ವಿದ್ಯಾರ್ಥಿನಿಯರಿಗೆ ನಿತ್ಯ ನರಕಯಾತನೆ ಆರೋಪ - ಮೂಲ ಸೌರ್ಯಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಮಾನಸಗಂಗೋತ್ರಿಯ ಆವರಣದಲ್ಲಿರುವ ಬ್ಲಾಕ್ 1 ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದು, ಕಳಪೆ ಗುಣಮಟ್ಟದ ಆಹಾರ ಕೊಡ್ತಾರೆ, ಕುಡಿಯುವ ನೀರಿಲ್ಲ, ಕರೆಂಟ್ ಇಲ್ಲ. ನಮ್ಮ ಕಷ್ಟ ಕೇಳುವುದಕ್ಕೆ ಯಾರೂ ಬರ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿವಿಯಲ್ಲಿ ಮೂಲಭೂತ ಸಮಸ್ಯೆ
ಮೈಸೂರು ವಿವಿಯಲ್ಲಿ ಮೂಲಭೂತ ಸಮಸ್ಯೆ
author img

By

Published : May 16, 2022, 5:59 PM IST

Updated : May 16, 2022, 6:12 PM IST

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಂದ್ರೆ ಶಿಕ್ಷಣಕ್ಕೆ ಹೊಸ ಮೆರಗು ತಂದುಕೊಡುವ ವಿ.ವಿ. ಈ ಕಾರಣಕ್ಕೆ ಎಲ್ಲೆಲ್ಲಿಂದಲೋ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಸಾಕಷ್ಟು ಹಣ ಖರ್ಚು ಮಾಡಿಕೊಂಡು ಬರುತ್ತಾರೆ. ಆದರೆ ಇಲ್ಲಿನ ಮೂಲಸೌಕರ್ಯದ ಕೊರತೆಯಿಂದ ಅವರ ವಿದ್ಯಾರ್ಥಿ ಜೀವನದ ಭವಿಷ್ಯ ಕರಾಳವಾಗಿದೆ ಎಂಬ ಆರೋಪಗಳಿವೆ. ವಿದ್ಯಾರ್ಥಿನಿಲಯಗಳು ಈಗಲೋ ಆಗಲೋ ಬೀಳುವಂತಿವೆ. ಇಲ್ಲಿ ಕೊರತೆಗಳ ಆಗರ ಎದ್ದು ಕಾಣುತ್ತಿದ್ದು, ಮಹಿಳಾ ವಿದ್ಯಾರ್ಥಿನಿಲಯದ ವಿದ್ಯಾರ್ಥಿ‌ನಿಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಮಳೆ ಬಂದರೆ ವಿದ್ಯಾರ್ಥಿನಿಯರ ಗೋಳು ಕೇಳುವವರಿಲ್ಲ. ಮಳೆ ನೀರಿನ ನಡುವೆ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಹಳೆಯ ಕಟ್ಟಡದ ಛಾವಣಿಯಿಂದ ಮಳೆ ನೀರು ನಿರಂತರವಾಗಿ ಜಿನುಗುತ್ತದೆ. ಪರಿಣಾಮ ಅಲ್ಲೇ ನರಕಯಾತನೆ ಅನುಭವಿಸಿಕೊಂಡು ದಿನ ದೂಡುತ್ತಿದ್ದಾರೆ.

ಸಮಸ್ಯೆಗಳ ಆಗರವಾದ ಮೈ.ವಿ.ವಿ : ವಿದ್ಯಾರ್ಥಿನಿಯರಿಗೆ ನಿತ್ಯ ನರಕಯಾತನೆ ಆರೋಪ

ಮಾನಸಗಂಗೋತ್ರಿಯ ಆವರಣದಲ್ಲಿರುವ ಬ್ಲಾಕ್ 1 ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದು, ಕಳಪೆ ಗುಣಮಟ್ಟದ ಆಹಾರ ಕೊಡ್ತಾರೆ, ಕುಡಿಯುವ ನೀರಿಲ್ಲ, ಕರೆಂಟ್ ಇಲ್ಲ ನಮ್ಮ ಕಷ್ಟ ಕೇಳುವುದಕ್ಕೆ ಯಾರು ಬರ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಅಪಾಯ ಆಹ್ವಾನಿಸುತ್ತಿದ್ದರೂ ವಿವಿ ಕಣ್ಣುಮುಚ್ಚಿ ಕುಳಿತಿದೆ‌. ಎಷ್ಟೇ ಮನವಿ ಮಾಡಿದ್ರು ಮೈಸೂರು ವಿವಿ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಮೂಲಭೂತ ಸೌಕರ್ಯವನ್ನು ನಮಗೆ ಒದಗಿಸಲೇಬೇಕು ಎಂದು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಬಳಸಿದ್ದಕ್ಕೆ ಗದರಿಸಿದ ತಂದೆ: ಆತ್ಮಹತ್ಯೆ ಮಾಡಿಕೊಂಡ ಮುಂಗೋಪಿ ಮಗಳು

Last Updated : May 16, 2022, 6:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.