ETV Bharat / state

ಮಾನಸ ಗಂಗೋತ್ರಿಯ ಜಯಲಕ್ಷ್ಮಿ ವಿಲಾಸ ಅರಮನೆ 30 ಕೋಟಿ ವೆಚ್ಚದಲ್ಲಿ ನವೀಕರಣ: ಎನ್ ಕೆ. ಲೋಕನಾಥ್

author img

By ETV Bharat Karnataka Team

Published : Jan 4, 2024, 5:24 PM IST

ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ನವೀಕರಣಗೊಳಿಸಲು 30 ಕೋಟಿ ರೂ. ವೆಚ್ಚದ ಒಡಂಬಡಿಕೆಗೆ ಇಂದು ಶಾ ಫೌಂಡೇಶನ್ ಮತ್ತು ಡೆಕ್ಕನ್ ಹೆರಿಟೇಜ್ ಫೌಂಡೇಷನ್, ಯು.ಎಸ್ ಮಿಷನ್​ಗಳು ಸಹಿ ಹಾಕಿದವು.

Mysore University Vice Chancellor NK Loknath spoke.
ಒಡಂಬಡಿಕೆ ವೇಳೆ ಮೈಸೂರು ವಿವಿ ಉಪಕುಲಪತಿ ಎನ್ ಕೆ.ಲೋಕನಾಥ್ ಮಾತನಾಡಿದರು.

ಮೈಸೂರು: ಮಾನಸ ಗಂಗೋತ್ರಿ ಕ್ಯಾಂಪಸ್​ದಲ್ಲಿನ ಪಾರಂಪರಿಕ ಜಯಲಕ್ಷ್ಮಿ ವಿಲಾಸ ಅರಮನೆ ಶಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ಹಂತ ಹಂತವಾಗಿ 30 ಕೋಟಿ ರೂ ವೆಚ್ಚದಲ್ಲಿ ನವೀಕರಿಸಲಾಗುವುದು. ಈ ನವೀಕರಣಕ್ಕಾಗಿ ಇಂದು ಮೈಸೂರು ವಿಶ್ವವಿದ್ಯಾನಿಲಯ, ಶಾ ಫೌಂಡೇಶನ್ ಹಾಗೂ ಡೆಕ್ಕನ್ ಹೆರಿಟೇಜ್ ಫೌಂಡೇಷನ್​ವು ಒಡಂಬಡಿಕೆ ಮಾಡಿಕೊಂಡಿವೆ ಎಂದು ಮೈಸೂರು ವಿವಿ ಉಪಕುಲಪತಿ ಎನ್ ಕೆ.ಲೋಕನಾಥ್ ಮಾಹಿತಿ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ಅವರು, ಭಾರತದಲ್ಲಿ ಯುಎಸ್ ಮಿಷನ್ ಹಾಗೂ ಅನುಷ್ಠಾನ ಪಾಲುದಾರ ಮೈಸೂರು ವಿಶ್ವವಿದ್ಯಾನಿಲಯವೂ ತನ್ನ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ ಅಂದರೆ ಜಾನಪದ ವಸ್ತು ಸಂಗ್ರಹಾಲಯದ ನವೀಕರಣಕ್ಕೆ 30 ಕೋಟಿ ರೂಪಾಯಿ ಬೇಕಾಗಲಿದೆ.

ಪ್ರಾರಂಭಿಕವಾಗಿ 2.4 ಕೋಟಿ ವೆಚ್ಚದಲ್ಲಿ ಜಯಲಕ್ಷ್ಮಿ ವಿಲಾಸ ಅರಮನೆಯ ವೆಸ್ಟ್ ಸೈಡ್ ಮತ್ತು ಮ್ಯೂಸಿಯಂ ಅಭಿವೃದ್ಧಿ ಪಡಿಸಲು ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಕೆಲಸವನ್ನು ಮೈಸೂರು ವಿಶ್ವವಿದ್ಯಾನಿಲಯದ ಅನುಮತಿಯ ಮೇರೆಗೆ ಶಾ ಫೌಂಡೇಶನ್ ಮತ್ತು ಡೆಕ್ಕನ್ ಹೆರಿಟೇಜ್ ಫೌಂಡೇಷನ್, ಯು.ಎಸ್ ಮಿಷನ್ ನ ಅನುದಾನದಲ್ಲಿ ನವೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಜಯಲಕ್ಷ್ಮಿ ವಿಲಾಸ ಅರಮನೆಯ ಇತಿಹಾಸ: ಜಯಲಕ್ಷ್ಮಿ ವಿಲಾಸ ಅರಮನೆ ಪಾರಂಪರಿಕ ಕಟ್ಟಡವಾಗಿದ್ದು. ಇದನ್ನು1905 ರಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಅವರು ಹಿರಿಯ ಪುತ್ರಿ ಮಹಾರಾಜಕುಮಾರಿ ಜಯಲಕ್ಷ್ಮಿ ಅಮ್ಮಣ್ಣಿಯವರಿಗೆ ನಿರ್ಮಿಸಲಾಗಿತ್ತು. ಈ ಅರಮನೆ ಯುರೋಪಿಯನ್ ಶಾಸ್ತ್ರೀಯ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದು. ನಾಲ್ಕು ವಿಭಾಗಗಳನ್ನು ಹೊಂದಿದೆ.

1959ರಲ್ಲಿ ಕುವೆಂಪು ಅವರು ಉಪಕುಲಪತಿ ಆಗಿದ್ದ ಸಂದರ್ಭದಲ್ಲಿ ಈ ಅರಮನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ತೆಗೆದುಕೊಂಡು ಮಾನಸ ಗಂಗೋತ್ರಿ ಆವರಣವನ್ನಾಗಿ ಮಾಡಿದರು. ಬಳಿಕ 1969ರಲ್ಲಿ ಡಾ. ಜವರೇಗೌಡರು ಈ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ಜಾನಪದ ವಸ್ತು ಸಂಗ್ರಹಾಲಯವನ್ನಾಗಿ ಮಾಡಿದರು.

ಈಗ ಈ ಪಾರಂಪರಿಕ ಜಯಲಕ್ಷ್ಮಿ ವಿಲಾಸ ಅರಮನೆ ಶಿಥಿಲಾವಸ್ಥೆಗೆ ತಲುಪಿದೆ. ಇಲ್ಲಿನ 40 ಸಾವಿರ ಪುರಾತನ ತಾಳೆಗರಿ ಹಸ್ತ ಪ್ರತಿಗಳು ಹಾಗೂ ಅಮೂಲ್ಯ ಪುಸ್ತಕಗಳನ್ನು ಸಂಗ್ರಹಕ್ಕಾಗಿ ಈ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ನವೀಕರಿಸಲು ಯುಎಸ್ ಕಾನ್ಸೂಲೇಟ್​ ಜನರಲ್ ಚೆನ್ನೈ ನ ಓಆರ್ ಐ ಸಂಸ್ಥೆಯಿಂದ ನವೀಕರಣ ಮಾಡಲು ನಿರ್ಧರಿಸಿದೆ.

ಆರಂಭಿಕವಾಗಿ ಅರಮನೆಯ ವೆಸ್ಟ್ ಸೈಡ್ ಮತ್ತು ಮ್ಯೂಸಿಯಂಅನ್ನು ನವೀಕರಣ ಮಾಡಲು 2.4 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದ್ದು, ಹಂತ ಹಂತವಾಗಿ 5 ರಿಂದ 7 ವರ್ಷದಲ್ಲಿ ಸುಮಾರು 30 ಕೋಟಿ ವೆಚ್ಚದಲ್ಲಿ ಇಡೀ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ನವೀಕರಣ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ವಿವರಣೆ ನೀಡಿದರು.

ಪಾರಂಪರಿಕ ಇಲಾಖೆಯ ಒಪ್ಪಿಗೆ ಪಡೆದು ನವೀಕರಣ: ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ನಾವು ಮಾಡುತ್ತೇವೆ ಎಂದು ಹೇಳಿದ್ದರು. ಅದರೆ ಅವರು ಕೆಲಸ ಶುರು ಮಾಡಲಿಲ್ಲ. ಆಗ ನಾವು ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಮೂಲಕ ನಮ್ಮ ಹಳೆಯ ವಿದ್ಯಾರ್ಥಿಗಳ ಕಡೆಯಿಂದ ಪ್ರಯತ್ನ ಮಾಡಿದೆವು. ಇದರ ಪ್ರಯತ್ನದ ಫಲವಾಗಿ ಶಾ ಫೌಂಡೇಶನ್ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯ ಮೂರು ನವೀಕರಣ ಕೆಲಸವನ್ನು ಮಾಡಲಿದೆ.

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಜಯಲಕ್ಷ್ಮಿ ವಿಲಾಸ ಅರಮನೆ ಮಾಡಲಾಗುವುದು. ಇದರ ಸಂಪೂರ್ಣ ನವೀಕರಣ ಮಾಡಲು 5 ರಿಂದ 7 ವರ್ಷ ಬೇಕು. ಹಳೆಯ ಮತ್ತು ಪಾರಂಪರಿಕ ಕಟ್ಟಡವಾದ್ದರಿಂದ ಪಾರಂಪರಿಕ ಇಲಾಖೆಯ ಒಪ್ಪಿಗೆ ಪಡೆದು ನವೀಕರಣ ಮಾಡಲಾಗುವುದು ಎಂದು ವಿವರಿಸಿದರು.

ಇದನ್ನೂಓದಿ:ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2.90 ಕೋಟಿ ಹಣ: 5 ದೇಶಗಳ ಕರೆನ್ಸಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.