ETV Bharat / state

ಕಳ್ಳತನದ ಮಾಲು ಒಪ್ಪಿಸಿದ ಡಿಸಿಪಿಗೆ ಅರಿಶಿನ-ಕುಂಕುಮ ಕೊಟ್ಟು ಸತ್ಕಾರ

ಮೂರು ದಿನಗಳಲ್ಲಿ ಪ್ರಕರಣವೊಂದನ್ನು ಬೇಧಿಸಿ ಲಷ್ಕರ್, ಕೃಷ್ಣರಾಜ, ನರಸಿಂಹರಾಜ, ಮಂಡಿ‌ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಒಟ್ಟು 22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Police caught the robbers
ಕಳುವಾದ ಮಾಲು ಮಾಲೀಕರಿಗೆ ಒಪ್ಪಿಸಿದ ಪೊಲೀಸರು
author img

By

Published : Jan 1, 2021, 10:53 PM IST

ಮೈಸೂರು: ಮನೆ‌‌ ಬಾಗಿಲ ಮುಂದೆ ಪೊಲೀಸರು ಬಂದರೆ ಎಲ್ಲರಿಗೂ ಭಯ ಶುರುವಾಗುತ್ತದೆ. ಆದರೆ, ಹೊಸ ವರ್ಷದ ದಿವಸ ಪೊಲೀಸರು ಕದ ತಟ್ಟಿದ್ದಕ್ಕೆ ಮನೆಯವರ ಮುಖದಲ್ಲಿ ಆತಂಕದ ಬದಲಿಗೆ ಸಂಭ್ರಮ ಮನೆ ಮಾಡಿತ್ತು.

ಓದಿ: ಮಣ್ಣಿನ ಹಾವಿನ ಅಕ್ರಮ ಮಾರಾಟ ಯತ್ನ: ನಾಲ್ವರ ಬಂಧನ

ಚಿನ್ನಾಭರಣ ಕಳುವಾಗಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಮಾಲನ್ನು ವಾರಸುದಾರರಿಗೆ ಮರಳಿಸಿದರು. ಪೊಲೀಸರ ಕಾರ್ಯಕ್ಕೆ ಈ ಮೆಚ್ಚುಗೆ ವ್ಯಕ್ತಪಡಿಸಿ ಭಾವುಕರಾದ ಕುಟುಂಬಸ್ಥರು, ಡಿಸಿಪಿ ಗೀತಾ ಪ್ರಸನ್ನ ಅವರಿಗೆ ಅರಿಶಿನ-ಕುಂಕುಮ ನೀಡಿ ಕೃತಜ್ಞತೆ ಸಲ್ಲಿಸಿದರು.

Police caught the robbers
ಕಳುವಾದ ಮಾಲು ಮಾಲೀಕರಿಗೆ ಒಪ್ಪಿಸಿದ ಪೊಲೀಸರು

ಮೂರು ದಿನಗಳಲ್ಲಿ ಪ್ರಕರಣವೊಂದನ್ನು ಬೇಧಿಸಿ ಲಷ್ಕರ್, ಕೃಷ್ಣರಾಜ, ನರಸಿಂಹರಾಜ, ಮಂಡಿ‌ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಒಟ್ಟು 22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ. ಕಳುವಾದ ಮಾಲುಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.

Police caught the robbers
ಕಳ್ಳತನದ ಮಾಲು ವಶಕ್ಕೆ ಪಡೆದಿರುವ ಪೊಲೀಸರು

ಡಿಸಿಪಿ ಗೀತಾ ಪ್ರಸನ್ನ, ನರಸಿಂಹರಾಜ ಎಸಿಪಿ ಶಿವಶಂಕರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ನಡೆದಿತ್ತು. ಲಷ್ಕರ್ ಠಾಣೆಯ ಇನ್ಸ್​​​ಪೆಕ್ಟರ್ ಸುರೇಶ್ ಕುಮಾರ್, ಮಂಡಿ ಠಾಣೆ ಇನ್ಸ್​​ಪೆಕ್ಟರ್ ನಾರಾಯಣಸ್ವಾಮಿ, ಪಿಎಸ್ಐ ಧನಲಕ್ಷ್ಮಿ, ಶಬರೀಶ್ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.