ETV Bharat / state

ವೈಭವದ ದಸರಾಕ್ಕೆ ಅದ್ಧೂರಿ ತೆರೆ : ಮರಳಿ ಸಹಜ ಸ್ಥಿತಿಯತ್ತ ಅರಮನೆ ನಗರಿ - ತೆರೆ ಕಂಡ ದಸರಾ

ಕಳೆದ ಕೆಲ ವಾರಗಳಿಂದ ದಸರಾ ಪ್ರಯುಕ್ತ ಗಿಜುಗುಡುತ್ತಿದ್ದ ಅರಮನೆ ನಗರಿ ಮೈಸೂರು ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ನಗರದಲ್ಲಿ ಸ್ವಚ್ಚತೆಯ ಕಾರ್ಯ ಭರದಿಂದ ಸಾಗಿದೆ.

ಮೈಸೂರು
author img

By

Published : Oct 9, 2019, 2:15 PM IST

ಮೈಸೂರು: ದಸರಾ ಆಚರಣೆ ಮುಕ್ತಾಯವಾದ ಬೆನ್ನಲ್ಲೇ ಕಳೆದ ಹತ್ತು ದಿನಗಳಿಂದ ಗಿಜುಗುಡುತ್ತಿದ್ದ ಮೈಸೂರು ಮಹಾನಗರ ಸಹಜ ಸ್ಥಿತಿಗೆ ಮರಳುತ್ತಿದೆ.

ಸಹಜ ಸ್ಥಿತಿಯತ್ತ ಅರಮನೆ ನಗರಿ

ನವರಾತ್ರಿ ಆಚರಣೆ ಹಿನ್ನೆಲೆ ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಸಾಕಷ್ಟು ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದರು. ನಿನ್ನೆ ರಾತ್ರಿ ವಿಜಯದಶಮಿ ಆಚರಣೆ ಸಮಾಪ್ತಿಯಾಗಿದ್ದು, ವೈಭವದ ದಸರಾ ವೀಕ್ಷಿಸಿ ಪ್ರವಾಸಿಗರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.

ನಿಗದಿತ ಜನಸಂಖ್ಯೆಗಿಂತ ಐದಾರು ಪಟ್ಟು ಹೆಚ್ಚು ಜನರನ್ನು ಈ ಹತ್ತು ದಿನ ಕಂಡ ಮೈಸೂರು ಮಹಾನಗರ ವಿಪರೀತ ಸಂಚಾರ ದಟ್ಟಣೆ, ಸ್ವಚ್ಛತೆಯಲ್ಲಿ ಅವ್ಯವಸ್ಥೆ, ದರ ಏರಿಕೆ ಇತ್ಯಾದಿ ಕಾರಣಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ನವರಾತ್ರಿ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಹೆಚ್ಚಳವಾಗಿದ್ದ ಬೆಲೆಗಳು ಕಡಿಮೆಯಾಗಿವೆ. ಆಟೋಗಳು, ಹೋಟೆಲ್​ಗಳ ಆಹಾರ ದರ ಕಡಿಮೆಯಾಗಿದೆ. ತುಂಬಿ ತುಳುಕುತ್ತಿದ್ದ ಮೈಸೂರು ನಗರದ ಬಹುತೇಕ ಮಾರ್ಗಗಳು ಹಾಗೂ ವೃತ್ತಗಳು ಇದೀಗ ಸಾಕಷ್ಟು ನಿರಾಳವಾಗಿವೆ.

ಒಟ್ಟಾರೆ, ಮೈಸೂರು ಮಹಾನಗರ ಬಹುತೇಕ ಸಹಜ ಸ್ಥಿತಿಗೆ ಮರಳಿದ್ದು, ಸ್ವಚ್ಛತೆ ಕಾರ್ಯ ಕೂಡ ಭರದಿಂದ ಸಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ನಾಗರಿಕರಿಂದ ಉಂಟಾಗುತ್ತಿದ್ದ ಸಮಸ್ಯೆ ಹಾಗೂ ಸ್ವಚ್ಛತೆ ನಿಭಾಯಿಸುವಲ್ಲಿ ಆಗಿದ್ದ ಹಿನ್ನಡೆಯನ್ನು ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಸರಿಪಡಿಸುವ ಪ್ರಯತ್ನ ಆರಂಭಿಸಿದೆ.

Intro:newsBody:ಮರಳಿ ಸಹಜ ಸ್ಥಿತಿಯತ್ತ ಮೈಸೂರು ಮಹಾನಗರ

ಮೈಸೂರು: ದಸರಾ ಆಚರಣೆ ಮುಕ್ತಾಯವಾದ ಬೆನ್ನಲ್ಲೇ ಕಳೆದ ಹತ್ತು ದಿನಗಳಿಂದ ಗಿಜಿಗುಡುತ್ತಿದ್ದ ಮೈಸೂರು ಮಹಾನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ.
ನವರಾತ್ರಿ ಆಚರಣೆ ಹಿನ್ನೆಲೆ ರಾಜ್ಯದ ವಿವಿಧ ಭಾಗದ ರಾಷ್ಟ್ರದ ವಿವಿಧ ಭಾಗ ಮಾತ್ರವಲ್ಲದೆ ಅನ್ಯದೇಶಗಳು ಸಾಕಷ್ಟು ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದರು. ನಿನ್ನೆ ರಾತ್ರಿ ವಿಜಯದಶಮಿ ಆಚರಣೆ ಸಮಾಪ್ತಿ ಯಾಗಿದ್ದು, ಅರಮನೆ ಮುಂಭಾಗ ಸ್ತಬ್ಧಚಿತ್ರಗಳ ಮೆರವಣಿಗೆ ವೀಕ್ಷಿಸಿದರು ಅಂಬಾರಿ ದರ್ಶನ ಪಡೆದ ಲಕ್ಷಾಂತರ ಮಂದಿ ನಿನ್ನೆ ರಾತ್ರಿ ಹಾಗೂ ಹಿಂದುಗಳಿಗೆ ತಂತಮ್ಮ ತಾಣಗಳತ್ತ ಪ್ರಯಾಣ ಬೆಳೆಸಿದ್ದಾರೆ.
ನಿಗದಿತ ಜನಸಂಖ್ಯೆಗಿಂತ ಐದಾರು ಪಟ್ಟು ಹೆಚ್ಚು ಜನರನ್ನು ಈ ಹತ್ತು ದಿನ ಕಂಡ ಮೈಸೂರು ಮಹಾನಗರ ವಿಪರೀತ ಸಂಚಾರ ದಟ್ಟಣೆ, ಸ್ವಚ್ಛತೆಯಲ್ಲಿ ಅವ್ಯವಸ್ಥೆ, ದರ ಏರಿಕೆ ಇತ್ಯಾದಿ ಕಾರಣಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಈಗ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ನವರಾತ್ರಿ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಹೆಚ್ಚಳವಾಗಿದ್ದು ಬೆಲೆಗಳು ಕಡಿಮೆಯಾಗಿವೆ. ಆಟೋಗಳ ಹೋಟೆಲ್ಗಳ ಆಹಾರದ ದರ ಕಡಿಮೆಯಾಗಿದೆ.
ತುಂಬಿತುಳುಕುತ್ತಿದ್ದ ಮೈಸೂರು ನಗರದ ಬಹುತೇಕ ಮಾರ್ಗಗಳು ಹಾಗೂ ವೃತ್ತಗಳು ಮತ್ತು ಪ್ರದೇಶಗಳು ಇದೀಗ ಸಾಕಷ್ಟು ನಿರಾಳವಾಗಿದೆ.
ಮೈಸೂರು ಅರಮನೆ ಸುತ್ತ ಮುತ್ತ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿ ರಾವ್ ರಸ್ತೆ, ಬಂಬೂ ಭಜಾರ್ ರಸ್ತೆ, ಬನ್ನಿ ಮಂಟಪ ವೃತ್ತ ಸೇರಿದಂತೆ ಮೈಸೂರು ನಗರದ ಬಹುತೇಕ ಭಾಗದ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದವು. ಇದೀಗ ಪರಿಸ್ಥಿತಿ ನಿರಾಳವಾಗಿದೆ.
ಸಾಮಾನ್ಯ ದಿನಗಳಿಗಿಂತ ಹೆಚ್ಚು ಮೈಸೂರನ್ನ ಆಕರ್ಷಣೆ ಗೊಳಿಸಲು ಎಲ್ಲೆಡೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಇದೀಗ ಅವುಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಲಿದೆ.
ಒಟ್ಟಾರೆ ಮೈಸೂರು ಮಹಾನಗರ ಬಹುತೇಕ ಸಹಜ ಸ್ಥಿತಿಗೆ ಮರಳಿದ್ದು ಸ್ವಚ್ಛತೆ ಕಾರ್ಯ ಕೂಡ ಭರದಿಂದ ಸಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ನಾಗರಿಕರಿಂದ ಉಂಟಾಗುತ್ತಿದ್ದ ಸಮಸ್ಯೆ ಹಾಗೂ ಸ್ವಚ್ಛತೆ ನಿಭಾಯಿಸುವಲ್ಲಿ ಆಗಿದ್ದ ಹಿನ್ನಡೆಯನ್ನು ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಸರಿಪಡಿಸುವ ಪ್ರಯತ್ನ ಆರಂಭಿಸಿದ್ದಾರೆ.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.