ETV Bharat / state

ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ ಸಂಸ್ಥೆಗೆ 75ರ ಸಂಭ್ರಮ - ಈಟಿವಿ ಭಾರತ ಕನ್ನಡ

1937 ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ ಮೈಸೂರು ಲ್ಯಾಕ್ ಫ್ಯಾಕ್ಟರಿಗೆ 75 ವರ್ಷ ತುಂಬಿದೆ. ಎಷ್ಟೆಲ್ಲಾ ಆದಾಯ ತರುತ್ತಿದೆ ಎಂಬ ಸಮಗ್ರ ಮಾಹಿತಿಯ ಮೈಸೂರು ಪೇಯಿಂಟ್ ಅಂಡ್ ವಾರ್ನಿಷ್ ಲಿಮಿಟೆಡ್​ನ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Mysore Paints and Varnish ltd 75th year celebration
ಮೈಸೂರು ಲ್ಯಾಕ್ ಫ್ಯಾಕ್ಟರಿ
author img

By

Published : Nov 26, 2022, 6:27 PM IST

ಮೈಸೂರು: ದೇಶದ ಎಲ್ಲ ಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಮೈಸೂರು ಪೇಯಿಂಟ್ ಅಂಡ್ ವಾರ್ನಿಷ್ ಲಿಮಿಟೆಡ್ ಕಂಪನಿ ಈಗ ಅಮೃತ ಮಹೋತ್ಸವ ಸಂಭ್ರಮ. ಈ ಕಾರ್ಖಾನೆ ಬೆಳೆದುಬಂದ ದಾರಿ, ಎನೆಲ್ಲಾ ಬದಲಾವಣೆಗಳು, ಯಾವ ಯಾವ ದೇಶಗಳಿಗೆ ಇಂಕ್ ಅನ್ನ ಸರಬರಾಜು ಮಾಡುತ್ತಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ ಸಂಸ್ಥೆಗೆ 75ರ ಸಂಭ್ರಮ

ಸ್ವಾತಂತ್ರ್ಯ ಪೂರ್ವ ಅಂದರೆ 1937 ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಲ್ಯಾಕ್ ಫ್ಯಾಕ್ಟರಿ ಎಂಬ ನಾಮಾಂಕಿತದಿಂದ ಆರಂಭವಾಯಿತು. ಈ ಫ್ಯಾಕ್ಟರಿ 1947 ರಲ್ಲಿ ಸ್ವಾತಂತ್ರ್ಯ ಭಾರತದ ನಂತರ ಮೈಸೂರು ಲ್ಯಾಕ್ ಅಂಡ್ ಪೇಯಿಂಟಿಂಗ್ ಲಿಮಿಟೆಡ್ ಎಂದು ಮರುನಾಮಕರಣ ಗೊಂಡಿತು. ಈ ಸಮಯದಲ್ಲಿ ಸೀಲಿಂಗ್ ವ್ಯಾಕ್ಸ್ ಜೊತೆಗೆ ಬಣ್ಣದ ಉತ್ಪಾದನೆಯನ್ನ ಪ್ರಾರಂಭಿಸಿ ಸಾರ್ವಜನಿಕ ಷೇರುಗಳನ್ನು ಸಹ ಪಡೆಯಿತು.

ನಂತರ 1962 ನಡೆದ ದೇಶದ ಎಲ್ಲ ಸಾರ್ವತ್ರಿಕ ಚುನಾವಣೆಗಳಿಗೂ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುವ ಏಕೈಕ ಸರ್ಕಾರಿ ಕಾರ್ಖಾನೆಯಾಗಿದೆ. ಕಳೆದ 12 ವರ್ಷಗಳಿಂದಲೂ ಲಾಭದಲ್ಲಿ ನಡೆಯುತ್ತಿದೆ.

ಇದರ ಇತರ ಉತ್ಪನ್ನಗಳು: ಕೈಗಾರಿಕಾ ಲೇಪನ ಮತ್ತು ಸಂಯೋಜಿತ ಉತ್ಪನ್ನಗಳು ಕಂಪನಿಯ ಮತ್ತೊಂದು ಪ್ರಮುಖ ಉತ್ಪಾದಕ ವಸ್ತುಗಳಾಗಿದೆ. ಸದರಿ ಉತ್ಪನ್ನಗಳನ್ನು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಾದ ಭಾರತ್​ ಅರ್ಥ್​ ಮೂವರ್ಸ್​, ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​, ಸೌಥ್​ ವೆಸ್ಟರ್ನ್​ ರೈಲ್ವೆ, ಫೂಡ್​ ಟೆಕ್ನಾಲಜಿಕಲ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ ಹಾಗೂ ಕರ್ನಾಟಕ ಸರ್ಕಾರದ ರಾಜ್ಯ ಮಟ್ಟದ ಸಾರ್ವಜನಿಕ ಉದ್ಯಮಗಳಾದ ರಾಜ್ಯ ರಸ್ತೆ ಸಾರಿಗೆ ನಿಗಮ, ವಿದ್ಯುತ್ ನಿಗಮ, ಹಟ್ಟಿ ಗೋಲ್ಡ್ ಮೈನ್ಸ್, ತಮಿಳುನಾಡು ಸಾರ್ವಜನಿಕ ಉದ್ದಿಮೆಗಳು, ನಿಗಮಗಳು ಮತ್ತು ಇತರೇ ಖಾಸಗಿ ವಲಯದ ಕೈಗಾರಿಕೆಗಳಾದ ಜೆ.ಕೆ ಟೈಯರ್ಸ್​ ಉತ್ಪಾದಿಸುತ್ತದೆ.

ಈ ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ ಏನೆಂದರೆ ಬೇರೆ ದೇಶಗಳಿಗೂ ಅಳಿಸಲಾಗದ ಶಾಯಿಯನ್ನ ರಫ್ತು ಮಾಡುವ ಏಕೈಕ ಸಾರ್ವಜನಿಕ ಉದ್ಯಮ ಇದಾಗಿದೆ. 1978 ರಿಂದ ರಫ್ತು ಆರಂಭಿಸಿದ ಈ ಸಂಸ್ಥೆ ಇಂದು 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುವ ಏಕೈಕ ಸಾರ್ವಜನಿಕ ಉದ್ಯಮವಾಗಿದೆ.

ಸಂಸ್ಥೆ ಕರ್ನಾಟಕ ಸರ್ಕಾರದ ಶೇ.91.39 ಹಾಗೂ ಸಾರ್ವಜನಿಕರ 8.61 ಷೇರುಗಳ ಪಾಲುದಾರಿಕೆಯಲ್ಲಿ ಕಳೆದ 12 ವರ್ಷಗಳಿಂದ ಲಾಭದಲ್ಲೇ ನಡೆಯುತ್ತಿದೆ. 2021-22 ರಲ್ಲಿ 32 ಕೋಟಿ ರೂ. ವಹಿವಾಟು ನಡೆಸಿ 6.80 ಕೋಟಿ ರೂ. ಲಾಭ ಗಳಿಸಿದೆ.

ಇದನ್ನೂ ಓದಿ: ಒಂಬತ್ತು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿಸಿ 54 ರಾಕೆಟ್‌ ಯಶಸ್ವಿ ಉಡಾವಣೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.