ETV Bharat / state

ಮೈಸೂರು ರೈಲ್ವೆ ನಿಲ್ದಾಣಕ್ಕೆ 'ಅತ್ಯುತ್ತಮ ನಿರ್ವಹಣೆಯ ನಿಲ್ದಾಣ' ಪ್ರಶಸ್ತಿ ಗರಿ

ಸತತ ನಾಲ್ಕನೇ ಬಾರಿ ಮೈಸೂರು ರೈಲ್ವೆ ನಿಲ್ದಾಣ 'ಅತ್ಯುತ್ತಮ ನಿರ್ವಹಣೆಯ ನಿಲ್ದಾಣ' ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Mysore Railway Station
ಮೈಸೂರು ರೈಲ್ವೆ ನಿಲ್ದಾಣ
author img

By

Published : Oct 13, 2020, 8:21 PM IST

ಮೈಸೂರು: ನೈರುತ್ಯ ರೈಲ್ವೆಯು 65ನೇ ರೈಲ್ವೆ ವಾರ ಸಂಭ್ರಮಾಚರಣೆಯನ್ನು ಹುಬ್ಬಳ್ಳಿಯಲ್ಲಿ ಆಚರಿಸಿದ್ದು, ನೈರುತ್ಯ ರೈಲ್ವೆಯ ಪ್ರಮುಖ ನಿಲ್ದಾಣಗಳ ವಿಭಾಗದಲ್ಲಿ ಮೈಸೂರು ರೈಲ್ವೆ ನಿಲ್ದಾಣ 2019-20ನೇ ವರ್ಷದ ‘ಅತ್ಯುತ್ತಮ ನಿರ್ವಹಣೆಯ ನಿಲ್ದಾಣ’ ಎಂಬ ಪ್ರಶಸ್ತಿ ಪಡೆದಿದೆ.

ಇಂದು ಹುಬ್ಬಳ್ಳಿಯಲ್ಲಿ ನಡೆದ ನೈರುತ್ಯ ರೈಲ್ವೆಯ 65ನೇ ರೈಲ್ವೆ ವಾರ ಕಾರ್ಯಕ್ರಮದಲ್ಲಿ 2019-2020 ಸಾಲಿನ ರೈಲ್ವೆ ನಿಲ್ದಾಣಗಳಲ್ಲಿ ಮೈಸೂರು ರೈಲ್ವೆ ನಿಲ್ದಾಣ ಅತ್ಯುತ್ತಮ ನಿರ್ವಹಣೆಯ ನಿಲ್ದಾಣ ಎಂದು ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದು, ಇದು ಸತತವಾಗಿ 4ನೇ ಬಾರಿ ಮೈಸೂರು ನಿಲ್ದಾಣವು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

2019-20ನೇ ಸಾಲಿನಲ್ಲಿ ಕೈಗೊಂಡ ಸಮಗ್ರ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ಮೈಸೂರು ರೈಲ್ವೆ ನಿಲ್ದಾಣವು ಕಟ್ಟಡದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು ಸಾಕಷ್ಟು ಕಾಳಜಿಯೊಂದಿಗೆ ಅನೇಕ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಹೆಚ್ಚಿಸಿದ್ದು, ಮೈಸೂರು ವಿಭಾಗದ ಭದ್ರತಾ ವಿಭಾಗವು 2019-20ನೇ ಸಾಲಿನ ದಕ್ಷತೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.

ಮೈಸೂರಿನಲ್ಲಿ ಪ್ರಾಥಮಿಕ ರಿಪೇರಿಕಾರ್ಯ ನಿರ್ವಹಿಸಲ್ಪಡುವ ಮೈಸೂರು ಮತ್ತು ನಿಜಾಮುದ್ದೀನ್ (ನವದೆಹಲಿ) ನಡುವೆ ಚಲಿಸುವ ಪ್ರತಿಷ್ಠಿತ ಸ್ವರ್ಣಜಯಂತಿ ವಾರದ ಸೂಪರ್‌ಫಾಸ್ಟ್ ರೈಲನ್ನು 2019-20 ರ ವರ್ಷಕ್ಕೆ ನೈರುತ್ಯ ರೈಲ್ವೆಯಲ್ಲಿ 'ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್' ಎಂದು ಘೋಷಿಸಿದ್ದು , ಮೈಸೂರು ವಿಭಾಗಕ್ಕೆ ಸಿಕ್ಕ ಮತ್ತೊಂದು ಪ್ರಶಸ್ತಿಯಾಗಿದೆ.

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ಅವರು ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವರ 2019-20ರ ಅವಧಿಯಲ್ಲಿನ ಅಸಾಧಾರಣ ಕಾರ್ಯಗಳಿಗಾಗಿ ಅಭಿನಂದಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.