ETV Bharat / state

ಮೈಸೂರು ದಸರಾ - 2023 : ಈ ಬಾರಿಯ ನಾಡಹಬ್ಬದ ಆಚರಣೆಯ ಸಂಪೂರ್ಣ ಮಾಹಿತಿ - ವಿಶ್ವವಿಖ್ಯಾತ ಮೈಸೂರು ದಸರಾ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಕಲ ಸಿದ್ಧತೆ ನಡೆಯುತ್ತಿದೆ.

mysore-dussehra-2023-jamboosawari-procession-starts-on-meena-lagna
ಮೈಸೂರು ದಸರಾ - 2023 : ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ
author img

By ETV Bharat Karnataka Team

Published : Sep 16, 2023, 3:51 PM IST

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆ, ನಂದಿ ಧ್ವಜಕ್ಕೆ ಪೂಜೆ ಹಾಗೂ ಗಣ್ಯರಿಂದ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುವ ಸಮಯವನ್ನು ನಿಗದಿಪಡಿಸಲಾಗಿದೆ. ಮೈಸೂರು ಅರಮನೆ, ಒಂಟಿಕೊಪ್ಪಲು ಹಾಗೂ ಮೇಲುಕೋಟೆ ಪಂಚಾಂಗದ ಆಧಾರದಲ್ಲಿ ಕಾರ್ಯಕ್ರಮಗಳ ಸಮಯವನ್ನು ನಿಶ್ಚಯಿಸಲಾಗಿದೆ.

ಅಕ್ಟೋಬರ್ 15ರ ಭಾನುವಾರ ಬೆಳಗ್ಗೆ 10:15ರಿಂದ 10:36ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅನಂತರ 9 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ನಾದಬ್ರಹ್ಮ ಖ್ಯಾತಿಯ ಹಂಸಲೇಖ ಅವರು ದಸರಾ ಉದ್ಘಾಟನೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಅಕ್ಟೋಬರ್ 23ರಂದು ಆಯುಧ ಪೂಜೆಯ ಕೆಲಸಗಳು ನಡೆಯಲಿದ್ದು, ಅಕ್ಟೋಬರ್ 24ರ ಮಂಗಳವಾರ ವಿಜಯದಶಮಿ ದಿನ ಮಧ್ಯಾಹ್ನ 1:46ರಿಂದ 02:08 ನಿಮಿಷಗಳವರೆಗಿನ ಮಕರ ಲಗ್ನದಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜಕ್ಕೆ ಪೂಜೆ ನಡೆಯಲಿದೆ. ಬಳಿಕ ದಸರಾ ಮೆರವಣಿಗೆ ಆರಂಭವಾಗಲಿದೆ. ಸಂಜೆ 4:40ರಿಂದ 5ಗಂಟೆಯ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಜಂಬೂಸವಾರಿ ಸಮಯ ಸಂಜೆ ಬಂದಿರುವುದು ವಿಶೇಷವಾಗಿದೆ. ಅಕ್ಟೋಬರ್ 26ರಂದು ಗುರುವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ರಥೋತ್ಸವ ಜರುಗಲಿದೆ.

ಈಗಾಗಲೇ ಸೆಪ್ಟೆಂಬರ್ 1ರ ತುಲಾ ಲಗ್ನದಲ್ಲಿ ವೀರನಹೊಸಳ್ಳಿಯಿಂದ ಗಜಪಡೆ ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದೆ. ಸೆಪ್ಟೆಂಬರ್ 5ರಂದು ಅಭಿಜಿನ್ ಲಗ್ನದಲ್ಲಿ ಅರಮನೆ ಪ್ರವೇಶ ಮಾಡಲಾಗಿದೆ. ಅಕ್ಟೋಬರ್ 26ರ ಗುರುವಾರ 10:40ರಿಂದ 11ಗಂಟೆವರೆಗಿನ ಶುಭ ಧನುರ್​ ಲಗ್ನದಲ್ಲಿ, ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ 14 ಆನೆಗಳಿಗೆ ಪೂಜೆ ನಡೆಯಲಿದೆ. ಬಳಿಕ ಆನೆಗಳು ತಮ್ಮ ಶಿಬಿರಗಳಿಗೆ ಮರಳಲಿವೆ.

ಮೈಸೂರು ದಸರಾವನ್ನು ಬಹು ಅದ್ಧೂರಿಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಜನರು ದಸರಾಗೆ ಆಗಮಿಸುತ್ತಾರೆ. ದಸರಾ ಸಂದರ್ಭ ಅರಮನೆ ನಗರಿ ಮೈಸೂರು ಮದುಮಗಳಂತೆ ಸಿಂಗಾರಗೊಂಡಿರುತ್ತದೆ. ಈ ಸಂಬಂಧ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಸಿದ್ಧವಾದ 12 ಲಕ್ಷ ಮೌಲ್ಯದ ಅಮೆರಿಕನ್ ಡೈಮಂಡ್ ಗಣಪತಿ.. ಈಗ ಬೆಂಗಳೂರಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.