ETV Bharat / state

ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಮೂರು ಪಕ್ಷಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಸಯ್ಯದ್ ಹಸ್ರತ್ ಉಲ್ಲಾ ಮತ್ತು ಗೋಪಿ, ಜೆಡಿಎಸ್​ನಿಂದ ಕೆ.ವಿ.ಶ್ರೀಧರ್ ಹಾಗೂ ಬಿಜೆಪಿಯಿಂದ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

separate nomination Submission by three parties
ಮೂರು ಪಕ್ಷಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ
author img

By

Published : Sep 6, 2022, 12:38 PM IST

ಮೈಸೂರು: ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಅತಂತ್ರ ಪಾಲಿಕೆಯ ಮೇಯರ್ ಸ್ಥಾನ ಯಾರ ಪಾಲಾಗುತ್ತದೆ ಎಂಬುದೀಗ ಕುತೂಹಲದ ಸಂಗತಿಯಾಗಿದೆ.

ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಮೇಯರ್ ಸ್ಥಾನಕ್ಕೆ ಸಯ್ಯದ್ ಹಸ್ರತ್ ಉಲ್ಲಾ ಹಾಗೂ ಗೋಪಿ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್​ನಿಂದ ಕೆ.ವಿ.ಶ್ರೀಧರ್ ಹಾಗೂ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ

ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಶೋಭಾ ಸುನಿಲ್, ಜೆಡಿಎಸ್​ನಿಂದ ರೇಷ್ಮಾ ಭಾನು ಹಾಗೂ ಬಿಜೆಪಿಯಿಂದ ರೂಪ ನಾಮಪತ್ರ ಸಲ್ಲಿಸಿದ್ದು, ಅತಂತ್ರ ಪಾಲಿಕೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಸದಸ್ಯರ ಬಲಾಬಲ ಹೀಗಿದೆ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 65 ಸದಸ್ಯರಿದ್ದಾರೆ. ಇದರಲ್ಲಿ ಸಂಸದರು, ಎಂಎಲ್​ಎ ಹಾಗೂ ಎಂಎಲ್​ಸಿ ಸೇರಿ ಒಟ್ಟು 76 ಮಂದಿ ಮತದಾರರಿದ್ದಾರೆ. ಬಿಜೆಪಿಯ 22 ಪಾಲಿಕೆ ಸದಸ್ಯರು ಹಾಗೂ ಸಂಸದ ಪ್ರತಾಪ್ ಸಿಂಹ, ಎಂಎಲ್​ಎ ರಾಮದಾಸ್ ಹಾಗೂ ನಾಗೇಂದ್ರ ಮತ್ತು ಎಂಎಲ್​ಸಿ ವಿಶ್ವನಾಥ್ ಸೇರಿ ಒಟ್ಟು 26 ಮಂದಿ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್​ನ 20 ಜನ ಪಾಲಿಕೆಯ ಸದಸ್ಯರು ಎಂಎಲ್​ಎ ತನ್ವಿರ್ ಸೇಠ್ ಹಾಗೂ ಎಂಎಲ್​ಸಿಗಳಾದ ಡಾ.ಬಿ.ತಿಮ್ಮಯ್ಯ ಮಧು ಜಿ ಮದೇಗೌಡ ಹಾಗೂ ದಿನೇಶ್ ಗುಳಿಗೌಡ ಸೇರಿ ಒಟ್ಟು 24 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ.

ಜೆಡಿಎಸ್​ನ 17 ಜನ ಪಾಲಿಕೆ ಸದಸ್ಯರು ಹಾಗೂ ಶಾಸಕ ಜಿ.ಟಿ.ದೇವೇಗೌಡ ಎಂಎಲ್‌ಸಿ ಮಂಜೇಗೌಡ ಮತ್ತು ಮರಿತಿಬ್ಬೇ ಗೌಡ ಸೇರಿ 20 ಮಂದಿ ಸದಸ್ಯರಿದ್ದು, ಇದರಲ್ಲಿ ಮರಿತಿಬ್ಬೇ ಗೌಡ ಯಾವ ಪಕ್ಷ ಬೆಂಬಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದರ ಜೊತೆಗೆ ಬಿಎಸ್ಪಿಯ ಒಬ್ಬ ಸದಸ್ಯೆ ಸೇರಿದಂತೆ ಐವರು ಪಕ್ಷೇತರರು ಇದ್ದು, ಇವರ ಬೆಂಬಲ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದು, ಯಾವುದೇ ಮೈತ್ರಿ ಏರ್ಪಡದಿದ್ದರೆ ಕಾಂಗ್ರೆಸ್ ಅಥವಾ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನ ಗೆಲ್ಲಬಹುದು. ಆದರೆ ಕೊನೆಯ ಕ್ಷಣದ ತಂತ್ರಗಾರಿಕೆಯಿಂದ ಫಲಿತಾಂಶ ಬದಲಾಗಲೂಬಹುದು.

ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಮೈತ್ರಿ ಬಗ್ಗೆ ಶಾಸಕರುಗಳು ಹೇಳಿದ್ದೇನು ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.