ಮೈಸೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎರಡು ಪುರಸಭೆ ಕಾಂಗ್ರೆಸ್-ಜೆಡಿಎಸ್ ಪಾಲಾದರೆ, ಇತ್ತ ನಂಜನಗೂಡು ನಗರಸಭೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆದಿದೆ.
ಬನ್ನೂರು ಪುರಸಭೆ, 23 ವಾರ್ಡ್ :
- ಜೆಡಿಎಸ್-12
- ಕಾಂಗ್ರೆಸ್-7
- ಬಿಜೆಪಿ-2
- ಪಕ್ಷೇತರರು-2
ಕೆಆರ್ನಗರ ಪುರಸಭೆ, 23 ವಾರ್ಡ್
- ಕಾಂಗ್ರೆಸ್-14
- ಜೆಡಿಎಸ್-8
- ಬಿಜೆಪಿ-1
ನಂಜನಗೂಡು ನಗರಸಭೆ, 31 ವಾರ್ಡ್
- ಬಿಜೆಪಿ-15
- ಕಾಂಗ್ರೆಸ್-10
- ಜೆಡಿಎಸ್-3
- ಪಕ್ಷೇತರರು-3
ನಂಜನಗೂಡು ನಗರಸಭೆಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಪಕ್ಷೇತರರನ್ನು ತಮ್ಮತ್ತ ಸೆಳೆದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ. ಇನ್ನುಳಿದಂತೆ ಬನ್ನೂರಿನಲ್ಲಿ ಜೆಡಿಎಸ್ ಹಾಗೂ ಕೆಆರ್ನಗರದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ದೊರೆತಿದೆ.