ETV Bharat / state

ದ್ವಿಚಕ್ರ ವಾಹನ, ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ: 3 ಲಕ್ಷ ರೂ. ವಶ - ಮೈಸೂರು ಪೊಲೀಸರು

ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಅಶೋಕಪುರಂ ಪೊಲೀಸರು ಬಂಧಿಸಿ, ಆತನಿಂದ 3,70,000 ಮೌಲ್ಯದ 3 ದ್ವಿಚಕ್ರ ವಾಹನ ಹಾಗೂ 10 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

Mysore police
ಬಂಧನ
author img

By

Published : Oct 6, 2020, 5:15 PM IST

ಮೈಸೂರು: ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಅಶೋಕಪುರಂ ಪೊಲೀಸರು ಬಂಧಿಸಿದ್ದು, ಆತನಿಂದ 3 ಮೌಲ್ಯದ 3 ದ್ವಿಚಕ್ರ ವಾಹನ ಹಾಗೂ 10 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಪ್ರಸನ್ನ ಅಲಿಯಾಸ್ ಕುಳ್ಳ (24) ಎನ್ನಲಾಗಿದೆ. ಅಶೋಕಪುರಂ ಪೊಲೀಸರು ಗಸ್ತಿನಲ್ಲಿರುವಾಗ ಆರೋಪಿ ಜಯನಗರ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಮಾಸ್ಕ್ ಇಲ್ಲದೇ ಸ್ಕೂಟರ್​ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಈತನನ್ನು ತಡೆದಿದ್ದಾರೆ. ಆರೋಪಿ ಪ್ರಸನ್ನ ಪೊಲೀಸರು ತಡೆಯುತ್ತಿದ್ದಂತೆ ಸ್ಕೂಟರ್​ನಲ್ಲಿ ಯೂಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದು, ಹಿಂಬಾಲಿಸಿದ ಪೊಲೀಸರು ಈತನನ್ನು ಹಿಡಿದು ವಿಚಾರಣೆ ನಡೆಸಿದಾಗ ಈತ ಅಶೋಕಪುರಂ, ಸರಸ್ವತಿಪುರಂ ಮತ್ತು ಕೃಷ್ಣರಾಜ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಹಾಗೂ ಶ್ರೀರಾಂಪುರ, ಅರವಿಂದನಗರ, ಕೆಜಿ ಕೊಪ್ಪಲು, ಕುವೆಂಪು ನಗರದ ಮನೆಗಳಲ್ಲಿ ಮೊಬೈಲ್ ಫೋನ್​ಗಳನ್ನು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈತನಿಂದ 3,70,000 ಮೌಲ್ಯದ 3 ದ್ವಿಚಕ್ರ ವಾಹನ ಹಾಗೂ 10 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದು, ಈತನ ವಿರುದ್ಧ ಅಶೋಕಪುರಂ ಪೊಲೀಸ್​​​ ಠಾಣೆ, ಸರಸ್ವತಿಪುರಂ ಠಾಣೆ ಹಾಗೂ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.