ETV Bharat / state

3 ದಿನದ ಹಸುಗೂಸನ್ನೇ ಮಾರಿದ ತಾಯಿ: 7 ತಿಂಗಳ‌ ಬಳಿಕ ಪ್ರಕರಣ ಬೆಳಕಿಗೆ

ತನ್ನ 3 ದಿನದ ಗಂಡು ಮಗುವನ್ನು ಬೆಂಗಳೂರು ಮೂಲದ ರೋಜಾ ಎಂಬಾಕೆ ಹೆಚ್.ಡಿ.ಕೋಟೆ ಪಟ್ಟಣದ ಟೈಗರ್ ಬ್ಲಾಕ್​​ನ ಅಂಬರೀಶ್​​​ ಮತ್ತು ಮಧುಮಾಲತಿ ದಂಪತಿಗೆ ನೀಡಿದ್ದರು.

Mysore
3 ದಿನದ ಮಗು ಮಾರಾಟ ಪ್ರಕರಣ
author img

By

Published : Jun 11, 2021, 7:08 PM IST

ಮೈಸೂರು: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಇಬ್ಬರು ಮಹಿಳೆಯರ ನಡುವೆ ಮಗು ಮಾರಾಟ ವ್ಯವಹಾರ ನಡೆದಿದ್ದು, 7 ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ 3 ದಿನದ ಗಂಡು ಮಗುವನ್ನು ಬೆಂಗಳೂರು ಮೂಲದ ರೋಜಾ ಎಂಬಾಕೆ ಹೆಚ್.ಡಿ.ಕೋಟೆ ಪಟ್ಟಣದ ಟೈಗರ್ ಬ್ಲಾಕ್​​ನ ಅಂಬರೀಶ್​​​ ಮತ್ತು ಮಧುಮಾಲತಿ ಎಂಬ ದಂಪತಿಗೆ ನೀಡಿದ್ದರು.

ಮಧುಮಾಲತಿ ..

ಅಂಬರೀಶ್​​​ ಮತ್ತು ಮಧುಮಾಲತಿ ದಂಪತಿ 1.5 ಲಕ್ಷ ರೂ.ಗೆ 7 ತಿಂಗಳ ಹಿಂದೆ ಮಗುವನ್ನು ರೋಜಾ ಅವರಿಂದ ಕೊಂಡುಕೊಂಡಿದ್ದರು. ಈಗ ತಾಯಿ ನನಗೆ ನನ್ನ ಮಗು ಬೇಕೆಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಾರಾಟ ಮಾಡಿದ್ದು ಹೇಗೆ?:

ಹಕ್ಕಿಪಿಕ್ಕಿ ಜನಾಂಗದ ಅಂಬರೀಶ್ ಮತ್ತು ಮಧುಮಾಲತಿ ದಂಪತಿಗೆ ಮಕ್ಕಳಿರಲಿಲ್ಲ. ಇವರು ತಲೆ ಕೂದಲು ಬೆಳೆಯುವ ತೈಲವನ್ನು ಸಾಮಾಜಿಕ ಜಾಲತಾಣದಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಈ ವೇಳೆ ಬೆಂಗಳೂರಿನ ರೋಜಾಳ ಪರಿಚಯವಾಗಿತ್ತು.

ಗರ್ಭಿಣಿಯಾಗಿದ್ದ ರೋಜಾ ಸಾಮಾಜಿಕ ಜಾಲತಾಣದ ಮೂಲಕ ಮಾತನಾಡುತ್ತಿದ್ದರು. ಈ ವೇಳೆ ರೋಜಾ ನನಗೆ ಹೆಣ್ಣು ಮಗು ಬೇಕು. ಗಂಡು ಮಗು ಬೇಡ ಎಂದಿದ್ದರು. ಮಗು ಜನಿಸಿದ ಬಳಿಕ ಗಂಡು ಮಗು ಜನಿಸಿದೆ ಎಂದು ದೂರವಾಣಿ ಮೂಲಕ ಕರೆ ಮಾಡಿ ನಮ್ಮನ್ನು ಕರೆಸಿಕೊಂಡು ಹಣ ಪಡೆದು ಮಗುವನ್ನು ನೀಡಿದ್ದಳು.

ಮಗು ನೀಡಿದ 15 ದಿನಗಳಲ್ಲಿ ನನಗೆ ನನ್ನ ಮಗು ಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮಗುವನ್ನು ವಾಪಸ್​​ ಪಡೆದುಕೊಂಡು ಹೋಗಿದ್ದರು. ಬಳಿಕ ಮತ್ತೆ ಕರೆ ಮಾಡಿ ನನಗೆ ಮಗು ಸಾಕಲು ಶಕ್ತಿ ಇಲ್ಲ. ಗಂಡ ಕೂಡ ಇಲ್ಲ. ಆದ್ದರಿಂದ ಪುನಃ 15 ದಿನಗಳ ನಂತರ ನಮಗೆ ರೋಜಾ ಮಗುವನ್ನು ವಾಪಸ್ ಕೊಟ್ಟು ಹೋದಳು. ಈಗ ಮಗುವಿಗೆ 7 ತಿಂಗಳು ತುಂಬಿದ್ದು, ಮತ್ತೆ ಮಗು ಬೇಕೆಂದು ಬಂದಿದ್ದಾಳೆ ಎಂದು ಮಗುವನ್ನು ಪಡೆದಿದ್ದ ಮಧುಮಾಲತಿ ತಿಳಿಸಿದ್ದಾರೆ.

ಓದಿ: ಕಳ್ಳತನವಾಗಿದ್ದ ಮಗು ವರ್ಷದ ಬಳಿಕ ಸಿಕ್ಕರೂ ತಾಯಿ ಮಡಿಲು ಸೇರಲು ಕಾನೂನು ತೊಡಕು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.