ETV Bharat / state

ಮೈಸೂರು ದರೋಡೆ ಕೇಸ್​.. ಏಳು ಜನರ ಹೆಡೆಮುರಿ ಕಟ್ಟಿದ ಖಾಕಿ ಪಡೆ - ಚಿನ್ನಾಭರಣ ದರೋಡೆ ಪ್ರಕರಣ,

ಮೈಸೂರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.

ಏಳು ಜನರ ಹೆಡೆಮುರಿ ಕಟ್ಟಿದ ಖಾಕಿ ಪಡೆ
ಏಳು ಜನರ ಹೆಡೆಮುರಿ ಕಟ್ಟಿದ ಖಾಕಿ ಪಡೆ
author img

By

Published : Sep 4, 2021, 2:10 PM IST

Updated : Sep 4, 2021, 2:17 PM IST

ಮೈಸೂರು : ನಗರದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿರುವ ವೃದ್ಧನ ಬಳಿ ಭಾರಿ ಪ್ರಮಾಣದ ಚಿನ್ನಾಭರಣ ಇರುವುದಾಗಿ ತಿಳಿದುಬಂದಿದೆ.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರತಿಕ್ರಿಯೆ

ನಗರದ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್​​ಗೆ ನುಗ್ಗಿ, ಚಿನ್ನಾಭರಣ ದೋಚಿ ಪರಾರಿಯಾಗುವ ವೇಳೆ 60 ವರ್ಷದ ವೃದ್ಧನೊಬ್ಬ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾನೆ ಎನ್ನಲಾಗ್ತಿದೆ. ಉಳಿದವರು ಒಡವೆಗಳನ್ನು ದೋಚಿದ್ದರೂ, ವೃದ್ಧನಷ್ಟು ದೋಚಲು ಸಾಧ್ಯವಾಗಿಲ್ಲ.

ಉತ್ತರ ಪ್ರದೇಶ ಮೂಲದ ವೃದ್ಧ ದರೋಡೆ ಪ್ರಕರಣದ 9 ನೇ ಆರೋಪಿಯಾಗಿದ್ದು, ಕೆಲ ವರ್ಷಗಳಿಂದ ಮುಂಬೈನಲ್ಲಿ ವಾಸವಿದ್ದ. ಮೈಸೂರಿನಲ್ಲಿ ದರೋಡೆ ಬಳಿಕ ಆತ ಮುಂಬೈನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಮೈಸೂರಿನ 8 ಮಂದಿ ಪೊಲೀಸರ ತಂಡ ಮುಂಬೈಗೆ ದೌಡಾಯಿಸಿದ್ದು, ಅಲ್ಲೇ ಬೀಡುಬಿಟ್ಟಿದೆ. ಮೊಬೈಲ್ ಟವರ್ ಲೊಕೇಷನ್ ಜಾಡು ಹಿಡಿದಿರುವ ಪೊಲೀಸರು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

20 ವರ್ಷದಿಂದಲೇ ಕಳ್ಳತನ

ಈ ವೃದ್ಧ 20 ವರ್ಷದವನಿರುವಾಗಲೇ ಕಳ್ಳತನಕ್ಕೆ ಇಳಿದಿದ್ದು, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿ 9 ಬಾರಿ ಜೈಲು ಸೇರಿ ಶಿಕ್ಷೆ ಅನುಭವಿಸಿದ್ದ. ಜೈಲಿಂದ ಹೊರ ಬಂದ ನಂತರವೂ ಆತ ತನ್ನ ಹಳೆಯ ಚಾಳಿ ಮುಂದುವರೆಸಿದ್ದಾನೆ.

ಮೈಸೂರಿನ ಮಹದೇವಪುರದಲ್ಲಿ ಚಿನ್ನಾಭರಣ ಅಂಗಡಿ ಹೊಂದಿರುವ ಮಹೇಂದ್ರ ಹೊರತುಪಡಿಸಿ ಉಳಿದ 8 ಮಂದಿ ದರೋಡೆಕೋರರು ಈ ವೃದ್ಧನಿಗೆ ಉತ್ತರ ಭಾರತದ ವಿವಿಧ ಜೈಲುಗಳಲ್ಲಿ ಪರಿಚಯವಾಗಿ ಸ್ನೇಹಿತರಾದವರು ಎನ್ನಲಾಗಿದೆ.

ಸಾಲ ತೀರಿಸುವ ಸಲುವಾಗಿ ದರೋಡೆ

ಜೆ.ಪಿ. ನಗರದ ರೈಲ್ವೆ ಗೇಟ್ ಬಳಿ ಆಭರಣ ಅಂಗಡಿ ಹೊಂದಿರುವ ಮಹೇಂದ್ರ, ಈ ಹಿಂದೆ ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ತಾನು ಮಾಡಿದ್ದ ಸಾಲ ತೀರಿಸಲು ಜೈಲಿನಲ್ಲಿ ಪರಿಚಯವಾದ ದರೋಡೆಕೋರರನ್ನು ಸಂಪರ್ಕಿಸಿ, ಅವರನ್ನು ಮೈಸೂರಿಗೆ ಕರೆಸಿಕೊಂಡು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಕದ್ದ ಚಿನ್ನವನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಮಹೇಂದ್ರ, ದೋಚಿದ ಆಭರಣಗಳನ್ನು ಮಾರಾಟ ಮಾಡುವ ಮುನ್ನವೇ ಅವನನ್ನೂ ಒಳಗೊಂಡಂತೆ 7 ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಪೊಲೀಸರು ಸುಮಾರು 1 ಕೆ.ಜಿ. ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಪ್ರತಿಕ್ರಿಯೆ

ಈ ಪ್ರಕರಣ ಸಂಬಂಧ ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದೇವೆ. ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಕೋರ್ಟ್​​ಗೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.‌ಚಂದ್ರಗುಪ್ತ ತಿಳಿಸಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಆಗಸ್ಟ್ 23 ರಂದು ನಗರದ ವಿದ್ಯಾರಣ್ಯಪುರಂ ಅಮೃತ್​ಗೋಲ್ಡ್ ಆ್ಯಂಡ್ ಸಿಲ್ವರ್ ಮಳಿಗೆಯಲ್ಲಿ ದರೋಡೆ ನಡೆದಿತ್ತು. ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚಿಸಿದ್ದು, ಐವರನ್ನು ಬಂಧಿಸಿದ್ದೇವೆ. ಬಂಧಿತರು ಜಮ್ಮುಕಾಶ್ಮೀರ, ಪಶ್ಚಿಮ ಬಂಗಾಳ, ಮುಂಬೈ, ರಾಜಸ್ಥಾನ ಮೂಲದವರಾಗಿದ್ದಾರೆ. ಇನ್ನೋರ್ವ ಆರೋಪಿ ಬಂಧನಕ್ಕೆ ಶೋಧಕಾರ್ಯ ಮುಂದುವರೆದಿದೆ ಎಂದರು.

Last Updated : Sep 4, 2021, 2:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.