ಮೈಸೂರು: ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ಮೈಸೂರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರದಿಂದ ಇಡೀ ಮೈಸೂರನ್ನು ಝಗಮಗಿಸುವಂತೆ ಮಾಡಲಾಗಿತ್ತು. ಇದು ದಿನಕ್ಕೆ ಒಂದು ಲಕ್ಷ ರೂಪಾಯಿಯಂತೆ ಕರೆಂಟ್ ಬಿಲ್ ಬಂದಿದ್ದು. ಒಟ್ಟು 21 ದಿನಕ್ಕೆ 21 ಲಕ್ಷ ರೂಪಾಯಿ ವಿದ್ಯುತ್ ವೆಚ್ಚವಾಗಿದೆ. ಇದು ಎಲ್ಲಾ ರಸ್ತೆಗಳು, ವೃತ್ತಗಳು, ಹಲವು ಕಲಾಕೃತಿಗಳ ದೀಪಾಲಂಕಾರ ಸೇರಿದಂತೆ ನಗರದ ದೀಪಾಲಂಕಾರಕ್ಕೆ ತಗುಲಿದೆ ಒಟ್ಟು ಖರ್ಚಾಗಿದೆ.
ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಟ್ಟು 1.45 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದ್ದು. ಈ ದೀಪಾಲಂಕಾರ ಹಲವು ಖಾಸಗಿ ಕಂಪನಿಗಳು ಸಹ ಪ್ರಾಯೋಜಕತ್ವ ಹೊಂದಿದೆ. ವಿವಿಧ ಖಾಸಗಿ ಕಂಪನಿಗಳ ಪ್ರಾಯೋಜಕತ್ವದಿಂದ ಸುಮಾರು 80 ಲಕ್ಷ ರೂಪಾಯಿಗಳು ಬಂದಿದೆ.
ಸತತ 21 ದಿನಗಳ ಝಗಮಗಿಸಿದ ದೀಪಾಲಂಕಾರ: ದಸರಾ ಹಿನ್ನೆಲೆ ನಗರದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರ ಸತತ 21 ದಿನಗಳ ಕಾಲ ರಾತ್ರಿ 7 ಗಂಟೆಯಿಂದ 11 ಗಂಟೆಯವರೆಗೆ ಇರುತ್ತಿತ್ತು. ಈ ದೀಪಾಲಂಕಾರವನ್ನು ನೋಡಲು ಪ್ರತಿನಿತ್ಯ ನಿರೀಕ್ಷೆಗೂ ಮೀರಿದ ಜನ ಸಾಗರವೇ ಹರಿದು ಬರುತ್ತಿತ್ತು. ದಸರಾ ಜಂಬೂಸವಾರಿ ಬಳಿಕ ನ.4 ರವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ಹೇಳಿದ್ದ ಸೆಸ್ಕ್ ಅಧಿಕಾರಿಗಳು, ವಾರಾಂತ್ಯ ಭಾನುವಾರವಾಗಿದ್ದರಿಂದ ನವಂಬರ್ 5 ರವರೆಗೆ ದೀಪಾಲಂಕಾರವನ್ನು ವಿಸ್ತರಿಸಿದ್ದರು.
ಈ ದೀಪಾಲಂಕಾರವನ್ನು ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳು ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಮಾಡಲಾಗಿತ್ತು. ಒಟ್ಟು 6.15 ಕೋಟಿ ಅಂದಾಜು ವೆಚ್ಚವಾಗಿದ್ದು, ಸರ್ಕಾರಿ ಗ್ಯಾರಂಟಿ ಯೋಜನೆಗಳು, ಮೈಸೂರು ಮಹಾರಾಜರು, ಜಂಬೂಸವಾರಿ, ತಾಯಿ ಚಾಮುಂಡೇಶ್ವರಿ ಸೇರಿದಂತೆ ನಾನಾ ಕಲಾಕೃತಿಗಳನ್ನು ನಗರದ ಹಲವು ಕಡೆ ಮಾಡಲಾಗಿತ್ತು.
ಮುಂದಿನ ದಸರಾಗೆ ವೆಚ್ಚ ಕಡಿಮೆ ಮಾಡುವ ಗುರಿ: ಈ ದೀಪಾಲಂಕಾರದ ಹೊರೆಯನ್ನು ಮುಂದಿನ ದಿನಗಳಲ್ಲಿ ಬಾರಿ ಪ್ರಮಾಣದಲ್ಲಿ ಕಡಿಮೆ ಮಾಡಲು ಸೆಸ್ಕ್ ಕಡಿಮೆ ವ್ಯಾಟ್ಸ್ ಸಾಮರ್ಥ್ಯದ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲು ನಿರ್ಧರಿಸಿದೆ. ಇತ್ತೀಚಿನ ವರ್ಷಗಳಲ್ಲಿ 9 ವ್ಯಾಟ್ಗಳ ಬಲ್ಬ್ ಬಳಸಲಾಗುತ್ತಿದ್ದು. ರಾಜ ಮಾರ್ಗದಲ್ಲಿ 3 ವ್ಯಾಟ್ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿತ್ತು. ಕಡಿಮೆ ವ್ಯಾಟ್ಸ್ನ ಎಲ್ಇಡಿ ಬಲ್ಬ್ಗಳ ಬಳಕೆಯಿಂದ ಶೇಖಡಾ 50 ರಷ್ಟು ವೆಚ್ಚ ಕಡಿಮೆಯಾಗಲಿದ್ದು. ಇನ್ನೂ 3 ವ್ಯಾಟ್ ಕಡಿಮೆ ವಿದ್ಯುತ್ ಬಲ್ಬ್ಗಳನ್ನು ಮುಂದಿನ ಬಾರಿ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಸುನೀಲ್ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು: ಸ್ಟ್ರಾಂಗ್ ರೂಂ ಸೇರಿದ ರತ್ನಖಚಿತ ಸಿಂಹಾಸನದ ಬಿಡಿಭಾಗಗಳು